ದೇಶದಲ್ಲಿ ಬಿಬಿಸಿ ಸುದ್ದಿವಾಹಿನಿ ಪ್ರಸಾರಕ್ಕೆ ನಿಷೇಧ ಹೇರಿದ ಚೀನಾ!

ಜಾಗತಿಕ ಮಟ್ಟದಲ್ಲಿ ಪ್ರಸಾರವಾಗುವ ಸುದ್ದಿ ಚಾನೆಲ್‌ ಬ್ರಿಟೀಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಪ್ರಸಾರವನ್ನು ಚೀನಾದಲ್ಲಿ ಪ್ರಸಾರವಾಗದಂತೆ ಚೀನಾ ಸರ್ಕಾರ ನಿಷೇಧ ಹೇರಿದೆ.

ಸುದ್ದಿ ವರದಿಯಲ್ಲಿ ತನ್ನ ಮಾರ್ಗಸೂಚಿಗಳನ್ನು ಬಿಬಿಸಿ ವರ್ಲ್ಡ್ ನ್ಯೂಸ್ ಗಂಭೀರವಾಗಿ ಉಲ್ಲಂಘಿಸಿದೆ. ಹಾಗಾಗಿ ಚೀನಾದಲ್ಲಿ ಅದರ ಪ್ರಸಾವನ್ನು ನಿಷೇಧಿಸಲಾಗಿದೆ ಎಂದು ಚೀನಾದ ದೂರದರ್ಶನ ಮತ್ತು ರೇಡಿಯೋ ನಿಯಂತ್ರಕ ಸಂಸ್ಥೆ ಪ್ರಕಟಿಸಿದೆ.

ಬ್ರಿಟನ್‌ನ ಸರ್ಕಾರಿ ಸ್ವಾಮ್ಯದ ಮಾಧ್ಯಮ ನಿಯಂತ್ರಕರು ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್‌ (ಸಿಜಿಟಿಎನ್) ಪ್ರಸಾರಕ್ಕೆ ಯುಕೆಯಲ್ಲಿ ಪರವಾನಗಿಯನ್ನು ಕಳೆದ ಕೆಲವು ದಿನಗಳ ಹಿಂದೆ ರದ್ದುಗೊಳಿಸಿತ್ತು. ಅದಾದ ಬಳಿಕ ಚೀನಾ ಕೂಡ ಬಿಬಿಸಿ ಪ್ರಸಾರವನ್ನು ದೇಶದಲ್ಲಿ ನಿಷೇಧಿಸಿದೆ.

ಚೀನಾದಲ್ಲಿನ ಟೆಲಿವಿಷನ್ ಹಾಗೂ ರೇಡಿಯೋ ನಿಯಂತ್ರಕ, ರಾಷ್ಟ್ರೀಯ ರೇಡಿಯೋ ಹಾಗೂ ಟೆಲಿವಿಷನ್ ಅಡ್ಮಿನಿಸ್ಟ್ರೇಷನ್ (ಓಖಖಿಂ) ಚೀನಾದಲ್ಲಿ ಬಿಬಿಸಿ ಪ್ರಸಾರವಾಗುವುದಕ್ಕೆ ನಿಷೇಧ ವಿಧಿಸಿದೆ.

ಚೀನಾ ಅಪೇಕ್ಷಿಸುವ ನಿಷ್ಪಕ್ಷಪಾತ, ನೈಜ ವರದಿಗಳ ವಿರುದ್ಧವಾಗಿ ಬಿಬಿಸಿ ನಡೆದುಕೊಂಡಿದ್ದು ಚೀನಾದ ರಾಷ್ಟ್ರೀಯ ಹಿತಾಸಕ್ತಿಯನ್ನು ಕಡೆಗಣಿಸಿದೆ ಎಂದು ಚೀನಾ ಬಿಬಿಸಿ ವಿರುದ್ಧ ಆರೋಪ ಮಾಡಿದ್ದು, ಮುಂದಿನ ದಿನಗಳಲ್ಲಿ ಚೀನಾ ಪ್ರಾಂತ್ಯಗಳಲ್ಲಿ ಬಿಬಿಸಿ ಪ್ರಸಾರವಾಗುವುದಿಲ್ಲ ಎಂದೂ ಹೇಳಿದೆ.

ಇದನ್ನೂ ಓದಿ: ಸಮೀಕ್ಷೆ: ಅಮೆರಿಕಾದಲ್ಲಿರುವ 61% ಭಾರತೀಯ ಇಂಜಿನಿಯರ್‌ಗಳು ಮೋದಿಯನ್ನು ಬೆಂಬಲಿಸುತ್ತಾರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights