‘ಪ್ರಭಾವಿ ಸ್ವಾಮೀಜಿ ಮೂಲಕವೂ ಸಿಡಿ ಯುವತಿಗೆ ಒತ್ತಡ’ – ವಕೀಲ ಸೂರ್ಯ ಮುಕುಂದರಾಜ್ ಆರೋಪ

ಸಿಡಿ ಲೇಡಿ ನ್ಯಾಯಾಧೀಶರ ಮುಂದೆ ಹಾಜರಾಗಿದ್ದೇ ಆಗಿದ್ದು ಪ್ರಭಾವಿ ವ್ಯಕ್ತಿಗಳಿಂದ ಒತ್ತಡ ಹೆಚ್ಚಾಗುತ್ತಿದೆ. ಈಗಾಗಲೇ ಸಿಡಿ ಯುವತಿ ಕುಟುಂಬಸ್ಥರು ಹೇಳೋ ಪ್ರಕಾರ ಯುವತಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒತ್ತಡವಿದೆ. ಇತ್ತ ಸಿಡಿ ಲೇಡಿ ಹೇಳೋ ಪ್ರಕಾರ, ತನ್ನ ಕುಟುಂಬಸ್ಥರಿಗೆ ರಮೇಶ್ ಜಾರಕಿಹೊಳಿ ಒತ್ತಡ ಇದೆ. ಇದರ ಮಧ್ಯೆ ಯುವತಿ ಪರ ವಕೀಲ ಸೂರ್ಯಮು ಕುಂದರಾಜ್ ಹೇಳೋ ಪ್ರಕಾರ, ‘ಸ್ವಾಮೀಜಿ ಮೂಲಕವೂ ಯುವತಿಗೆ ಒತ್ತಡ’ ಹೆಚ್ಚಾಗಿದೆಯಂತೆ.

ಹೌದು… ಮಾಧ್ಯಮದ ಮುಂದೆ ಮಾತನಾಡಿದ ಸಿಡಿ ಲೇಡಿ ಪರ ವಕೀಲ ಸೂರ್ಯ ಮುಕುಂದರಾಜ್, ” ಯುವತಿ ಹೇಳುವ ಪ್ರಕಾರ ಇವತ್ತಿನವರೆಗೂ ಅವರು ಎಸ್ ಟಿ ಸಮಾಜದವರು ಎಂದು ಯಾರ ಬಳಿಯೂ ಹೇಳಿಕೊಂಡಿಲ್ಲ. ಅವರ ಭಾಗದ ಬಲಾಢ್ಯ ವ್ಯಕ್ತಿ ಹಣವಂತ ವ್ಯಕ್ತಿಯಿಂದ ಯುವತಿಗೆ ಒತ್ತಡ ಹೆಚ್ಚಾಗುತ್ತಿದೆ. ಯುವತಿ ಸ್ವತಂತ್ರವಾಗಿ ಹೇಳಿಕೆ ಕೊಡುತ್ತಿದ್ದಾಳೆ. ಆಕೆಗೆ ಯಾವುದೇ ಒತ್ತಡ ಇಲ್ಲ” ಎಂದಿದ್ದಾರೆ.

” ನಮಗೂ ಬೆಳಗಾವಿ ಭಾಗದ ಬಲಾಢ್ಯ ವ್ಯಕ್ತಿ ಹಣವಂತ ವ್ಯಕ್ತಿಯಿಂದ ಬೆದರಿಕೆ ಬಂದಿದೆ. ನಮ್ಮ ಸಮೂದಾಯದ ಸಮಸ್ಯೆಯನ್ನು ನಾವೇ ಸರಿ ಮಾಡಿಕೊಳ್ಳುತ್ತೇವೆ. ನಾವೇ  ಬಗೆ ಹರಿಸಿಕೊಳ್ಳುತ್ತೇವೆ. ನೀವು ವಕೀಲರು ಯಾಕೆ ಮಧ್ಯ ಬರುತ್ತೀರಾ? ಎಂಬ ಬೆದರಿಕೆ ನಮಗೂ ಇದೆ ಎಂದು ಸೂರ್ಯಮುಕುಂದರಾಜ್ ಹೇಳಿದ್ದಾರೆ.

“ನಾವು ಯಾರ ಬೆದರಿಕೆಗೂ ಹೆದರುವುದಿಲ್ಲ. ಯಾರೇ ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲಿ. ಅದು ಬಿಜೆಪಿ ಆಗಿರಲಿ ಕಾಂಗ್ರೆಸ್ ಆಗಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಅದೇ ನಮ್ ಉದ್ದೇಶ ಕೂಡ. ನಾವು ಯಾರ ಪರವಾಗಿಯೂ ಇಲ್ಲ. ವಿರುದ್ಧವಾಗಿಯೂ ಇಲ್ಲ. ತನಿಖೆಯಾಗಲಿ. ಸತ್ಯ ಹೊರಬರಲಿ” ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಈ ಎಲ್ಲಾ ಒತ್ತಡಗಳ ಮಧ್ಯೆ ಎಸ್ಐಟಿ ಯುವತಿಯನ್ನು ವಿಚಾರಣೆಗೂ ಒಳಪಡಿಸಿದೆ. ಆಕೆ ಬಳಿ ಇದ್ದ ಸಾಕ್ಷಿ ಗಳನ್ನೆಲ್ಲವೂ ಪಡೆದುಕೊಂಡಿದೆ. ಆಕೆಯನ್ನು ವೈದ್ಯಕೀಯ ತಪಾಸಣೆಗೂ ಒಳಪಡಿಸಿದೆ. ಆಕೆಯನ್ನು ಕರೆದುಕೊಂಡ ಸ್ಥಳ ಮಹಜರ ಕೂಡ ಮಾಡುತ್ತಿದೆ. ಇದು ಇನ್ಯಾವ ಹಂತಕ್ಕೆ ಹೋಗುತ್ತೋ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.