ಏಕಪತ್ನಿವ್ರತಸ್ಥ ಹೇಳಿಕೆ ವಿಚಾರವಾಗಿ ವಿಷಾದ ವ್ಯಕ್ತಪಡಿಸಿದ ಕೆ.ಸುಧಾಕರ್…!
ಏಕಪತ್ನಿವ್ರತಸ್ಥ ಹೇಳಿಕೆ ವಿಚಾರವಾಗಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಿಗ್ಗೆ ರಮೇಶ್ ಜಾರಕಿಹೊಳಿ ಸಿಡಿ ಬಗ್ಗೆ ಪ್ರಶ್ನಿಸಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಸುಧಾಕರ್ ಓಪನ್ ಚಾಲೆಂಜ್ ಹಾಕಿದ್ದು, “ರಮೇಶ್ ಕುಮಾರ್, ಮುನಿಯಪ್ಪ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜೆಡಿಎಸ್ ಕುಮರಾಣ್ಣವರು ಏಕಪತ್ನಿವ್ರತಸ್ಥರಾ? ಸತ್ಯಹರಿಶ್ಚಂದ್ರರಾ?ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರಾ? 224 ಶಾಸಕರ ತನಿಖೆ ಆಗಲಿ. ಯಾರ್ಯಾರು ಸಿಎಂ ಆಗಿದ್ದಾಗ ಏನೇನು ಮಾಡಿದ್ದಾರೆ? ಎಲ್ಲರ ಬಗ್ಗೆ ತನಿಖೆ ಆಗಲಿ. ಆಗ ಅವರ ಜೀವನದಲ್ಲಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರಾ? ಇಟ್ಟುಕೊಂಡಿಲ್ವಾ? ಅನ್ನೋದು ರಾಜ್ಯದ ಜನರಿಗೆ ತಿಳಿಯುತ್ತದೆ’ ಎಂದು ಸವಾಲು ಹಾಕಿದ್ದರು.
ಈ ಹೇಳಿಕೆ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ನಾಯಕರು ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಸದನದಲ್ಲೂ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಮಾತ್ರವಲ್ಲದೇ ಸುಧಾಕರ್ ಹೇಳಿಕೆ ಬಗ್ಗೆ ಸ್ಪೀಕರ್ ಹಾಗೂ ಕೆಲವೊಂದಿಷ್ಟು ಬಿಜೆಪಿ ನಾಯಕರು ಬೇಸರಗೊಂಡರು. ಹೀಗಾಗಿ ಸಿಎಂ ಬಿಎಸ್ ಯಡಿಯೂರಪ್ಪ ಸುಧಾಕರ್ ಗೆ ತರಾಟೆ ತಡೆದುಕೊಂಡಿದ್ದಾರೆ.
ಹೀಗಾಗಿ ಸಚಿವರು ಟ್ವೀಟ್ ಮಾಡುವ ಮೂಲಕ ವಿಷಾದವನ್ನು ವ್ಯಕ್ತಪಡಿಸಿದ್ದಾರೆ. ‘ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ವಿಷಾದವನ್ನು ವ್ಯಕ್ತಪಡಿಸುತ್ತೇನೆ. ನಮ್ಮ 17 ಜನರ ವಿರುದ್ದ ತೇಜೋವಧೆ ಯತ್ನಿಸಿದ್ದ ಕೆಲ ನಾಯಕರ ವಿರುದ್ಧ ಮಾತ್ರವೇ ನಾನು ಹೇಳಿಕೆ ನೀಡಿದ್ದೇನೆ ಎಂದು ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಆದರೆ ಸುಧಾಕರ್ ಹೇಳಿಕೆಯಿಂದ ಟ್ವೀಟ್ ಮೂಲಕ ವಿಷಾದ ವ್ಯಕ್ತಪಡಿಸುವದಲ್ಲ. ರಾಜ್ಯದ ಜನರ ಮುಂದೆ ಕ್ಷಮೆ ಕೇಳಬೇಕು. ‘ಸುಧಾಕರ್ ಹೇಳಿಕೆಯಿಂದ ಮಹಿಳಾ ಶಾಸಕಿಯರಿಗೆ ಎಷ್ಟು ಅವಮಾನ ಆಗುತ್ತದೆ? ಹೀಗಾಗಿ 224 ಶಾಸಕರು ಹಾಗೂ ರಾಜ್ಯದ ಜನರ ಮುಂದೆ ಕ್ಷಮೆ ಕೇಳಬೇಕು’ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

