ಮುಂಚೂಣಿ ವ್ಯಕ್ತಿಗಳಿಗೆ TMC ಹೆಸರಿನಲ್ಲಿ BJP ಐಟಿ ಸೆಲ್‌ ಕರೆ; ತಪ್ಪು ಮಾಹಿತಿ ಹರಡುತ್ತಿದೆ ಬಿಜೆಪಿ!

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಂಗಾಳದ ಆಡಳಿತಾರೂಢ ಟಿಎಂಪಿ ಪಕ್ಷದ ಕಾರ್ಯಕರ್ತರು ಎಂದು ಹೇಳಿಕೊಂಡು ಬಿಜೆಪಿ ಐಟಿ ಸೆಲ್ ಹಲವಾರು ಮುಂಚೂಣಿ ವ್ಯಕ್ತಿಗಳು ಹಾಗೂ ಪ್ರಾಧ್ಯಾಪಕರುಗಳಿಗೆ ಕರೆ ಮಾಡಿ ತಪ್ಪು ಮಾಹಿತಿ ಹರುಡುತ್ತಿದ್ದಾರೆ ಎಂದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಬಿಜೆಪಿಯ ಐಟಿ ಸೆಲ್‌ನವರು ಕಳೆದ ಕೆಲವು ದಿನಗಳ ಹಿಂದೆ, ಕೋಲ್ಕತ್ತಾದ ಜಾದವ್‌ಪುರ್ ವಿಶ್ವವಿದ್ಯಾಲಯದ ಕೆಲವು ಪ್ರಾಧ್ಯಾಪಕರಿಗೆ ಕರೆ ಮಾಡಿ, ತಾವು ಟಿಎಂಸಿ ಕಾರ್ಯಕರ್ತರು, ಮುಂಬರುವ ಚುನಾವಣೆಯಲ್ಲಿ ನೀವು ಯಾರಿಗೆ ಮತಚಲಾಯಿಸುತ್ತೀರಿ ಎಂದು ಕೇಳಿದ್ದಾರೆ. ಅಲ್ಲದೆ ಅವರು ಸಾಕಷ್ಟು ತಪ್ಪು ಮಾಹಿತಿ ಸೇರಿದಂತೆ ಅವಮಾನಕರವಾಗಿ ಅವರೊಂದಿಗೆ ಮಾತನಾಡಿದ್ದರು” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

“ಪ್ರಾಧ್ಯಾಪಕರು ಈ ಸಂಖ್ಯೆಗಳನ್ನು ಪರಿಶೀಲಿಸಿದಾಗ ಅವರು ಟಿಎಂಸಿಗೆ ಕಾರ್ಯಕರ್ತರಲ್ಲ ಎಂದು ತಿಳಿದುಬಂದಿದೆ. ಇದು ಬಿಜೆಪಿ ಐಟಿ ಸೆಲ್‌ನ ಕೆಟ್ಟ ಕೆಲಸ. ಕೂಡಲೇ ತನಿಖೆ ಆರಂಭಿಸುವಂತೆ ಪೊಲೀಸರನ್ನು ಕೇಳುತ್ತಿದ್ದೇನೆ. ಜನರು ಅನುಮಾನಾಸ್ಪದ ಸಂಖ್ಯೆಗಳಿಂದ ಕರೆಗಳನ್ನು ಸ್ವೀಕರಿಸಬಾರದು ಮತ್ತು ಒಂದು ವೇಳೆ ಇಂತಹ ಕರೆಗಳು ಬಂದರೆ ಪೊಲೀಸರಿಗೆ ದೂರು ಸಲ್ಲಿಸಿ ಎಂದು ಮನವಿ ಮಾಡುತ್ತೇನೆ. ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಕಲಿ ಸುದ್ದಿಗಳನ್ನು ಹರಡುವಲ್ಲಿ ಬಿಜೆಪಿಯ ಐಟಿ ಸೆಲ್ ಪ್ರಾವಿಣ್ಯತೆ ಹೊಂದಿದೆ. ಯಾವುದೆ ವಿಷಯವನ್ನು ಸಾವಿರಾರು ವಾಟ್ಸಪ್ ಗುಂಪುಗಳ ಮೂಲಕ ವೈರಲ್ ಮಾಡಬಹುದು ಎಂದು ಅಮಿತ್ ಶಾ ಅವರೇ ಒಮ್ಮ ಹೇಳಿಕೊಂಡಿದ್ದರು” ಎಂದು ಮಮತಾ ಹೇಳಿದ್ದಾರೆ.

ಆದರೆ ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ ರಿತೇಶ್ ತಿವಾರಿ ಮಮತಾ ಅವರ ಆರೋಪವನ್ನು ಅಲ್ಲಗೆಳೆದಿದ್ದು, ಅವರು ರೂಡಿಗತ ಸುಳ್ಳುಗಾರ್ತಿ ಎಂದು ಹೇಳಿದ್ದಾರೆ.

“ಮಮತಾ ಅವರು ರೂಡಿಗತ ಸುಳ್ಳುಗಾರ್ತಿ ಎಂದು ಬಂಗಾಳದ ಜನರಿಗೆ ತಿಳಿದಿದೆ. ಶಿಕ್ಷಕ ಸಮುದಾಯದ ಸಹಾನುಭೂತಿ ಪಡೆಯಲು ಅವರು ಈ ಕಥೆಗಳನ್ನು ಹಣೆಯುತ್ತಿದ್ದಾರೆ. ಅವರು ಆರೋಪಿಸಿದಂತೆ ನಡೆದಿದ್ದರೆ ಕರೆಗಳ ದಾಖಲೆಗಳು ಮತ್ತು ಸಂಭಾಷಣೆಗಳ ಆಡಿಯೊ ರೆಕಾರ್ಡಿಂಗ್‌ಗಳನ್ನು ಯಾಕೆ ಬಹಿರಂಗಪಡಿಸಿಲ್ಲ. ನಾನು ಅವರಿಗೆ ಸವಾಲು ಹಾಕುತ್ತಿದ್ದೇನೆ, ಅವರಿಗೆ ಸಾಧ್ಯವಾದರೆ ಪ್ರಕರಣದಲ್ಲಿ ಬಿಜೆಪಿ ಐಟಿ ಸೆಲ್‌‌ನ ಒಳಗೊಳ್ಳುವಿಕೆಯನ್ನು ಸಾಬೀತುಪಡಿಸಲಿ” ಎಂದು ತಿವಾರಿ ಹೇಳಿದ್ದಾರೆ.

ಇದನ್ನೂ ಓದಿ: ಅಸ್ಸಾಂನಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಿಎಎ ಜಾರಿ ಇಲ್ಲ: ರಾಹುಲ್‌ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights