ಬಿಗ್ ಬಾಸ್ ಮನೆಯಲ್ಲಿ ಮಾವ ಅಳಿಯನಿಗೂ ಗಲಾಟೆ : ಲ್ಯಾಗ್ ಮಂಜ ಕೋಪಗೊಂಡಿದ್ದೇಕೆ?
ಬಿಗ್ ಬಾಸ್ ಮನೆಯಲ್ಲಿ ಚದರಂಗದಾಟ ಮುಂದೆವರೆದಿದೆ. ಈ ಟಾಸ್ಕ್ ನಲ್ಲಿ ಮನೆಯ ಎಲ್ಲಾ ಸದಸ್ಯರು ಎರಡು ತಂಡಗಳಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮನೆಯ ಎಲ್ಲಾ ಸದಸ್ಯರು ಕಣ್ಣು ಅದ್ಯಾಕೋ ಪ್ರಶಾಂತ್ ಸಂಬರಗಿ ಮೇಲೆ ಬಿದ್ದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಮಾವ ಅಳಿಯನಿಗೂ ಗಲಾಟೆ ನಡೆದಿದೆ.
ಹೌದು… ಬಿಗ್ ಬಾಸ್ ಸ್ಪರ್ಧಿಗಳ ಅಸಲಿ ಮುಖವಾಡ ದಿನಕಳೆದಂತೆ ಬಯಲಾಗುತ್ತಿದೆ. ಈಗಾಗಲೇ ತುಪ್ಪ ಖಾಲಿ ಮಾಡಿದ್ದಾರೆಂದು ಆರೋಪ ಹೊತ್ತಿರುವ ಪ್ರಶಾಂತ್ ಮಂಜನ ಕೆಂಗಣ್ಣಿಗೆ ಗುರಿಯಾದ್ರು. ನಿನ್ನೆ ನೀಡಿದ ಟಾಸ್ಕ್ ನಲ್ಲಿ ಚದುರಂಗದಾಟ ಮುಂದುವರೆದಿತ್ತು. ಕಪ್ಪು ಬಿಳಿಯ ಎರಡು ತಂಡ ಪೈಪೋಟಿಗಿಳಿದಿದ್ವು. ಬಿಳಿ ತಂಡಕ್ಕೆ ಚೆಕ್ ನೀಡಿದ್ದ ಕಪ್ಪು ತಂಡ ರಾಣಿ ಪಟ್ಟ ತೆಗೆದುಕೊಂಡ ಅರವಿಂದ ಅವರನ್ನು ಸೋಲಿಸಲು ಆಯ್ಕೆ ಮಾಡಿಕೊಂಡಿತ್ತು.
ಗಾರ್ಡನ್ ಏರಿಯಾದಲ್ಲಿ ಅರವಿಂದ್ ಟಾಸ್ಕ್ ಎದುರಿಸುತ್ತಿರುವಾಗ ಕಪ್ಪು ತಂಡವನ್ನು ಹೊರತುಪಡಿಸಿ ಬಿಳಿ ತಂಡದ ಯಾವುದೇ ಸದಸ್ಯರು ಇರುವಂತಿರಲಿಲ್ಲ. ಬಿಳಿ ತಂಡದ ಸದಸ್ಯರು ಲಿವಿಂಗ್ ಏರಿಯಾದಿಂದ ಮಾತ್ರ ಅರವಿಂದ ಆಟವನ್ನು ನೋಡಬಹುದಿತ್ತು. ಈ ವೇಳೆ ಆಟದಲ್ಲಿ ವಿನ್ ಆದ ಅರವಿಂದ್ ಅವರನ್ನು ಭೇಟಿಗೆ ಸಂತಸದಲ್ಲಿ ಪ್ರಶಾಂತ್ ಸಂಬರಗಿ ಹೊರಬಂದರು. ಈ ವೇಳೆ ಬಿಳಿ ತಂಡ ಪ್ರಶಾಂತ್ ಸಂಬರಗಿಯನ್ನು ಬಿಗ್ ಬಾಸ್ ಆದೇಶಕ್ಕೂ ಮೊದಲು ಹೊರಬಂದಿದ್ದನ್ನು ನಿರಾಕರಿಸಿತು.
ಇದು ತಪ್ಪು ಎಂದು ಮಂಜು ಪದೇ ಪದೇ ಪ್ರಶಾಂತ್ ಅವರಿಗೆ ಹೇಳುತ್ತಲೇ ಇದ್ದರು. ಇದರಿಂದ ಕೋಪಗೊಂಡ ಮಾವ(ಪ್ರಶಾಂತ್) ಮಂಜುಗೆ ಗಟ್ಟಿ ಧ್ವನಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈದಾಡಿದರು. ಈ ವೇಳೆ ಬಿಳಿ ತಂಡ ಮಂಜು ಅವರಿಗೆ ಸಮಾಧಾನ ಮಾಡಿದರಾದರೂ ಪ್ರಶಾಂತ್ ಅವರ ಬಳಿಗೆ ಅರವಿಂದ್ ಬಿಟ್ಟರೆ ಯಾರೂ ಹೋಗಿಲ್ಲ.
ಹೀಗಾಗಿ ಮೆನಯಲ್ಲಿ ದಿನಕಳೆದಂತೆ ಪ್ರಶಾಂತ್ ಟಾರ್ಗೇಟ್ ಆಗುತ್ತಿದ್ದಾರಾ? ಅಥವಾ ಟಾರ್ಗೇಟ್ ಮಾಡಲಾಗುತ್ತಿದಿಯಾ? ಇಂತೆಲ್ಲಾ ವಿಚಾರಗಳು ವಾರದ ಕೊನೆಯಲ್ಲಿ ಕಿಚ್ಚನ ಬಾಯಿಂದಲೇ ಕೇಳಿ ತಿಳಿದುಕೊಳ್ಳಬೇಕು.