ಗ್ರೇಟಾ ಥನ್ಬರ್ಗ್ ಬಡ ಮಕ್ಕಳ ಮುಂದೆ ಆಹಾರವನ್ನು ಸೇವಿಸುವ ಚಿತ್ರ ನಿಜವೇ?

ರೈತರ ಆಂದೋಲನವನ್ನು ಬೆಂಬಲಿಸಿ ಟ್ವೀಟ್ ಮಾಡಿದ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಭಾರತದಲ್ಲಿ ಸಾಕಷ್ಟು ಬಿರುಗಾಳಿ ಸೃಷ್ಟಿಸಿದರು. ಈ ತಿಂಗಳ ಆರಂಭದಲ್ಲಿ ನಡೆದ ಪ್ರತಿಭಟನೆಗಳ ಬಗ್ಗೆ ಅವರು ಆಕಸ್ಮಿಕವಾಗಿ ಟೂಲ್ಕಿಟ್ ಹಂಚಿಕೊಂಡಿದ್ದು ಸಾಕಷ್ಟು ಅನುಮಾನಗಳಿಗೆ ಗುರಿ ಮಾಡಿದೆ. ಟೂಲ್ಕಿಟ್ ತನಿಖೆಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕರ್ತರು ಪೊಲೀಸ್ ವಶದಲ್ಲಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಆಕೆಯ ವಿರುದ್ಧ ತಿರುಗಿಬಿದ್ದಿದ್ದಾರೆ.

ಇದರ ಮಧ್ಯೆ, ಬಡ ಮಕ್ಕಳ ಗುಂಪು ಕಿಟಕಿಯ ಮೂಲಕ ಅವಳನ್ನು ದಿಟ್ಟಿಸುತ್ತಿರುವಾಗ ಗ್ರೆಟಾ ಆಹಾರವನ್ನು ತಿನ್ನುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಯುವ ಪರಿಸರ ಹೋರಾಟಗಾರ್ತಿ ಸಮಗ್ರತೆಯನ್ನು ಪ್ರಶ್ನಿಸುತ್ತಿದೆ.

ಆದರೆ ಗ್ರೆಟಾ ಅವರ ಈ ವೈರಲ್ ಚಿತ್ರವನ್ನು ಮಾರ್ಫಿಂಗ್ ಮಾಡಲಾಗಿದೆ. ಮೂಲ ಚಿತ್ರದಲ್ಲಿ ಗ್ರೆಟಾ ಹಿಂದೆ ರೈಲಿನ ಕಿಟಕಿಯಲ್ಲಿ ಕಾಡಿನ ಗಿಡಮರಗಳು ಇರುವುದು ಕಾಣಬಹುದು. ಇನ್ನೂ ಮಕ್ಕಳು ಕಾಣಿಸುವ ಮೂಲ ಚಿತ್ರ 2007 ರಲ್ಲಿ ಮಧ್ಯ ಆಫ್ರಿಕಾದ ಗಣರಾಜ್ಯದ ಬೊಡೌಲಿ ಎಂಬ ಹಳ್ಳಿಯಲ್ಲಿನ ಬಡ ಮಕ್ಕಳ ಚಿತ್ರವಾಗಿದೆ. ಇದನ್ನು ರಾಯಿಟರ್ಸ್ ಎನ್ನುವ ಛಾಯಚಿತ್ರಗಾರ ತೆಗೆದಿದ್ದಾರೆ.

ಮೂಲ ಚಿತ್ರವನ್ನು ಗ್ರೆಟಾ ಸ್ವತಃ ತನ್ನ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಹ್ಯಾಂಡಲ್ಗಳಲ್ಲಿ ಜನವರಿ 22, 2019 ರಂದು ಪೋಸ್ಟ್ ಮಾಡಿದ್ದಾರೆ. ಚಿತ್ರವನ್ನು ಡೆನ್ಮಾರ್ಕ್ನಲ್ಲಿ ಲಂಚ್ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ. ಮೂಲ ಚಿತ್ರದಲ್ಲಿ, ಗ್ರೆಟಾ ರೈಲಿನಲ್ಲಿ ಪ್ರಯಾಣಿಸುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದು ಮತ್ತು ಇದು ಹಿನ್ನೆಲೆಯಲ್ಲಿ ಅರಣ್ಯವಾಗಿದೆ.

ಆದ್ದರಿಂದ, ಗ್ರೆಟಾ ಆಹಾರವನ್ನು ಹೊಂದಿದ್ದನ್ನು ತೋರಿಸುವ ಚಿತ್ರದಲ್ಲಿ ಬಡ ಮಕ್ಕಳು ಇರುವ ಫೋಟೋವನ್ನು ಸೇರಿಸಲಾಗಿದೆ. ಇದರ ಮೂಲ ಫೋಟೋವೇ ಬೇರೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights