ವೇಶ್ಯಾವಾಟಿಕೆಗೆ ಒಪ್ಪದ ಪತ್ನಿ ಖಾಸಗಿ ಭಾಗಕ್ಕೆ ಮದ್ಯದ ಬಾಟಲಿ ಸೇರಿಸಿದ ಪಾಪಿ ಪತಿ!
ವೇಶ್ಯಾವಾಟಿಕೆಗೆ ಒಪ್ಪದ ಪತ್ನಿ ಖಾಸಗಿ ಭಾಗಕ್ಕೆ ಪಾಪಿ ಪತಿ ಮದ್ಯದ ಬಾಟಲಿ ಸೇರಿಸಿದ ಕ್ರೂರವಾದ ಘಟನೆ ಒಡಿಶಾದ ಅಮನ್ ನಲ್ಲಿ ನಡೆದಿದೆ.
ಆರೋಪಿ ಚಂದನ್ ಆಚಾರ್ಯ 10 ವರ್ಷಗಳ ಹಿಂದೆ ಸಂತ್ರಸ್ತೆ ಮಹಿಳೆಯನ್ನು ಮಡುವೆಯಾಗಿದ್ದನು. ಚಂದನ್ ಆಚಾರ್ಯ ಆಟೋ ಡ್ರೈವರ್ ಆಗಿದ್ದು, ಒಡಿಶಾದ ಚಂದ್ರಶೇಖರ್ಪುರ ಪೊಲೀಸ್ ವ್ಯಾಪ್ತಿಯಲ್ಲಿ ಪದ್ಮಾವತಿ ವಿಹಾರದ ಬಾಡಿಗೆ ಮನೆಯಲ್ಲಿ ಪತ್ನಿ ಮತ್ತು ಅವರ 5 ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದನು.
ಈ ಪಾಪಿ ಗಂಡ ಹೆಂಡತಿಯನ್ನು ಹಣಕ್ಕಾಗಿ ಪ್ರತಿದಿನ ರಾತ್ರಿಯಲ್ಲಿ ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದನು. ಐದು ದಿನಗಳ ಹಿಂದೆ ಸಂತ್ರಸ್ತೆ ತನ್ನ ಗಂಡನ ನಿರ್ಧಾರವನ್ನು ವಿರೋಧಿಸಿದ್ದಾಳೆ. ಘಟನೆಯ ದಿನ ಸಂಜೆ ಆರೋಪಿ ಮದ್ಯಪಾನ ಮಾಡಿ ಮನೆಗೆ ಮರಳಿದ್ದಾನೆ. ಮಹಿಳೆಯನ್ನು ಕಬ್ಬಿಣದ ರಾಡ್ನಿಂದ ಹೊಡೆದು ಆಕೆಯ ಖಾಸಗಿ ಭಾಗಕ್ಕೆ ಮದ್ಯದ ಬಾಟಲಿಯನ್ನು ಸೇರಿಸಿದ್ದಾನೆ. ಇದಾದ ನಂತರ ಸಂತ್ರಸ್ತೆ ಪ್ರಜ್ಞೆ ತಪ್ಪಿದ್ದಾಳೆ.
ತನ್ನ ಅಗ್ನಿ ಪರೀಕ್ಷೆಯನ್ನು ತಾಯಿಗೆ ವಿವರಿಸಿದ ಸಂತ್ರಸ್ತೆ ಪತಿ ಚಂದ್ರನ ವಿರುದ್ಧ ಚಂದ್ರಶೇಖರ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
‘ಮದುವೆಯಾದ ಮೂರು ವರ್ಷಗಳ ನಂತರ ಆರೋಪಿ ತನ್ನನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಲು ಪ್ರಾರಂಭಿಸಿದನು ಮತ್ತು ಕಳೆದ ಏಳು ವರ್ಷಗಳಿಂದ ಹಾಗೆ ಮಾಡುತ್ತಿದ್ದಾನೆ’ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.
‘ತನ್ನ ಬೇಡಿಕೆಯನ್ನು ತಿರಸ್ಕರಿಸಿದಾಗಲೆಲ್ಲಾ ಆರೋಪಿ ಅವಳನ್ನು ಹೊಡೆಯುತ್ತಿದ್ದನು. ಮಾತ್ರವಲ್ಲದೇ ಅನೇಕ ಬಾರಿ ಅವಳು ಗಂಡನಿಂದ ಹಲ್ಲೆಗೊಳಗಾಗಿದ್ದಾಳೆ’ಎಂದು ಮಹಿಳೆ ಹೇಳಿದ್ದಾಳೆ.
ಚಂದ್ರಶೇಖರ್ಪುರ ಪೊಲೀಸರ ತಂಡ ಸಂತ್ರಸ್ತೆ ಮತ್ತು ಆಕೆಯ 5 ವರ್ಷದ ಮಗಳನ್ನು ರಕ್ಷಿಸಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಆರೋಪಿಯನ್ನು ಹೆಂಡತಿಯ ಖಾಸಗಿ ಭಾಗಕ್ಕೆ ಮದ್ಯದ ಬಾಟಲಿಯನ್ನು ಸೇರಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.