ಸಿಡಿ ಕೇಸ್ಗಿಂದು ಬಹುದೊಡ್ಡ ಟ್ವಿಸ್ಟ್..? : ಸಿಡಿ ಲೇಡಿ ಹಾಜರಾಗುವ ಸಾಧ್ಯತೆ..
ಇಂದು ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಕೇಸ್ ಬಹುದೊಡ್ಡ ಟ್ವಿಸ್ಟ್ ಪಡೆಯಲಿದ್ದು ಸಿಡಿ ಲೇಡಿ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಬಿಡುಗಡೆಯಾದ ನಂತರ ನಾಪತ್ತೆಯಾಗಿದ್ದ ಸಿಡಿ ಬಾಲೆ ಇಲ್ಲಿವರೆಗೂ ಯಾರಿಗೂ ದರ್ಶನ ಕೊಟ್ಟಿಲ್ಲ. ಆಕೆಯ ಆಗಮನಕ್ಕೆ ಪೊಲೀಸ್ ಹಾಗೂ ಎಸ್ಐಟಿ ಕಾದು ಕುಳಿತಿದೆ. ಈಗಾಗಲೇ ಸಿಡಿ ಲೇಡಿಗೆ ಹಾಜರಾಗುವಂತೆ ನೋಟೀಸ್ ಕೂಡ ಜಾರಿಗೊಳಿಸಿದೆ.
ಹೀಗಾಗಿ ಉನ್ನತ ಮೂಲಗಳ ಪ್ರಕಾರ ಯುವತಿ ಇಂದು ಪ್ರತ್ಯಕ್ಷವಾಗುವ ಸಾಧ್ಯತೆ ಇದೆ. ಒಂದು ಮೂಲದ ಪ್ರಕಾರ ಆಕೆ ಪೊಲೀಸರ ಮುಂದೆ ಹಾಜರಾಗುತ್ತಾಳೆ ಎನ್ನಲಾಗುತ್ತಿದೆ.
ವಿಡಿಯೋ ರಿಲೀಸ್ ಆದ ನಂತರ ಯುವತಿ ಕುಟುಂಬಸ್ಥರು ಆಕೆ ಕಾಣೆಯಾಗಿದ್ದಾಳೆ ಜೊತೆಗೆ ಆಕೆಯನ್ನು ಅಪಹರಿಸಲಾಗಿದೆ ಎಂದು ಬೆಳಗಾವಿಯಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಯುವತಿ ಮನ ಬದಲಾಯಿಸಿ ಇಂದು ಪೊಲೀಸರ ಮುಂದೆ ಆಕೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆಕೆ ನೇರವಾಗಿ ಬೆಳಗಾವಿ ಅಥವಾ ಬೆಂಗಳೂರಿನ ಆರ್ ಟಿ ನಗರ ಅಥವಾ ಎಸ್ ಐಟಿ ಬಂದು ಹಾಜರಾಗುತ್ತಾಳೆ ಎನ್ನಲಾಗುತ್ತಿದೆ.
ಈಗಾಗಲೇ ಯುವತಿ ಕುಟುಂಬಸ್ಥರು ನೀಡಿದ್ದ ದೂರು ಬೆಂಗಳೂರಿನ ಆರ್.ಟಿ ನಗರ ಪೊಲೀಸ್ ಠಾಣೆಗೆ ಕೇಸ್ ಶಿಫ್ಟ್ ಆಗಿದೆ. ಹೀಗಾಗಿ ಆಕೆ ಎಲ್ಲಿಗೆ ಬೇಕಾದರು ಬರಬಹುದು ಎನ್ನುವ ಗುಮಾನಿ ಇದೆ.