ರಾಹುಲ್‌ಗಾಂಧಿ ದಲಿತ ಯುವತಿಯನ್ನು ವಿವಾಹವಾಗಬೇಕು; ಜಾತಿ ನಿರ್ಮೂಲನೆಗೆ ಕೊಡುಗೆ ನೀಡಬೇಕು: ಕೇಂದ್ರ ಸಚಿವ ಅಠವಾಳೆ

ರಾಹುಲ್‌ಗಾಂಧಿ ಅವರು ದಲಿತ ಯುವತಿಯನ್ನು ಮದುವೆಯಾಗಬೇಕು. ಈ ಮೂಲಕ ಅವರು ಜಾತಿವಾದವನ್ನು ಕೊನೆಗೊಳಿಸಲು ಸಹಾಯ ಮಾಡಬಹುದು ಎಂದು ಕೇಂದ್ರ ಸಚಿವ ರಾಮದಾಸ್‌ ಅಠವಳೆ ಅವರು ಕಾಂಗ್ರೆಸ್‌ ಮುಖಂಡನಿಗೆ ಸಲಹೆ ನೀಡಿದ್ದಾರೆ.

ಕೃಷಿ ಕಾನೂನುಗಳ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದ ರಾಹುಲ್‌ಗಾಂಧಿ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ‘ನಾವಿಬ್ಬರು-ನಮಗಿಬ್ಬರು’ ಎಂಬಂತೆ ವರ್ತಿಸುತ್ತಿದೆ ಎಂದು ವ್ಯಂಗ್ಯವಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಅಠವಾಳೆ, ನಾವಿಬ್ಬರು-ನಮಗಿಬ್ಬರು (ಹಮ್‌ ಡು, ಹಮಾರೆ ಡು) ಎಂಬುದನ್ನು ಕುಟುಂಬ ಯೋಜನೆಯಲ್ಲಿ ಬಳಸಲಾಗುತ್ತಿತ್ತು. ಹಾಗಾಗಿ ಅವರು ಹಮ್‌ ಡು, ಹಮಾರೆ ಡು ಮಾಡಲು ಬಯಸಿದ್ದರೆ. ಅವರು ಮದುಯಾಗಬೇಕು ಎಂದು ಹೇಳಿದ್ದಾರೆ.

ಮುಂದುವರೆದು, ನಾನು ರಾಹುಲ್‌ಗಾಂಧಿ ಅವರನ್ನು ತನ್ನ ಉತ್ತಮ ಸ್ನೇಹಿತ ಎಂದು ಭಾವಿಸಿದ್ದೇನೆ. ಅವರು ದಲಿತ ಯುವತಿಯನ್ನು ವಿವಾಹವಾಗಬೇಕು. ಆ ಮೂಲಕ ಮಹಾತ್ಮ ಗಾಂಧಿಯವರ ಕನಸನ್ನು ಈಡೇರಿಸುತ್ತಾರೆ ಮತ್ತು ಜಾತಿವಾದವನ್ನು ಕೊನೆಗೊಳಿಸಲು ಸಹಾಯ ಮಾಡುತ್ತಾರೆ. ಇದು ಎಲ್ಲಾ ಯುವಕರಿಗೆ ಮಾರ್ಗದರ್ಶನ-ಸ್ಪೂರ್ತಿಯಾಗುತ್ತದೆ ಎಂದು ಅಠವಾಳೆ ಹೇಳಿದ್ದಾರೆ.

ಅವರು ಅಂತರ್ಜಾತಿ ವಿವಾಹವಾದರೆ, ಅವರಿಗೆ ನಮ್ಮ ಸಚಿವಾಲಯದಿಂದ 2.5 ಲಕ್ಷ ರೂ.ಗಳ ಪ್ರೋತ್ಸಾಹ ಧನವನ್ನು ಒದಗಿಸುತ್ತೇವೆ ಎಂದು ಹೇಳಿದ್ದಾರೆ.

ಕೇಂದ್ರ ಹೊಸ ಕೃಷಿ ನೀತಿಗಳು ರೈತ ವಿರೋಧಿಯಾಗಿದ್ದು, ಇವು ಕ್ರೋನಿ ಕ್ಯಾಪಿಟಲಿಸಂ ಅನ್ನು ಉತ್ತೇಜಿಸುತ್ತವೆ. ಇದರಿಂದಾಗಿ ಕೃಷಿ ಕ್ಷೇತ್ರವು ಕಾರ್ಪೋರೇಟ್‌ ಶಕ್ತಿಗಳ ವಶಕ್ಕೆ ಹೋಗುತ್ತದೆ. ರೈತರು ಬೀದಿ ಪಾಲಾಗುತ್ತಾರೆ. ಈ ಕೃಷಿ ನೀತಿಗಳ ಮೂಲಕ ಅಂಬಾನಿ-ಅದಾನಿಗಳಿಗೆ ನೆರವು ನೀಡಲು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಮುಂದಾಗಿದ್ದಾರೆ ಎಂದು ಹೆಸರು ಉಲ್ಲೇಖಿಸದೇ, ಪರೋಕ್ಷವಾಗಿ ವ್ಯಂಗ್ಯವಾಡಿದ್ದ ರಾಹುಲ್‌ಗಾಂಧಿ, ನಾವಿಬ್ಬರು-ನಮಗಿಬ್ಬರು ಎಂದು ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಅಗಿತ್ತು. ಇದೀಗ ರಾಹುಲ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಅಠವಾಳೆ ಅಂತರ್ಜಾತಿ ವಿವಾಹವಾಗಲು ರಾಹುಲ್‌ಗಾಂಧಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಪಂಜಾಬ್‌ ಚುನಾವಣೆ: ಕಾಂಗ್ರೆಸ್‌ಗೆ ಭರ್ಜರಿ ಗೆಲುವು: ಭಾರೀ ಮುಖಭಂಗ ಅನುಭವಿಸಿದ BJP!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights