ದೇವಾಲಯವನ್ನು ಅಪವಿತ್ರಗೊಳಿಸಿದ ವ್ಯಕ್ತಿ ಸಾವು : ದೇವರ ಕೋಪಕ್ಕೆ ಹೆದರಿ ಶರಣಾದ ಸ್ನೇಹಿತರು!

ದೇವಾಲಯವನ್ನು ಅಪವಿತ್ರಗೊಳಿಸಿದ ವ್ಯಕ್ತಿ ಸಾವನ್ನಪ್ಪಿದ್ದು, ಇದು ದೇವರ ಕೋಪದಿಂದಾಗಿದೆ ಎಂದು ಹೆದರಿ ಸಾವನ್ನಪ್ಪಿದ ಸ್ನೇಹಿತರು ಪೊಲೀಸರಿಗೆ ಶರಣಾಗಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಕೊರಗಜ್ಜ ದೇವಸ್ಥಾನದ ಕಾಣಿಕೆ ಪೆಟ್ಟಿಗೆಯಲ್ಲಿ ಆಕ್ಷೇಪಾರ್ಹ ವಸ್ತುಗಳನ್ನು ಹಾಕಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಜೋಕಾಟ್ಟೆ ನಿವಾಸಿ ಅಬ್ದುಲ್ ರಹೀಮ್ ಮತ್ತು ತೌಫೀಕ್ ಎಂದು ಗುರುತಿಸಲಾಗಿದೆ. ಅಪವಿತ್ರೀಕರಣದಲ್ಲಿ ಭಾಗಿಯಾಗಿದ್ದ ತಮ್ಮ ಸಹಚರ ನವಾಜ್ ಅವರ ಅಕಾಲಿಕ ನಿಧನದ ನಂತರ ಇವರಿಬ್ಬರು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ಅಪವಿತ್ರ ಘಟನೆಯಲ್ಲಿ ಭಾಗಿಯಾಗಿದ್ದ ತೌಫಿಕ್ ನವಾಜ್ ತೀವ್ರ ಆರೋಗ್ಯ ಸಮಸ್ಯೆಗಳನ್ನು ಸಹ ಎದುರಿಸಿದ್ದನು. ಅನಾರೋಗ್ಯದಿಂದಾಗಿ ನವಾಜ್ ಸಾವನ್ನಪ್ಪಿದ ನಂತರ ಅಬ್ದುಲ್ ರಹೀಮ್ ಮತ್ತು ತೌಫೀಕ್ ಭಯಕೊಂಡಿದ್ದಾರೆ. ಯಾಕೆಂದರೆ ನವಾಜ್ ಅವರ ಸ್ಥಿತಿ ಗಂಭೀರವಾಗಿದ್ದಾಗ ಶಿವನ ಅವತಾರವೆಂದು ನಂಬಲಾದ ಸ್ವಾಮಿ ಕೊರಗಜ್ಜನ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಕೇಳಿಕೊಂಡಿದ್ದರಂತೆ. ಹೀಗಾಗಿ ಬುಧವಾರ ರಾತ್ರಿ ಇಬ್ಬರು ಆರೋಪಿಗಳು ತಮ್ಮ ತಪ್ಪನ್ನು ದೇವಾಲಯದ ಅರ್ಚಕರ ಮುಂದೆ ಒಪ್ಪಿಕೊಂಡರು ಮತ್ತು ತಮ್ಮನ್ನು ಪೊಲೀಸರಿಗೆ ಒಪ್ಪಿಸಿದರು.

ಆರಂಭದಲ್ಲಿ ಅಪವಿತ್ರ ಘಟನೆ ಭಕ್ತರಿಗೆ ಆಘಾತವನ್ನುಂಟು ಮಾಡಿತ್ತು . ಜಿಲ್ಲೆಯಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿತ್ತು. ಆದರೆ ನವಾಜ್ ಸಾವನ್ನಪ್ಪಿದ ಬಳಿಕ, ಾತನ ಿಬ್ಬರ ಸ್ನೇಹಿತರು ಶರಣಾದ ಬಳಿಕ ದೇವಸ್ಥಾಜನದ ಬಗ್ಗೆ ಜನರಲ್ಲಿ ನಂಬಿಕೆ ಹೆಚ್ಚಾಗಿದೆ.

“ನವಾಜ್ ಅವರು ಬ್ಲ್ಯಾಕ್ ಮ್ಯಾಜಿಕ್ಗೆ ಒಳಗಾಗಿದ್ದರು ಎಂದು ವರದಿಯಾಗಿದೆ. ನವಾಜ್ ಅನಾರೋಗ್ಯಕ್ಕೆ ಒಳಗಾದಾಗ, ಅವರು ತಮ್ಮ ಅಪರಾಧ ಮತ್ತು ತಪ್ಪನ್ನು ಒಪ್ಪಿಕೊಳ್ಳುವಂತೆ ಆರೋಪಿಗಳಿಗೆ ತಿಳಿಸಿದರು ”ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿ ಕುಮಾರ್ ಹೇಳಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಸಾಕ್ಷ್ಯ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸಲು ಪ್ರಾರಂಭಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights