ಕೇರಳ ಚುನಾವಣೆ: ಸಿಪಿಎಂ 80-85 ಸ್ಥಾನಗಳನ್ನು ಗೆಲ್ಲಲಿದೆ ಎಂದು ಪಕ್ಷ ಅಂದಾಜು!

ಕೇರಳದಲ್ಲಿ ವಿಧಾನಸಭಾ ಚುನಾವಣೆ ಫೂರ್ಣಗೊಂಡಿದೆ. ಫಲಿತಾಂಶ ಪ್ರಕಟವಾಗುವುದು ಬಾಕಿ ಇದೆ. ಈ ನಡುವೆ, ಮತದಾನದ ಬಗ್ಗೆ ಸಿಪಿಎಂ ಸಮೀಕ್ಷೆ ನಡೆಸಿದ್ದು, ಪಕ್ಷವು 80 ರಿಂದ 85 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದೆ.

ಪಕ್ಷವು ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದ ಒಂದು ಸ್ಥಾನ (ನೆಮೊಮ್‌)ವನ್ನು ಮರಳಿ ಕಸಿದುಕೊಳ್ಳುವ ವಿಶ್ವಾಸವನ್ನು ಹೊಂದಿದೆ. ಅಲ್ಲದೆ, ಬಿಜೆಪಿಯ ಮತಪಾಲು ಕಳೆದ ಚುನಾವಣೆಗಿಂತ ಕಡಿಮೆಯಾಗುತ್ತದೆ ಎಂದು ಹೇಳಿದೆ. ಆದರೂ, ಪಕ್ಷವು ತಾನು ಗೆದ್ದಿದ್ದ ಕೆಲವು ಸ್ಥಾನಗಳನ್ನು ಈ ಚುನಾವಣೆಯಲ್ಲಿ ಕಳೆದುಕೊಳ್ಳಬಹುದು ಎಂದು ಭಾವಿಸಿದೆ.

“ಸಿಪಿಎಂ ಶಾಸಕರನ್ನು ಹೊಂದಿದ್ದ ಹಲವು ಕ್ಷೇತ್ರಗಳು ಕಠಿಣ ಹೋರಾಟಕ್ಕೆ ಸಾಕ್ಷಿಯಾಗಿವೆ. ಆಲಪ್ಪುಳ, ಅಂಬಲಪ್ಪುಳ, ತ್ರಿಶೂರ್, ಕೋಝಿಕೋಡ್ ನಾರ್ತ್ ಮತ್ತು ರಾನ್ನಿಯಲ್ಲಿ ಭಾರೀ ಹೋರಾಟ ಏರ್ಪಟ್ಟಿತ್ತು. ಇವುಗಳಲ್ಲಿ ನಾವು ಕಳೆದುಕೊಳ್ಳಬಹುದಾದ ಹಲವಾರು ಸ್ಥಾನಗಳಿವೆ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.

ಜಿಲ್ಲಾ ಘಟಕದ ನಾಯಕರ ಮೌಲ್ಯಮಾಪನದ ಪ್ರಕಾರ, ದಕ್ಷಿಣ ಕೇರಳ ಎಡಪಂಥೀಯರ ಪರವಾಗಿದೆ. ಎಲ್‌ಡಿಎಫ್ ಕೂಟವು 10 ಸ್ಥಾನಗಳನ್ನು ಹೊಂದಿದ್ದ ತಿರುವನಂತಪುರಂ ಜಿಲ್ಲೆಯಲ್ಲಿ ಈ ಬಾರಿ ಕಠಿಣ ಹೋರಾಟವನ್ನು ಎದುರಿಸಿದೆ.  ವಟ್ಟಿಯೂರ್ಕಾವ್, ಕಟ್ಟಕಡ, ವರ್ಕಲಾ, ಚಿರೈನ್‌ಕೀಝು, ನಯಟ್ಟಿಂಕರ, ಕಜೂಕೂಟಂ ಮತ್ತು ಅಟ್ಟಿಂಗಲ್‌ನಲ್ಲಿ ಪಕ್ಷವು ಖಚಿತವಾಗಿ ಗೆಲ್ಲಲಿದೆ. ಅಲ್ಲದೆ, ನೆಮೊಮ್ ಮತ್ತು ವಾಮನಪುರಂಗಳನ್ನೂ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ, ಪರಸ್ಸಲ ಮತ್ತು ನೆದುಮಂಗಡದಲ್ಲಿ ಯುಡಿಎಫ್ ಕಡಿಮೆ ಅಂತರದಲ್ಲಿ ಗೆಲ್ಲಬಹುದು ಎಂದು ಪಕ್ಷ ಭಾವಿಸುತ್ತದೆ.

ಈ ಬಾರಿ ಕುಂದರ, ಕೊಟ್ಟಾರಕಾರ, ಪಥನಪುರಂ, ಕುನ್ನತೂರು ಮತ್ತು ಚಥನೂರ್ ಗೆಲುವು ಖಚಿತವಾಗಲಿದೆ ಎಂದು ಪಕ್ಷದ ಕೊಲ್ಲಂ ಘಟಕ ಅಂದಾಜು ಮಾಡಿದೆ.

ಇದನ್ನೂ ಓದಿ: ಮತದಾನದ ವೇಳೆ ಕೇಂದ್ರ ಪಡೆ ಗುಂಡಿನ ದಾಳಿ – ನಾಲ್ವರ ಸಾವು; ಅಮಿತ್‌ ಶಾ ರಾಜೀನಾಮೆಗೆ ಮಮತಾ ಒತ್ತಾಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights