98ರ ಇಳಿ ವಯಸ್ಸಿನಲ್ಲಿ ಸ್ವಾವಲಂಬಿಯಾದ ಅಜ್ಜ: ವೀಡಿಯೋ ವೈರಲ್!

98ರ ಇಳಿ ವಯಸ್ಸಿನಲ್ಲಿ ಸ್ವಾವಲಂಬಿಯಾದ ಅಜ್ಜನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಅಜ್ಜನ ಕಾಯಕವನ್ನು ಮೆಚ್ಚಿದ ನೆಟ್ಟಿಗರು ಶ್ಲಾಘನೆಯ ಸಂದೇಶಗಳನ್ನು ರವಾನಿಸುತ್ತಿದ್ದಾರೆ.

ವಿಜಯ್ ಪಾಲ್ ಸಿಂಗ್ ಎಂಬ 98 ವರ್ಷದ ಅಜ್ಜ ಉತ್ತರ ಪ್ರದೇಶದ ಲಕ್ನೋದಿಂದ 79 ಕಿ.ಮೀ ದೂರದಲ್ಲಿರುವ ರಾಯಬರೇಲಿಯಲ್ಲಿ ಎಲ್ಲರ ಮನೆ ಮಾತಾಗಿದ್ದಾರೆ. ತನ್ನ ವಯಸ್ಸಿನಲ್ಲಿ ಸ್ವಾವಲಂಬಿ ಮತ್ತು ಸ್ವತಂತ್ರದ ಜೀವನ ಸಾಗಿಸುತ್ತಾ ಎಲ್ಲರಿಗೂ ಮಾದರಿಯಾಗಿದ್ದಾರೆ. ಇವರು ರೇಬರೆಲಿಯ ಹಳ್ಳಿಯ ಬೀದಿಗಳಲ್ಲಿ ಚನಾ ಅಥವಾ ಬೇಯಿಸಿದ ಚಿಕ್ ಬಟಾಣಿಗಳನ್ನು ಮಾರುತ್ತಾರೆ.

ವೈರಲ್ ವೀಡಿಯೊದಲ್ಲಿ ಸಿಂಗ್ ಅವರು ರಸ್ತೆಯ ಪಕ್ಕದಲ್ಲಿ ಒಂದು ಟೇಬಲ್‌ ಮುಂದೆ ನಿಂತು ಬೇಯಿಸಿದ ಬಟಾಣಿಗಳಿಗೆ ಮಸಾಲೆ ಬೆರೆಸಿ ಕೊಡುವ ದೃಶ್ಯವಿದೆ. ದೃಶ್ಯ ಸೆರೆ ಹಿಡಿದ ವ್ಯಕ್ತಿ ಅಜ್ಜನನ್ನು ಪ್ರಶ್ನಿಸಿದ್ದಾನೆ. ಆಗ ಅಜ್ಜ ನನ್ನ ಕುಟುಂಬ ದೊಡ್ಡದಾಗಿದೆ ಎಂದು ಹೇಳುತ್ತಾರೆ.

ಈ ವಯಸ್ಸಿನಲ್ಲಿ ಈ ಕೆಲಸದಿಂದ ತೊಂದರೆಯಾಗುವುದಿಲ್ಲವೇ ಎಂದು ಕೇಳಿದಾಗ, ಸಿಂಗ್ ಅವರು ಮನೆಯಲ್ಲಿ ಕುಳಿತುಕೊಳ್ಳಲು ಬಯಸುವುದಿಲ್ಲ ಏಕೆಂದರೆ ಅದು ನನ್ನನ್ನು ದುರ್ಬಲವಾಗಿಸುತ್ತದೆ ಎಂದು ಹೇಳಿದ್ದಾರೆ.

98 ರ ಹರೆಯದ ವಿಜಯ್ ಪಾಲ್ ಸಿಂಗ್ ಅವರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಜಿಲ್ಲೆಯ ಅಧಿಕಾರಿಗಳ ಗಮನ ಸೆಳೆದಿದೆ.

ಅವರನ್ನು ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ಆಹ್ವಾನಿಸಿ ಅಜ್ಜನಿಗೆ 11,000 ನಗದು ನೀಡಿದರು. ಅವರಿಗೆ ವಾಕಿಂಗ್ ಸ್ಟಿಕ್, ಶಾಲು ಮತ್ತು ಪ್ರಮಾಣಪತ್ರವನ್ನು ರಾಯಬರೆಲಿ ಜಿಲ್ಲಾಧಿಕಾರಿ ವೈಭವ್ ಶ್ರೀವಾಸ್ತವ ಅವರು ನೀಡಿದ್ದಾರೆ. ಹಿರಿಯ ನಾಗರಿಕನಿಗೆ ಸರ್ಕಾರಿ ಯೋಜನೆಯಡಿ ಮನೆ ಇದೆ ಎಂದು ಅಧಿಕಾರಿ ಹೇಳಿದ್ದಾರೆ.

“ಅವರ ವಿಡಿಯೋ ವೈರಲ್ ಆಗಿತ್ತು ಮತ್ತು ನಮ್ಮ ಮುಖ್ಯಮಂತ್ರಿ ಕೂಡ ಇದನ್ನು ಗಮನಿಸಿದ್ದರು … ನಾವು ಅವರಿಗೆ ಪಡಿತರ ಚೀಟಿ ನೀಡಿದ್ದೇವೆ. ಶೌಚಾಲಯ ನಿರ್ಮಾಣಕ್ಕೆ ನಾವು ಹಣವನ್ನೂ ನೀಡಿದ್ದೇವೆ. ಬಾಬಾಗೆ ಏನು ಬೇಕಾದರೂ ಆಡಳಿತ ಸಹಕರಿಸುತ್ತದೆ.  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ ಅಜ್ಜನ ಕಥೆ ಜನರಿಗೆ ನಮಗೆ ಸ್ಫೂರ್ತಿಯಾಗಿದೆ. ಬಾಬಾ ಅವರು ಈ ಕೆಲಸವನ್ನು ಬಲವಂತದಿಂದ ಮಾಡುತ್ತಿಲ್ಲ ಆದರೆ ಅವರು ಆತ್ಮನಿರ್ಭರ್ (ಸ್ವಾವಲಂಬಿ) ಆಗಬೇಕೆಂದು ಬಯಸಿದ್ದರು” ಎಂದು ಹೇಳಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights