ಸಿಡಿ ಯುವತಿ ನೀಡಿದ ದೂರಿನಲ್ಲಿ ಏನಿದೆ..? ಇಲ್ಲಿದೆ ಸಂಪೂರ್ಣ ಮಾಹಿತಿ….

ಗೆ,

ಬೆಂಗಳೂರು ನಗರ ಪೊಲೀಸ್ ಆಯುಕ್ತರು

ಇನ್ವೆಂಟ್ರಿ ರಸ್ತೆ, ಬೆಂಗಳೂರು

ವಿಷಯ : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಕಿಂಗ ಸಂಪರ್ಕ ಮಾಡಿ,ವಿಡಿಯೋ ಕರೆ ಮೂಲಕ ಅಶ್ಲೀಲ ಮಾತು ನಗ್ನವಾಗಿ ಮಾತನಾಡಲು ಪುಸಲಾಯಿಸಿ ಕೆಲಸ ಕೊಡಿಸದೆ ವಂಚಿಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ದೂರು.

ಮಾನ್ಯರೇ,

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಬೆಂಗಳೂರು ನಗರದಲ್ಲಿ ುದ್ಯೋಗ ಹುಡುಕೊಕೊಂಡು ಬಂದು ನೆಲೆಸಿದ್ದು ಜಿರುಚಿತ್ರ ಮಾಡುವ ಸಲುವಾಗಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರನ್ನು ಒಮ್ಮೆ ಬೇಟಿ ಮಾಡಿದ್ದು ನಂತರ ಅವರು ನನ್ನ ಮೊಬೈಲ್ ನಂಬರ್ ಪಡೆದು ಕರೆ ಮಾಡುವುದಾಗಿ ತಿಳಿಸಿದರು. ನಂತರ ಅವರು ಕರೆ ಮಾಡಿ ನನ್ನ ಬಗ್ಗೆ ಕುಟುಂಬದ ಬಗ್ಗೆ ವಿಚಾರಿಸಿ ಸಲುಗೆ ಇಂದ ಮಾತನಾಡಲು ಆರಂಭಿಸಿದರು.

ಸಚಿವರು ನನ್ನನ್ನು ಅಷ್ಟು ಕಾಳಜಿಯಿಂದ ಮಾತನಾಡಿಸಿದ್ದು ನನಗೆ ತುಂಬಾ ಖುಷಿ ಆಗಿ ಅವರನ್ನು ಗೌರವದಿಂದ ಮಾತನಾಡಿಸಿದೆ. ಅಗಾಗ್ಗೆ ನನಗೆ ಕರೆ ಮಾಡಿ ಮಾತನಾಡಲು ಆರಂಭಿಸಿದರು. ನನಗೆ ತಮ್ಮ ಪ್ರಭಾವ ಬಳಸಿ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿದರು. ಆದರೆ ನೌಕರಿ ಕೊಡಿಸುವುದಾಗಿ ಹೇಳಿ ಬದಲಾಗಿ ನನಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಕೇಳಿದರು. ಅವರನ್ನು ಟಿವಿಯಲ್ಲಿ ನೋಡಿದ್ದು ಮಂತ್ರಿ ಈ ರೀತಿ ಹೇಳಿದ ಮೇಲೆ ಕೆಲಸ ಕೊಟ್ಟೇ ಕೊಡಿಸುತ್ತಾರೆ ಎಂದು ನಂಬಿದ್ದೆ. ನನ್ನ ಬಳಿ ಕೊಡಲ ಲಕ್ಷಾಂತರ ಹಣವಿಲ್ಲದೆ ಇರುವುದನ್ನು ಮುಂಚೆಯೇ ತಿಳಿದುಕೊಂಡು ಹಣದ ಬದಲು ಅವರ ಜೊತೆಗೆ ಸಹಕರಿಸಿ ಖುಷಿ ನೀಡಬೇಕು ಎಂದು ಕೇಳಿದ್ದರಿಂದ ನಡೆದುಕೊಂಡು ಬಂದೆ. ಅವರು ದೆಹಲಿಯ ಕರ್ನಾಟಕ ಭವನದಲ್ಲಿ ಉಳಿದುಕೋಮಡಿದ್ದೇನೆ ಎಂದು ವಿಡಿಯೋ ಕರೆ ಮಾಡಿ ನನ್ನೊಂದಿಗೆ ಲೈಂಗಿಕ ವಿಚಾರಗಳನ್ನು ಮಾತನಾಡಿ ನನಗೆ ಬಟ್ಟೆ ತೆಗೆದು ನಗ್ನಳಾಗಿ ಖಾಸಗಿ ಅಂಗಾಂಗಗಳನ್ನು ತೋರಿಸುವಂತೆ ಕೇಳಿದರು. ನಾನು ಅವರು ಹೇಳಿದಂತೆಯೇ ಮಾಡಿದೆ. ನಗ್ನವಾಗಿ ದೇಹದ ಅಂಗಾಂಗಗಳನ್ನು ತೋರಿಸಿದೆ. ಅದಕ್ಕೆ ಅವರು ಅಶ್ಲೀಲವಾಗಿ ಮಾತನಾಡಿದರು. ಪ್ರಭಾವಿ ವ್ಯಕ್ತಿ ಆದ್ದರಿಂದ ನಾನು ಅವರು ಹೇಳಿದಂತೆ ಮಾಡಿದೆ. ನಂತರ ಬೆಂಗಳೂರಿಗೆ ಬಂದು ನನ್ನ ವಿಳಾಸಕ್ಕೆ ಬಾ ನಾನು ಮಾತನಾಡಬೇಕು ನಿನ್ನ ಕೆಸಲದ ವಿಚಾರ ಎಂದರು. ನಾನು ಅವರು ಹೇಳಿದಂತೆ ಅಪಾರ್ಟ್ ಮೆಂಟ್ ಗೆ ಹೋದೆ. ಅವರು ನನ್ನೊಂದಿಗೆ ಅಶ್ಲೀಲವಾಗಿ ಮಾತನಾಡಿ ಅವರು ತಮ್ಮ ರೂಂ ಗೆ ಕರೆದುಕೊಂಡು ಹೋಗಿ ಬಟ್ಟೆ ತಗೆಸಿ ಲೈಂಗಿಕ ಕ್ರಿಯೆ ಮಾಡಿದರು. ಇದೇ ರೀತಿ ಎರಡು ಬಾರಿ ಅವರು ಅಪಾರ್ಟ್ಮೆಂಟ್ ಗೆ ಕರೆಸಿ ಲೈಂಗಿಕ ಕ್ರಿಯೆ ನಡೆಸಿ ಅಶ್ಲೀಲವಾಗಿ ಮಾತನಾಡಿರುತ್ತಾರೆ.

ನಾನು ಎದುರು ಮಾತನಾಡಲು ಹೆದರಿ ಅವರು ಕೇಳಿದಂತೆ ಮಾಡಿರುತ್ತೇನೆ. ನಂತರ ಸರ್ಕಾರಿ ನೌಕರಿ ಬಗ್ಗೆ ಕೇಳಿದಾಗ ಸ್ವಲ್ಪ ಹಣ ಬೇಕಾದರೆ ಕೇಳು ಕೆಲಸದ ಕತೆ ಆ ಮೇಲೆ ನೋಡೊಣ ಎಂದು ಅವಾಚ್ಯ ಮಾತನಾಡಿದ್ದರು.

ನಾನು ಯಾವಾಗ ಅವರಿಗೆ ನನ್ನನ್ನು ಹೇಗೆ ಬೇಕೋ ಹಾಗೆ ಬಳಸಿಕೊಂಡು ಈಗ ಯಾಕೆ ಕೆಲಸ ಕೊಡುತ್ತಿಲ್ಲ ಎಂದು ಕೇಳಿದಾಗ ಹೋಗೇ ಸೂಳೆ ಎಮದು ಬೈದರು.ಇದಾದ ನಂತರ ಅವರು ನನ್ನೊಂದಿಗೆ ಮಾತನಾಡಿದ ಮತ್ತು ಲೈಂಗಿಕ ಸಂಭೋಗ ನಡೆಸಿದ ಅಶ್ಲೀಲ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ನಾನು ಇವರ ವಿರುದ್ಧ ದೂರು ನೀಡದಂತೆ ಈ ರೀತಿ ಕುತಂತ್ರವನ್ನು ರಮೇಶ್ ಜಾರಕಿಹೊಳಿ ಮಾಡಿರುತ್ತಾರೆ. ಹಣವಂತರು, ಪ್ರಭಾವಿಗಳಾದದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಂದ ನನಗೂ ಮತ್ತು ನನ್ನ ಕುಟುಂಬದ ಸದಸ್ಯರಿಗೂ ಜೀವಬೆದರಿಕೆ ಇದೆ.

ನಾನು ದೂರು ನೀಡದಂತೆ ತಡೆಯಲು ಮತ್ತು ಅವರ ಕೈಗೆ ಸಿಕ್ಕರೆ ಕೊಂದು ಬಿಡಲು ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ದಯಮಾಡಿ ತಾವು ನನಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಭದ್ರತೆ ನೀಡಿ ಅಶ್ಲೀಲ ಲೈಂಗಿಕವಾಗಿ ಬಳಸಿಕೊಂಡು ಕೆಲಸ ಕೊಡಿಸಿದೇ ಮೋಸ ಮಾಡಿ ಅಶ್ಲೀಲವಾಗಿ ಬಳಸಿಕೊಂಡು ಕೆಲ ನಿಂದಿಸಿ ಕೊಲೆ ಮಾಡಿಸಲು ಪ್ರಯತ್ನ ಮಾಡುತ್ತಿರುವ ರಮೇಶ್ ಜಾರಕಿಹೊಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ. ನಾನು ನೇರವಾಗಿ ಯಾವ ಠಾಣೆಗೂ ಬಂದು ದೂರು ನೀಡದಂತೆ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದ್ದಾರೆ. ನ್ನ ಪರವಾಗಿ ಯಾರೂ ಮಾತನಾಡದಂತೆ ತೇಜೋವಧೆ ಮಾಡುತ್ತಿದ್ದಾರೆ. ಹಾಗೂ ನನಗೆ ಸಹಾಯ ಮಾಡಿದವರಿಗೆ ಹಾಗೂ ಮಾಡುತ್ತಿರುವವರಿಗೆ ಟಾರ್ಗೇಟ್ ಮಾಡಿ ಅವರ ಮನೆ ಮತ್ತು ಕುಟುಂಬಸ್ಥರಿಗೆ ಹಿಂಸೆ ಕೊಡುತ್ತಿರುವದರಿಂದ ಬಹಳ ನೋವಾಗಿದೆ.

ನನಗೆ ಭದ್ರತೆ ಇಲ್ಲದ ಕಾರಣ ಕೈಯಲ್ಲಿ ಬರೆದು ಈ ದೂರನ್ನು ನನಗೆ ಪರಿಚಿತರಾದ ವಕೀಲರಾದ ಜಗದೀಶ್ ಅವರ ಮೂಲಕ ಕಳುಹಿಸುತ್ತಿದ್ದೇನೆ. ದಯವಿಟ್ಟು ನನಗೆ ಆಗುತ್ತಿರುವ ಮಾನಸಿಕ ಹಿಂಸೆ ಮತ್ತು ನನ್ನ ಕುಟುಂಬದ ಸದಸ್ಯರು ಎದುರಿಸುತ್ತಿರುವ ಒತ್ತಡ ಅವರನ್ನು ಆತ್ಮಹತ್ಯೆಗೆ ಯತ್ನಿಸುವಂತೆ ಮಾಡಿದ್ದು ತಾವು ರಮೆಶ್ ಜಾರಕಿಹೊಳಿ ಮತ್ತು ಅವರ ಕಡೆಯವರಿಂದ ನಮಗೆ ಯಾವುದೇ ಅಪಾಯವಾಗದಂತೆ ರಕ್ಷಣೆ ಕೊಡಬೇಕೆಂದು ಕೈಮುಗಿದು ಪ್ರಾರ್ಥನೆ ಮಾಡುತ್ಥೇನೆ.

ನಿಮ್ಮ ವಿಶ್ವಾಸಿ

26-3-2021

 

ಯುವತಿ ಕೈ ಬರಹದಲ್ಲಿ.. ನನ್ನನ್ನು ಕೊಲೆ ಮಾಡುವುದಕ್ಕೆ ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ ಎಂದು ದೂರು | cd lady complaint copy against ramesh jarkiholi submitted by advocate jagadesh kn mahadev ...

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights