ಬೀದಿ ಬೀದಿಗಳಲ್ಲಿ ಗಣೇಶನನ್ನು ಕೂರಿಸಲು ಬಿತ್ತು ಬ್ರೇಕ್ -ಕಮಲ್ ಪಂಥ್ ಖಡಕ್ ಎಚ್ಚರಿಕೆ!

ಬೆಂಗಳೂರಿನ ಬೀದಿ ಬೀದಿಗಳಲ್ಲಿ ಗಣೇಶ ಮೂರ್ತಿಯನ್ನು ಕೂರಿಸಲು ಅವಕಾಶವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪೂಜೆಗೆ ಅನುಮತಿ ನೀಡಬೇಕೋ? ಬೇಡವೋ? ಎನ್ನುವ ಬಗ್ಗೆ ಇದೇ 5ನೇ ತಾರೀಕು ಸ್ಪಷ್ಟಣೆ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ ಬೆನ್ನಲ್ಲೇ ಕಮಲ್ ಮಂಥ್ ಈ ಹೇಳಿಕೆ ನೀಡಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ಪಂಥ್, ” ಕೊರೊನಾ ಪ್ರೋಟೋಕಾಲ್ ಇರುವುದರಿಂದ ಬೆಂಗಳೂರಿನ ರಸ್ತೆ, ಬೀದಿಗಳಲ್ಲಿ ಗಣೇಶ ಮೂರ್ತಿ ಪೂಜೆ ಮಾಡುವಂತಿಲ್ಲ. ಆದರೆ ದೇವಸ್ಥಾನಗಳಲ್ಲಿ ಗಣೇಶ ಮೂರ್ತಿಯನ್ನು ಕೂರಿಸಬಹುದು. ದೇವಸ್ಥಾನದಲ್ಲಿ ಗಣೇಶ ಮೂರ್ತಿ ಕೂರಿಸುವ ಮುನ್ನ ಸ್ಥಳೀಯ ಪೊಲೀಸ್ ಹಾಗೂ ಬಿಬಿಎಂಪಿ ಅನುಮತಿಯನ್ನು ಪಡೆಯುವುದು ಕಡ್ಡಾಯ” ಎಂದಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಮೂರ್ತಿ ಕೂರಿಸುವ ಬಗ್ಗೆ ಮುಖ್ಯ ಮಂತ್ರಿಗಳು 5 ನೇ ತಾರೀಕು ಸ್ಪಷ್ಟಣೆ ನೀಡುವುದಾಗಿ ಹೇಳಿದ್ದರು. ಆದರೆ ಅದಕ್ಕೂ ಮೊದಲು ಕಮಲ್ ಪಂಥ್ ದೇವಸ್ಥಾನಗಳನ್ನು ಹೊರತುಪಡಿಸಿ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಕೂರಿಸುವಂತಿಲ್ಲ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಕಮಲ್ ಪಂಥ್ ಅವರ ಈ ಆದೇಶ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದು ರಾಜ್ಯಾದ್ಯಂತ ಗಣೇಶ ಕೂರಿಸುವ ಬಗ್ಗೆ ಸಿಎಂ ಮಾರ್ಗಸೂಚಿಯನ್ನು ಹೊರಡಿಸಲಿದ್ದಾರೆ.

ಪೆಂಡಾಲ್ ಹಾಕಿ ರಸ್ತೆಗಳಲ್ಲಿ ಬೀದಿ ಬೀದಿಗಳಲ್ಲಿ ಗಣೇಶ್ ತರಲು ಕೂರಿಸಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಹೀಗಾಗಿ ಕೊರೊನಾ ಹರಡುವ ಸಾಧ್ಯತೆ ಹೆಚ್ಚಾಗಿದ್ದು ಇದನ್ನು ತಡೆಯುವುದು ನಮ್ಮ ಕರ್ತವ್ಯವಾಗಿದೆ. ಹೀಗಾಗಿ ಈ ಆದೇಶ ಹೊರಡಿಸಲಾಗಿದೆ ಎಂದು ಕಮಲ್ ಪಂಥ್ ಹೇಳಿದ್ದಾರೆ.

ಈಗಾಗಲೇ ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೆದಿದ್ದು, ಸಭೆಯಲ್ಲಿ ಎಷ್ಟು ಎತ್ತರ ಗಣೇಶ್ ಇರಬೇಕು? ಎಷ್ಟು ಜನ ಸೇರಬೇಕು? ನಿಯಮ ಮುರಿದರೆ ಶಿಕ್ಷೆ ಏನು? ಎಲ್ಲವೂ ಸಿಎಂ ಬಿಡುಗಡೆ ಮಾಡುವ ಮಾರ್ಗಸೂಚಿಯಲ್ಲಿರಲಿದ್ದು ದೇವಸ್ಥಾನಗಳಲ್ಲಿ ಮಾತ್ರ ಷರತ್ತುಬದ್ಧ ಗಣೇಶ ಹಬ್ಬದ ಆಚರಣೆಗೆ ಅವಕಾಶ ನೀಡಲಾಗಿದೆ. ಇನ್ನೂ ರಾಜ್ಯದಾದ್ಯಂತ ಈ ನಿಯಮ ಅನುಸರಿಬೇಕೋ? ಬೇಡೋ? ಎನ್ನುವ ಬಗ್ಗೆ 5ನೇ ತಾರೀಕು ಸಿಎಂ ಸ್ಪಷ್ಟಪಡಿಸಲಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights