ಕಳೆದುಕೊಂಡ ಕ್ಷೇತ್ರಗಳನ್ನು ಮರಳಿ ಪಡೆಯಲು ಮುಂದಾದ ಕಾಂಗ್ರೆಸ್‌; 100 ಕ್ಷೇತ್ರಗಳಲ್ಲಿ ಪಾದಯಾತ್ರೆ!

ಕಳೆದ ವಿಧಾನಸಭಾ ಚುನಾವಣೆ ಮತ್ತು ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ ಕಳೆದು ಕೊಂಡಿರುವ 100 ಕ್ಷೇತ್ರಗಳನ್ನು ಮರಳಿ ಪಡೆಯಲು, ಆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತೆ ಗೆಲುವು ಸಾಧಿಸುವಂತೆ ಮಾಡುವ ಉದ್ದೇಶದಿಂದ ಅಷ್ಟೋ ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಸಲು ‌ ನಿರ್ಧರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಡಿಕೆಶಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದ್ದು, ಮಾರ್ಚ್‌ 03ರಿಂದ ಪಾದಯಾತ್ರೆ ಆರಂಭವಾಗಲಿದೆ. ಪ್ರತಿ ಕ್ಷೇತ್ರದಲ್ಲಿ 2 ಕಿ.ಮೀ ಪಾದಯಾತ್ರೆ ನಡೆಸಿ, ಬೃಹತ್‌ ಸಮಾವೇಶಗಳನ್ನು ಮಾಡಲಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್‌ ಹೇಳಿದೆ.

ಮೊದಲ ಹಂತದಲ್ಲಿ ಮಾರ್ಚ್‌ 03ರಿಂದ 06 ರವರೆಗೆ ಪಾದಯಾತ್ರೆ ಅಭಿಯಾನ ನಡೆಯಲಿದೆ. ಮಾರ್ಚ್‌ 3 ರಂದು ಚಿಕ್ಕಬಳ್ಳಾಪುರ, ದೇವನಹಳ್ಳಿ ಹಾಗೂ ನೆಲಮಂಗಲದಲ್ಲಿ ಪ್ರಚಾರ ನಡೆಸಲಾಗುವುದು ಎಂದು ಡಿಕೆಶಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಎರಡು ರೀತಿಯಲ್ಲಿ ಅಭಿಯಾನ ನಡೆಸಲಿದ್ದು, ಒಂದು ದೀರ್ಘಾವಧಿಯ ಅಭಿಯಾನ ನಡೆಯಲಿದೆ. ಇದರಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಪಕ್ಷದ ನೆಲೆಯನ್ನು ಬಲಪಡಿಸಲು ಮತ್ತು ಹೆಚ್ಚಿನ ಜನ ಬೆಂಬಲವನ್ನು ಸಂಗ್ರಹಿಸಲು ವರ್ಷ ಪೂರ್ತಿ ಪಾದಯಾತ್ರೆಗಳು ಮತ್ತು ಸಾರ್ವಜನಿಕ ರ್ಯಾಲಿಗಳನ್ನು ನಡೆಲಿಯಲಿವೆ. ಅಲ್ಪಾವಧಿ ರ್ಯಾಲಿಗಳಲ್ಲಿ ಸಂಘಟನಾತ್ಮಕ ಬಲವರ್ಧನೆ, ನಿರ್ಧಿಷ್ಟ ಪ್ರತಿಭಟನೆ , ಚಳುವಳಿ ಮುಂತಾದವುಗಳನ್ನು ನಡೆಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ‌ ಸ್ಪೋಟ: ಕ್ರಷರ್‌ ಮಾಲೀಕ BJP ಮುಖಂಡನ ಬಂಧನ; ಇಬ್ಬರು ಪೊಲೀಸ್‌ ಅಧಿಕಾರಿಗಳ ಅಮಾನತು!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights