ಪಾತ್ರೆ ತೊಳೆಯುತ್ತಿದ್ದ ಯುವತಿ ಮಿಸ್ ಇಂಡಿಯಾ 2020ರ ರನ್ನರ್ ಅಪ್..!

ಕಠಿಣ ಶ್ರಮದಿಂದ ಯಾರು ಏನ್ ಬೇಕಾದರೂ ಆಗಬಹುದು ಎನ್ನುವುದಕ್ಕೆ ಇಲ್ಲೊಂದು ಪ್ರತ್ಯಕ್ಷ ಸಾಕ್ಷಿ ಇದೆ. ಆಟೋ ಚಾಲಕನ ಮಗಳು ಮಾನ್ಯಾ ಸಿಂಗ್ ಮುಂಬೈನಲ್ಲಿ ಫೆಮಿನಾ ಮಿಸ್ ಇಂಡಿಯಾ 2020ರ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾಳೆ. ಈಕೆಯ ಹಿನ್ನೆಲೆ ಕೇಳಿದ್ರೆ ನಿಜಕ್ಕೂ ಜೀವನದಲ್ಲಿ ಜಿಗುಪ್ಸೆ ಹೊಂದಿದವರಿಗೆ ಸ್ಪೂರ್ತಿಯಾಗೋದ್ರಲ್ಲಿ ಡೌಟೇ ಇಲ್ಲ.

ಅಷ್ಟಕ್ಕೂ ಮಾನ್ಯಾಳ ನೈಜ್ಯ ಕಥೆ ಕೇಳಿದ್ರೆ ಕಣ್ಣಂಚಲ್ಲಿ ನೀರು ತುಂಬಿಕೊಳ್ಳುತ್ತದೆ. ಉತ್ತರ ಪ್ರದೇಶ ಮೂಲದ ಮಾನ್ಯ ಸಿಂಗ್ ಬಾಲ್ಯದ ದಿನಗಳನ್ನು ಕಷ್ಟದಲ್ಲಿಯೇ ಕಳೆದಿದ್ದಳು. ಒಪ್ಪೊತ್ತಿನ ಊಟ, ನಿದ್ರೆ ಇಲ್ಲದ ದಿನಗಳನ್ನು ಅವರು ಕಳೆದಿದ್ದಾರೆ.

14ನೇ ವರ್ಷಕ್ಕೆ ಮನೆ ಬಿಟ್ಟು ಹೋದ ಮಾನ್ಯಾ ಕಷ್ಟದ ಕೆಲಸವನ್ನೆಲ್ಲ ಮೀರಿ ಬಂದಿದ್ದಾಳೆ. ಸಂಜೆಯಾದರೆ ಮನೆ ಮನೆ ಪಾತ್ರ ತೊಳೆದು ರಾತ್ರಿ ಕಾಲ್ ಸೆಂಟರ್ ಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸಿದ್ದಾಳೆ.

ರನ್ನರ್ ಅಪ್ ಆದ ಬಳಿಕ ಮಾತನಾಡಿದ ಅವರು, “ ನನ್ನ ಕಣ್ಣೀರು, ರಕ್ತ, ಬೆವರು ನನ್ನ ಕನಸನ್ನು ನನಸು ಮಾಡಿತು. ರಿಕ್ಷಾ ಚಾಲಕನ ಮಗಳಾಗಿ ನನಗೆ ಶಾಲೆಗೆ ಹೋಗುವ ಬದಲು ಚಿಕ್ಕ ವಯಸ್ಸಿನಲ್ಲಿಯೇ ದುಡಿಯಬೇಕಾಯ್ತು “ ಎಂದಿದ್ದಾರೆ.

ಪುಸ್ತಕಗಳಿಗಾಗಿ ನಾನು ಹಾತೊರೆಯುತ್ತಿದ್ದೆ, ಆದರೆ ನನ್ನ ಅದೃಷ್ಟ ಚೆನ್ನಾಗಿರಲಿಲ್ಲ. ನನ್ನಮ್ಮನಲ್ಲಿದ್ದ ಸಸ್ವಲ್ಪ ಆಭರಣ ಅಡವಿಟ್ಟು ನನ್ನ ಪರೀಕ್ಷೆ ಶುಲ್ಕ ಕಟ್ಟಿದರು. 14ನೇ ವಯಸ್ಸಿಗೆ ಮನೆಯಿಂದ ಓಡಿ ಹೋದೆ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights