OTT ಪ್ಲಾಟ್‌ಫಾರ್ಮ್‌ಗಳು ಅಶ್ಲೀಲ ಚಿತ್ರಗಳನ್ನು ತೋರಿಸುತ್ತವೆ; ಅವುಗಳನ್ನೂ ನಿಯಂತ್ರಿಸಬೇಕು: ಸುಪ್ರೀಂ ಕೋರ್ಟ್

ಓವರ್ ದಿ ಟಾಪ್ (ಒಟಿಟಿ) ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲವು ಸಿನಿಮಾಗಳು ಮತ್ತು ವೆಬ್ ಸರಣಿಗಳು ಅಶ್ಲೀಲ ಚಿತ್ರಗಳನ್ನು, ಕ್ಲಿಪ್‌ಗಳನ್ನೂ ಪ್ರಸಾರ ಮಾಡುತ್ತಿವೆ. ಅಂತಹ ಚಿತ್ರಗಳ ಪ್ರದರ್ಶನಕ್ಕೆ ಕಡಿವಾಣ ಹಾಕಬೇಕು. ಅವುಗಳಿಗೆ ಸ್ಕ್ರೀನಿಂಗ್‌ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

“ಓಟಿಟಿ ವೇದಿಕೆಗಳಲ್ಲಿ ಕೆಲವು ಸಂದರ್ಭಗಳಲ್ಲಿ ಅಶ್ಲೀಲ ಚಿತ್ರಗಳನ್ನು ಸಹ ತೋರಿಸಲಾಗುತ್ತಿದ್ದು, ಅವುಗಳಿಗೆ ಕೆಲವು ನಿಯಂತ್ರಣ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ಅಮೆಜಾನ್ ಪ್ರೈಮ್ ವಿಡಿಯೋ ಪಾಟ್‌ಫಾಂನ ಭಾರತದ ಮುಖ್ಯಸ್ಥ ಅಪರ್ಣಾ ಪುರೋಹಿತ್ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ, ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಯಂತ್ರಿಸುವ ಸರ್ಕಾರದ ಇತ್ತೀಚಿನ ಮಾರ್ಗಸೂಚಿಗಳನ್ನು ಕೋರ್ಟ್ ಮುಂದೆ ಇಡಬೇಕು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಕೇಳಿದೆ.

ಪ್ರೈಮ್‌ನಲ್ಲಿ ಬಿಡುಗಡೆಯಾದ‌ ‘ತಾಂಡವ್’ ವೆಬ್‌ ಸೀರಿಸ್‌ಗೆ ಸಂಬಂಧಿಸಿದಂತೆ ಆಕೆಯ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದ್ದು, ಆಕೆಗೆ ನರೀಕ್ಷಣಾ ಜಾಮೀನು ನೀಡಲು ಅಲಹಾಬಾದ್‌ ಹೈಕೋರ್ಟ್‌ ನಿರಾಕರಿಸಿತ್ತು.

ಓಟಿಟಿ ವೇದಿಕೆಗಳಿಗೆ ಜಾರಿಯಾಗಿರುವ ಕೇಂದ್ರದ ನಿಯಂತ್ರಣ ಮಾರ್ಗಸೂಚಿಗಳು ಮತ್ತು ಅಪರ್ಣಾ ಪುರೋಹಿತ್ ಅವರ  ಜಾಮೀನು ಅರ್ಜಿಯನ್ನು ನ್ಯಾಯಾಲಯ ನಾಳೆ ಪರಿಶೀಲನೆ ನಡೆಸಲಿದೆ.

ಇದನ್ನೂ ಓದಿ: OTT ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರದ ಹೊಸ ನಿಯಮಗಳು ಜಾರಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights