ಸಿಎಂ ಬಿಎಸ್‌ವೈ ನಾಪತ್ತೆಯಾಗಿದ್ದಾರೆ ಎಂದ ಯತ್ನಾಳ್‌; ರೊಚ್ಚಿಗೆದ್ದ ರೇಣುಕಾಚಾರ್ಯ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಈ ವಿಚಾರಕ್ಕೆ ಸಂಬಂಧಿದಂತೆ ಉತ್ತರಿಸಬೇಕಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿವೇಶನದಲ್ಲಿ ನಾಪತ್ತೆಯಾಗಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ್‌ ವಾಗ್ದಾಳಿ ನಡೆಸಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಯತ್ನಾಳ್ ಸದನದಲ್ಲಿ‌ ಮಂಗಳವಾರ ಪ್ರಶ್ನೆಯನ್ನು ಎತ್ತಿದ್ದರು. ಇದಕ್ಕೆ ಬುಧವಾರ ಉತ್ತರ ನೀಡುವುದಾಗಿ ಸಿಎಂ ಬಿಎಸ್‌ವೈ ತಿಳಿಸಿದ್ದರು. ಆದರೆ, ಬುಧವಾರದ ಅಧಿವೇಶನದಲ್ಲಿ ಬಿಎಸ್‌ಬೈ ಹಾಜರಿರಲಿಲ್ಲ. ಹೀಗಾಗಿ ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ ಯತ್ನಾಳ್‌, ಉತ್ತರಿಸುವದಾಗಿ ಹೇಳಿದ್ದ, ಸಿಎಂ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ನಮ್ಮ ಸಮಾಜದ ಮೇಲೆ ಪ್ರೀತಿ ಇದೆ. ಅದಕ್ಕಾಗಿ ಅವರ ಅಮೂಲ್ಯವಾದ ಸಮಯವನ್ನು ನಾನು ಮಾತನಾಡಲು ಬಿಟ್ಟುಕೊಟ್ಟಿದ್ದಾರೆ. ನಮ್ಮ ಸಮಾಜದ ಹೆಸರೇಳಿಕೊಂಡು ಮುಖ್ಯಮಂತ್ರಿಯಾದ ಯಡಿಯೂರಪ್ಪ ಅವರು ಮೀಸಲಾತಿಯ ಬಗ್ಗೆ ಮಾತನಾಡದೇ, ನಾಪತ್ತೆಯಾಗಿದ್ದಾರೆ ಎಂದು ಯತ್ನಾಳ್‌ ಹೇಳಿದ್ದಾರೆ.

ಯತ್ನಾಳ್‌ ಮಾತಿಗೆ ಸಿಟ್ಟಾಗಿ ಮಧ್ಯೆ ಪ್ರವೇಶಿಸಿದ ರೇಣುಕಾಚಾರ್ಯ, ಸಿಎಂ ಯಡಿಯೂರಪ್ಪ ಎಲ್ಲಿಯೂ ನಾಪತ್ತೆಯಾಗಿಲ್ಲ. ಹೀಗೆಲ್ಲಾ ನಾಪತ್ತೆಯಾಗಿದ್ದಾರೆ ಎಂದು ಹೇಳಬಾರದು. ಅವರಿಗೆ ಪಂಚಮಸಾಲಿ ಸಮುದಾಯಕ್ಕೆ ಅಪಾರ ಗೌರವವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಂಗಳದಲ್ಲಿ ಎಲ್ಲಡೆ ಬಾಂಬ್‌ ಫ್ಯಾಕ್ಟರಿಗಳಿವೆ; ಬಯಲಾಯ್ತು ಅಮಿತ್‌ ಶಾ ಸುಳ್ಳುಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights