ನಕ್ಷತ್ರದ ಧೂಳು: ದೃವತಾರೆ ರೊಹಿತ್‌ ವೇಮುಲಾ ಜೀವನಾಧಾರಿತ ನಾಟಕ ಪ್ರದರ್ಶನ!

ಹೈದರಾಬಾದ್‌ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಹೋರಾಟಗಾರ, ಜಾತಿ ತಾರತಮ್ಯ ವಿರೋಧಿ ಹೋರಾಟದ ದೃವತಾರೆ ರೋಹಿತ್ ವೇಮುಲಾ ಅವರ ಜೀವನಾಧಾರಿತ ‘ನಕ್ಷತ್ರದ ಧೂಳು’ ಕನ್ನಡ ನಾಕಟ ಪ್ರದರ್ಶನಗೊಳ್ಳಲು ಸಿದ್ದವಾಗಿದೆ. ಮಾರ್ಚ್‌ 27ರಂದು ರಾಯಚೂರಿನ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಾಟಕ ಪ್ರದರ್ಶನವಾಗಲಿದೆ.

ವಿಶ್ವವಿದ್ಯಾನಿಲಯಗಳು ಜಾತಿಗ್ರಸ್ತವಾಗಿರುವುದನ್ನು ವಿರೋಧಿಸಿ, ಕ್ಯಾಂಪಸ್‌ಗಳಲ್ಲಿನ ಜಾತಿ ತಾರತಮ್ಯ ಮತ್ತು ಜಾತಿವಾಗಿ ಮನಸ್ಸಿತಿಯನ್ನು ವಿರೋಧಿಸಿ 2016ರಲ್ಲಿ ಸಾವಿಗೆ ಬಲಿಯಾದ ವಿದ್ಯಾರ್ಥಿ ಹೋರಾಟಗಾರ ರೋಹಿತ್‌ ವೇಮೂಲ ಅವರನ್ನು ಬದುಕನ್ನು ನಾಟಕದಲ್ಲಿ ಎಲ್ಲರ ಮುಂದಿಡುವ ಪ್ರಯತ್ನವನ್ನು ಸಾಮಾಜಿಕ ಹೋರಾಟಗಾರ ಹರ್ಷಕುಮಾರ್‌ ಕುಗ್ವೆ ಅವರು ಮಾಡಿದ್ದಾರೆ.

ಕುಗ್ವೆ ಅವರು ರಚಿಸಿರುವ ಏಕವ್ಯಕ್ತಿ ರಂಗಪ್ರಯೋಗದ ‘ನಕ್ಷತ್ರದ ಧೂಳು’ ನಾಕಟವನ್ನು ರಂಗ ವೇದಿಕೆಯ ಮೇಲೆ ರಂಗಕಲಾವಿದ ಮತ್ತು ಸಾಮಾಜಿಕ ಹೋರಾಟಗಾರ ಲಕ್ಷ್ಮಣ್‌ ಮಂಡಲಗೆರಾ ಅವರು ಪ್ರಸ್ತುತಿಪರಿಸಲಿದ್ದಾರೆ. ಈ ನಾಟಕವನ್ನು ಪ್ರವೀಣ್ ರೆಡ್ಡಿ ಗುಂಜಹಳ್ಳಿಯವರು ನಿರ್ದೇಶಿಸಿದ್ದಾರೆ. ‘ಸಮುದಾಯ ರಾಯಚೂರು’ ನಾಟಕ ಪ್ರದರ್ಶನ ಆಯೋಜಿಸುತ್ತಿದೆ.

ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಷಿಯೆಷನ್ ಸಂಘಟನೆ ಮೂಲಕ ರೋಹಿತ್ ವೇಮುಲಾ ಯಾರೆಂದು ಪ್ರಪಂಚಕ್ಕೆ ಗೊತ್ತಾಗುವ ಮೊದಲೇ ಆತ ಕಾಶ್ಮೀರದ ಪ್ರಜೆಗಳ ಮೇಲಿನ ಹಲ್ಲೆಯನ್ನು ವಿರೋಧಿಸಿದ್ದ.. “ಕೆಲವರಿಗೆ ಬದುಕೇ ಶಾಪ. ನನಗೆ, ನನ್ನ ಹುಟ್ಟೇ ಮಾರಣಾಂತಿಕ ಆಘಾತ” ಎಂದು ಬರೆದುಕೊಂಡಿದ್ದ ರೋಹಿತ್ ವೇಮುಲಾ ಜಾತಿಯನ್ನು ಕಿತ್ತುಹಾಕಲು ಬಯಸಿದ್ದ. ಏಕೆಂದರೆ ಹುಟ್ಟಿನಿಂದಲೇ ಅವನ್ನನ್ನು ತೀವ್ರವಾಗಿ ಅದು ಕಾಡಿತ್ತು. ಜಾತಿವಿರುದ್ಧ ದನಿಯೆತ್ತಿದಾಗ ಆತನೊಂದಿಗೆ ಇದ್ದದ್ದು ಸಾವಿತ್ರಿಬಾಯಿ ಫುಲೆ ಮತ್ತು ಬಾಬಾಸಾಹೇಬರ ಚಿತ್ರ ಮಾತ್ರ..

How I killed Rohith Vemula | Outlook India Magazine

ಅಂದು ರೋಹಿತ್ ವೇಮುಲಾನನ್ನು ಜಾತಿ ತೀವ್ರವಾಗಿ ಕಾಡಿತ್ತು. ಆತ ಪಿಎಚ್‌ಡಿ ಮಾಡುತ್ತಿದ್ದಾಗ ಎಬಿವಿಪಿ ಗೂಂಡಾಗಳು ಕಾಡಿದರು. ಬ್ರಾಹ್ಮಣವಾದಿ ವಿವಿಯ ಆಡಳಿತ ಮಂಡಳಿ 7 ತಿಂಗಳು ಆತನಿಗೆ ಫೆಲೋಶಿಪ್ ತಡೆ ಹಿಡಿದಿದ್ದಲ್ಲದೇ ಆತನನ್ನು ಕಾಲೇಜು ಮತ್ತು ಹಾಸ್ಟೆಲ್‌ನಿಂದ ಹೊರಹಾಕಿತ್ತು. ಆತ ಆತ ಅಂಬೇಡ್ಕರ್, ಸಾವಿತ್ರಿ ಬಾಫುಲೆ ಫೋಟೊ ಹಿಡಿದು ಕ್ಯಾಂಪಸ್ಸಿನ ’ವೆಲಿವಾಡ’ದಲ್ಲಿ ಹೋರಾಟ ಆರಂಭಿಸಿದ್ದ. ಆಗ ಬಹುತೇಕರು ಆತನ ಬೆಂಬಲಕ್ಕೆ ನಿಲ್ಲಲಿಲ್ಲ. ಕಾರಣ ಏನೇ ಇರಬಹುದು ಆತ ಒಂಟಿಯಾದ. ಕೊನೆಗೂ ಪ್ರಭುತ್ವ ಆತನನ್ನು ಬಲಿ ತೆಗೆದುಕೊಂಡಿತು.

ತನ್ನ ಕ್ಯಾಂಪಸ್‌ನಲ್ಲಿನ ಡೆಮಾಕ್ರಸಿಯನ್ನಷ್ಟೇ ಬಯಸದ ರೋಹಿತ್ ಇಡೀ ಸಮಾಜದಲ್ಲಿ ಡೆಮಾಕ್ರಸಿಯನ್ನು ಹಂಬಲಿಸಿದ್ದರು. ಅದಕ್ಕಾಗಿಯೇ “ಆಕ್ಟಿವಿಸಂ, ಈ ಗ್ರಹದ ಮೇಲೆ ವಾಸಿಸಲು ನಾನು ಕೊಡುವ ಬಾಡಿಗೆ” ಎಂಬ ಆಲಿಸ್ ವಾಕರ್‌ರವರ ನುಡಿಗಳನ್ನು ತನ್ನ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದರು. ಸಫ್ದಾರ್ ಹಶ್ಮಿ ಅವರು 1989 ರ ಜನವರಿ 2 ರಂದು ನಾಟಕವನ್ನು ಪ್ರದರ್ಶಿಸುತ್ತಿದ್ದಾಗಲೇ ಅಸಷ್ಣುತೆಯ ಪ್ರತಿಪಾದಕರಿಂದ ಕೊಲ್ಲಲ್ಪಟ್ಟರು. ಈ ಕುರಿತು “ಅಸಹಿಷ್ಣುತೆಯ ಕೋರೆಹಲ್ಲುಗಳಿಗೆ ನಾವು ಸುಂದರ ಕಲಾವಿದ ಮತ್ತು ಧೈರ್ಯಶಾಲಿ ಆತ್ಮವನ್ನು ಕಳೆದುಕೊಂಡಿದ್ದೇವೆ” ಎಂದು ಬರೆದುಕೊಂಡಿದ್ದ ರೋಹಿತ್‌ನನ್ನು ನಾವೀಗ ಕಳೆದುಕೊಂಡಿದ್ದೇವೆ.

ರೋಹಿತ್ ವೇಮುಲಾ ದೈಹಿಕವಾಗಿ ನಮ್ಮಿಂದ ದೂರವಾಗಿದ್ದರೂ ಆತನ ಚೈತನ್ಯವನ್ನು ನಾವು ಉಸಿರಾಡುತ್ತಿದ್ದೇವೆ. ಹಾಗಾಗಿಯೇ ಇಂದು ಅವರ ನಕ್ಷತ್ರದ ಧೂಳು ನಾಟಕ ಮತ್ತೆ ಸದ್ದು ಮಾಡುತ್ತಿದೆ. ಆತನ ವಿಚಾರಗಳೇನು? ಆತನ ಬದುಕಿನ ಗುರಿಯೇನು? ಆತ ವಿಜ್ಞಾನವನ್ನು ಅಷ್ಟರ ಮಟ್ಟಿಗೆ ಹಚ್ಚಿಕೊಂಡಿತ್ತಾದರೂ ಹೇಗೆ? ಈ ಕುರಿತು ತಿಳಿಯಲು ನೀವು ಸಹ ಈ ನಾಟಕ ನೋಡಿ. ರಾಯಚೂರು ಜಿಲ್ಲೆಯ ಪ್ರದರ್ಶನದ ನಂತರ ನಿಮ್ಮ ಜಿಲ್ಲೆ-ತಾಲ್ಲೂಕುಗಳಲ್ಲಿ ನಾಟಕ ಆಯೋಜಿಸಲು ಕಲಾವಿದರಾದ ಲಕ್ಷ್ಮಣ್ ಮಂಡಲಗೇರರವನ್ನು (8762718341) ಸಂಪರ್ಕಿಸಿ.

ಇದನ್ನೂ ಓದಿ: ಅಧಿವೇಶನದಲ್ಲಿ ಅಂಗೀಕಾರಗೊಂಡ ಮಸೂದೆಗಳನ್ನು ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ: ಕಾಂಗ್ರೆಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights