ಕೇರಳ ಚುನಾವಣೆ: ಇತ್ತೀಚೆಗೆ BJP ಸೇರಿದ ಶ್ರೀಧರನ್ ಮುಖ್ಯಮಂತ್ರಿ ಅಭ್ಯರ್ಥಿ!

ಕೇರಳದಲ್ಲಿ ಚುನಾವಣಾ ಕಣ ಗರಿಗೆದರಿದ್ದು, ಎಲ್‌ಡಿಎಫ್‌-ಯುಡಿಎಫ್‌ ಮೈತ್ರಿಕೂಟಗಳು ಅಧಿಕಾರ ಹಿಡಿಯಲು ಸೆಣೆಸಾಡುತ್ತಿವೆ. ಈ ಮಧ್ಯೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸೆಣೆಸಾಡುತ್ತಿರುವ ಬಿಜೆಪಿ, ಇತ್ತೀಚೆಗೆ ಪಕ್ಷಕ್ಕೆ ಸೇಪರ್ಡೆಯಾದ ‘ಮೆಟ್ರೊ ಮ್ಯಾನ್’ ಖ್ಯಾತಿಯ ಇ. ಶ್ರೀಧರನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕೇಸರಿ ಪಕ್ಷ ಘೋಷಿಸಿದೆ.

ಬಿಜೆಪಿಗೆ ಸೇರ್ಪಡೆಯಾದ ಸಂದರ್ಭದಲ್ಲಿ ಶ್ರೀಧರನ್‌, “ಬಿಜೆಪಿ ನನನ್ನು ಮುಂದಿನ ಚುನಾವಣೆಗೆ ಸಿಎಂ ಅಭ್ಯರ್ಥಿಯಾಗಿ ಘೋಷಿಸಬೇಕು.‌ಇದರಿಂದ ಬಿಜೆಪಿಗೆ ಲಾಭವಾಗುತ್ತದೆ. ಎಲ್‌ಡಿಎಫ್, ಯುಡಿಎಫ್ ವಿರುದ್ಧ ಅಸಮಾಧಾನ ಹೊಂದಿರುವವರು ಬಿಜೆಪಿಗೆ ಮತ ನೀಡುತ್ತಾರೆ. ನನಗೆ ರಾಜ್ಯಪಾಲರಾಗುವ ಆಸಕ್ತಿಯಿಲ್ಲ. ನನಗೆ ಆ ಆಫರ್ ಬೇಡ” ಎಂದು ಹೇಳಿದ್ದರು.

ಇಂದು ಚುನಾವಣೆಯ ಬಗ್ಗೆ ಮಾತನಾಡಿದ ಕೇರಳದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್ ಅವರು ಪಕ್ಷದ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಶ್ರೀಧರನ್ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಕೇರಳದಲ್ಲಿ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿ ತ್ವರಿತಗತಿಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ ಎಂದು ಸುರೇಂದ್ರನ್ ಹೇಳಿದ್ದಾರೆ.

ಶ್ರೀಧರನ್ ನೇತೃತ್ವದ ತಂಡ ಅಧಿಕಾರಕ್ಕೆ ಬಂದ ಐದು ತಿಂಗಳಲ್ಲಿ ಕೊಚ್ಚಿಯ ಪಲಾರೈವಟ್ಟಂನ ಮೇಲುಸೇತುವೆ ಪುನರ್‌ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

ಏಪ್ರಿಲ್‌ 06ರಂದು ಕೇರಳ ಚುನಾವಣೆ ನಡೆಯಲಿದ್ದು, ಮೇ 02 ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ಚುನಾವಣೆಗೂ ಮುನ್ನವೇ BJP ಮಿತ್ರಪಕ್ಷ ವಿಭಜನೆ: ಕೇರಳದಲ್ಲಿ ಸೋಲುಲು ಸಿದ್ದವಾಗಿದೆ ಕೇಸರಿ ಪಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights