ಹಾಸ್ಟೆಲ್ ಯುವತಿಯರ ನಗ್ನ ನೃತ್ಯ ಪ್ರಕರಣ: ಆರೋಪ ಸುಳ್ಳು ಎಂದ ಮಹಾರಾಷ್ಟ್ರ ಗೃಹ ಸಚಿವ
ಮಹಾರಾಷ್ಟ್ರದ ಜಲ್ಗಾಂವ್ನಲ್ಲಿ ಸರ್ಕಾರ ನಡೆಸುತ್ತಿರುವ ಮಹಿಳಾ ಹಾಸ್ಟೆಲ್ನಲ್ಲಿ ಖೈದಿಗಳನ್ನು ಬೆತ್ತಲೆ ನೃತ್ಯ ಮಾಡುವಂತೆ ಪೊಲೀಸ್ ಸಿಬ್ಬಂದಿ ಒತ್ತಾಯಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿರುವ ಸರ್ಕಾರದ ವರದಿಯು ಆರೋಪವನ್ನು ತಿರಸ್ಕರಿಸಿದೆ.
ಮಾರ್ಚ್ 01 ರಂದು ಆಶಾದೀಪ ಮಹಿಳಾ ಹಾಸ್ಟೆಲ್ನಲ್ಲಿ ಯುವತಿಯರನ್ನು ಜಲ್ಗಾಂವ್ ಪೊಲೀಸರು ಬೆತ್ತಲೆ ನೃತ್ಯ ಮಾಡಲು ಒತ್ತಾಯಿಸಿದ್ದರು ಎಂದು ಆರೋಪ ಕೇಳಿಬಂದಿತ್ತು. ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ವಿರೋಧ ಪಕ್ಷಗಳು ಅಧಿವೇಶನಲ್ಲಿ ಕಿಡಿಕಾರಿದ್ದವು. ಈ ಬಳಿಕ ಪ್ರಕರಣದ ತನಿಖೆಗೆ ಮಹಾರಾಷ್ಟ್ರ ಗೃಹ ಸಚಿವರು ಆದೇಶ ನೀಡಿದ್ದರು.
ಘಟನೆಯ ತನಿಖೆಗಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಟ್ರುಪ್ಟಿ ಡಾಡ್ಮೈಸ್, ಮನಶ್ಶಾಸ್ತ್ರಜ್ಞರಾದ ಡಾ. ಕಾಂಚನ್ ಪಾಟೀಲ್ ಮತ್ತು ಡಾ. ಕಾಂಚನ್ ಚವಾಣ್ ಮತ್ತು ಸಬ್ ಇನ್ಸ್ಪೆಕ್ಟರ್ ಕಾಂಚನ್ ಕೇಲ್ ಸೇರಿದಂತೆ ಆರು ಮಹಿಳಾ ಸದಸ್ಯರನ್ನು ಸರ್ಕಾರ ನೇಮಕ ಮಾಡಿಲಾಗಿತ್ತು ಎಂದು ರಾಜ್ಯ ಗೃಹ ಸಚಿವ ಅನಿಲ್ ದೇಶ್ಮುಖ್ ತಿಳಿಸಿದ್ದಾರೆ.
ಜಲ್ಗಾಂವ್ನ ಆಶಾದೀಪ ಮಹಿಳಾ ಹಾಸ್ಟೆಲ್ನ 17 ಮಹಿಳೆಯರು ಸೇರಿದಂತೆ 40 ಜನರ ಹೇಳಿಕೆಗಳನ್ನು ಸದಸ್ಯರು ದಾಖಲಿಸಿದ್ದಾರೆ. ಹಾಸ್ಟೆಲ್ನಲ್ಲಿ ಸ್ಥಳೀಯ ಪೊಲೀಸ್ ಸಿಬ್ಬಂದಿಗಳು ಮಹಿಳೆಯರನ್ನು ಸ್ಟ್ರಿಪ್ ಮತ್ತು ಡ್ಯಾನ್ಸ್ ಮಾಡಲು ಒತ್ತಾಯಿಸಿದ ಘಟನೆ ನಡೆದಿಲ್ಲ ಎಂದು ವರದಿ ತಿಳಿಸಿದೆ.
“ಹಾಸ್ಟೆಲ್ನಲ್ಲಿ 17 ಮಹಿಳಾ ಕೈದಿಗಳಿದ್ದಾರೆ. ನಲವತ್ತೊಂದು ಸಾಕ್ಷಿಗಳನ್ನು ಪ್ರಶ್ನಿಸಲಾಗಿದೆ. ಇಲ್ಲಿ ಯಾವುದೇ ಪುರುಷ ಪೊಲೀಸ್ ಅಧಿಕಾರಿ ಹಾಜರಿರಲಿಲ್ಲ. ಇದು ಮಹಿಳಾ ಹಾಸ್ಟೆಲ್ ಮತ್ತು ಪೊಲೀಸರನ್ನು ಒಳಗೆ ಅನುಮತಿಸಲಾಗುವುದಿಲ್ಲ. ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲವೆಂಬುದು ಕಂಡುಬಂದಿದೆ” ಎಂದು ಅವರು ಹೇಳಿದರು.
“ವಾಸ್ತವವಾಗಿ, ಹಾಸ್ಟೆಲ್ ಮಹಿಳೆಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸುತ್ತಿದ್ದರು ಮತ್ತು ಅವರು ಗಾರ್ಬಾ ನೃತ್ಯವನ್ನು ಪ್ರದರ್ಶಿಸುತ್ತಿದ್ದರು. ವೈರಲ್ ಆಗಿರುವ ವೀಡಿಯೊವನ್ನು ಯಾರೋ ಚಿತ್ರೀಕರಿಸಿದ್ದಾರೆ. ಮಹಿಳೆಯರನ್ನು ಸ್ಟ್ರಿಪ್ ಮತ್ತು ಡ್ಯಾನ್ಸ್ ಮಾಡಲು ಒತ್ತಾಯಿಸಲಾಗಿದೆ. ಈ ವೀಡಿಯೊವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಯಾವುದೇ ರೀತಿಯ ವಿಷಯಗಳು ಹೊರಬಂದಿಲ್ಲ” ಎಂದು ದೇಶಮುಖ್ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಅಬ್ಬರದ ಸಂಗೀತದಿಂದಾಗಿ ಹಸ್ಟೆಲ್ನಿಂದ ಯಾರೋ ಒಬ್ಬರು ನಗ್ನ ನೃತ್ಯ ನಡೆಯುತ್ತಿದೆ ಪೊಲೀಸರಿಗೆ ದೂರು ನೀಡಿದ್ದಾರೆಂದು ತಿಳಿದು ಬಂದಿದೆ ಎಂದು ಸಚಿವರು ಹೇಳಿದ್ದಾರೆ.
“ನಾವು ಮಹಿಳಾ ದೂರುದಾರರ ಹಿನ್ನೆಲೆಯನ್ನು ಪರಿಶೀಲಿಸಿದ್ದೇವೆ. ಆಕೆ ಮಾನಸಿಕವಾಗಿ ಆರೋಗ್ಯ ಸ್ಥಿರವಾಗಿಲ್ಲ ಎಂದು ತಿಳಿದು ಬಂದಿದೆ. ಆರೋಪಗಳಲ್ಲಿ ಯಾವುದೇ ಪುರಾವೆಗಳಿಲ್ಲ” ಎಂದು ತನಿಖಾ ತಂಡದ ಸದಸ್ಯರು ಹೇಳಿರುವುದಾಗಿ ದೇಶ್ಮುಖ್ ಹೇಳಿದ್ದಾರೆ.
ಮಹಿಳಾ ದೂರುದಾರ ಮಾನಸಿಕವಾಗಿ ಅಸ್ಥಿರರಾಗಿದ್ದಾರೆ ಎಂದು ಗೃಹ ಸಚಿವರು ಗುರುವಾರ ಸದನದಲ್ಲಿ ತಿಳಿಸಿದ್ದಾರೆ.
“ಅವರ ಪತಿ ಮತ್ತು ಇತರ ಕುಟುಂಬ ಸದಸ್ಯರು ಅವರ ಮಾನಸಿಕ ಸ್ಥಿತಿಯ ಬಗ್ಗೆ ದೂರು ನೀಡಿದ್ದಾರೆ. ಫೆಬ್ರವರಿ 20 ರಂದು ಕೈದಿಗಳಿಗಾಗಿ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಯಾವುದೇ ಪುರುಷ ಪೊಲೀಸ್ ಅಧಿಕಾರಿ ಹಾಜರಿರಲಿಲ್ಲ” ಎಂದು ಸಚಿವರು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಕವನ ವಾಚನ, ಹಾಡುಗಾರಿಕೆ ಮತ್ತು ನೃತ್ಯ ಸೇರಿದ್ದವು ಎಂದು ಅವರು ಹೇಳಿದರು.
“ಉದ್ದನೆಯ ಸ್ಕರ್ಟ್ ಧರಿಸಿದ ಮಹಿಳೆಯೊಬ್ಬರು ನೃತ್ಯದ ಸಮಯದಲ್ಲಿ ತೊಡಕಿನ ಕಾರಣಕ್ಕೆ ಅದನ್ನು ತೆಗೆದುಹಾಕಿದ್ದಾರೆ” ಎಂದು ಅವರು ಹೇಳಿದ್ದಾರೆ.
ಹಾಸ್ಟೆಲ್ ಯೋಗ್ಯವಾದ ವಸತಿ ಪ್ರದೇಶದಲ್ಲಿದೆ. ಇಂತಹ ಆರೋಪಗಳಿಂದಾಗಿ ನಿರ್ಗತಿಕ ಮಹಿಳೆಯರು ಹಾಸ್ಟೆಲ್ ತೊರೆದು ಅವರು ಸಮಾಜದಿಂದ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ” ಎಂದು ಮಹಾರಾಷ್ಟ್ರ ಮಹಿಳಾ ಮತ್ತು ಮುಖ್ಯ ಅಭಿವೃದ್ಧಿ ಸಚಿವ ಯಶೋಮತಿ ಠಾಕೂರ್ ಹೇಳಿದರು.
ಇದನ್ನೂ ಓದಿ: ಹಾಸ್ಟೆಲ್ ಯುವತಿಯರಿಗೆ ಬೆತ್ತಲಾಗಿ ನೃತ್ಯಮಾಡುವಂತೆ ಪೊಲೀಸರ ಒತ್ತಾಯ; ತನಿಖೆಗೆ ಮಹಾ ಸರ್ಕಾರ ಆದೇಶ

