ತಮಿಳುನಾಡು ಚುನಾವಣೆ: BJP ಅಭ್ಯರ್ಥಿ, ನಟಿ ಖುಷ್ಬೂ ಹೊಂದಿರುವ ಆಸ್ತಿ ಎಷ್ಟು ಗೊತ್ತೇ?

ಸಿನಿಮಾ ಸ್ಟಾರ್‌ಗಳ ರಾಜಕೀಯ ಕಣವಾಗಿರುವ ತಮಿಳುನಾಡಿನ ವಿಧಾನಸಭಾ ಚುನಾವಣೆಯ ಕಾವು ಗರಿಗೆದರಿದೆ. ಬಿಜೆಪಿ ಸೇರಿರುವ ನಟಿ ಖುಷ್ಬೂ ಅವರು ತಮಿಳುನಾಡಿನ ಥೌಸಂಡ್ಸ್‌ ಲೈಟ್ಸ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದು, ನಾಮಪತ್ರ ಸಲ್ಲಿಸಿದ್ದಾರೆ.

ಈ ವೇಳೆ ತಾವು ಹೊಂದಿರುವ ಆಸ್ತಿಯ ವಿವರವನ್ನು ನೀಡಿದ್ದಾರೆ. ಅವರ ಬಳಿ ಒಟ್ಟು 22.55 ಕೋಟಿ ರೂ ಮೌಲ್ಯದ ಆಸ್ತಿ ಇರುವುದಾಗಿ ಘೋಷಿಸಿದ್ದಾರೆ.

ಒಟ್ಟು ಮೊತ್ತದ ಆಸ್ತಿಯ ಪೈಕಿ ತಮ್ಮ ಬಳಿ 17.99 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಇದ್ದು, ಅವರ ಪತಿ ಸಿ. ಸುಂದರ್ ಅವರ ಹೆಸರಿನಲ್ಲಿ 16.57 ಕೋಟಿ ರೂ ಮೌಲ್ಯದ ಆಸ್ತಿ ಇರುವುದಾಗಿ ತಿಳಿಸಿದ್ದಾರೆ. ಖುಷ್ಬೂ ಅವರ ಬಳಿ 4.55 ಕೋಟಿ ರೂ ಹಾಗೂ ಸುಂದರ್ ಬಳಿ 1.83 ಕೋಟಿ ರೂ ಚರಾಸ್ತಿ ಇದ್ದು, ಖುಷ್ಬೂ ಅವರ ಹೆಸರಿನಲ್ಲಿ 3.45 ಕೋಟಿ ರೂಪಾಯಿ ಸಾಲ ಹಾಗೂ ಅವರ ಪತಿ ಹೆಸರಿನಲ್ಲಿ 5.55 ಕೋಟಿ ರೂ ಸಾಲವಿರುವುದಾಗಿ ಘೋಷಿಸಿದ್ದಾರೆ.

ತಮಿಳುನಾಡಿ, ತೆಲಂಗಾಣ, ಊಟಿ ಸೇರಿದಂತೆ ಹಲವೆಡೆ ಫ್ಲಾಟ್‌, ಜಮೀನು,ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವುದಾಗಿ ದಾಖಲೆ ನೀಡಿದ್ದಾರೆ.

ಡಿಎಂಕೆ ಪಕ್ಷದಿಂದ ರಾಜಕೀಯಕ್ಕೆ ಕಾಲಿಟ್ಟಿದ್ದ ಖುಷ್ಬೂ 2014ರಲ್ಲಿ ಕಾಂಗ್ರೆಸ್ ಸೇರಿಕೊಂಡಿದ್ದರು. 2020 ಅಕ್ಟೋಬರ್ ತಿಂಗಳಿನಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರೆ. ಇದೀಗ ಡಿಎಂಕೆ ಅಭ್ಯರ್ಥಿ ಡಾ. ಎಳಿಲನ್ ವಿರುದ್ಧ ಕಣದಲ್ಲಿದ್ದಾರೆ.

ಇದನ್ನೂ ಓದಿ: ತಮಿಳುನಾಡು: ಅಣ್ಣಾಮಲೈ – ನಟಿ ಖುಷ್ಬೂಗೆ BJP ಟಿಕೆಟ್‌; ಕೇಸರಿ ಪಡೆ ಅಭ್ಯರ್ಥಿಗಳ ಪಟ್ಟಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights