ವೈದ್ಯರ ಸಲಹೆ ಮೇರೆಗೆ ಸಚಿನ್ ತೆಂಡೂಲ್ಕರ್ ಆಸ್ಪತ್ರೆಗೆ ದಾಖಲು…!

ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ವೈದ್ಯರ ಸಲಹೆ ಮೇರಿಗೆ ಮುಂಬೈನ ಖಾಸಗಿ ಆಸ್ಪತ್ರೆಗೆ ಸಚಿನ್ ತೆಂಡೂಲ್ಕರ್ ದಾಖಲಾಗಿದ್ದಾರೆ.

‘ಗಾಡ್ ಆಫ್ ಕ್ರಿಕೆಟ್’ಎಂದು ಅನೇಕರು ಶ್ಲಾಘಿಸಲ್ಪಟ್ಟಿರುವ ಮತ್ತು ಅಂತರರಾಷ್ಟ್ರಿಯ ವೃತ್ತಿಜೀವನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಪ್ರಸಿದ್ಧ ಭಾರತೀಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತೆ ಆಸ್ಪತ್ರೆಗೆ ದಾಖಲಾಗಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ತಾವು ಆಸ್ಪತ್ರೆಗೆ ದಾಖಲಾದ ಬಗ್ಗೆ ಸ್ವತ: ಸಚಿನ ಟ್ವೀಟ್ ಮಾಡಿದ್ದಾರೆ.

https://twitter.com/sachin_rt/status/1377853111944015873?ref_src=twsrc%5Etfw%7Ctwcamp%5Etweetembed%7Ctwterm%5E1377853111944015873%7Ctwgr%5E%7Ctwcon%5Es1_&ref_url=https%3A%2F%2Fwww.spotnews18.com%2Fsports%2Fsachin-tendulkar-admitted-to-hospital%2F

“ನಿಮ್ಮ ಶುಭಾಶಯಗಳು ಮತ್ತು ಪ್ರಾರ್ಥನೆಗಳಿಗೆ ಧನ್ಯವಾದಗಳು. ವೈದ್ಯಕೀಯ ಸಲಹೆಯಡಿಯಲ್ಲಿ ಮುನ್ನೆಚ್ಚರಿಕೆಯ ದೃಷ್ಟಿಯಿಂದ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವೇ ದಿನಗಳಲ್ಲಿ ಮನೆಗೆ ಮರಳುವ ಭರವಸೆ ಇದೆ. ಎಲ್ಲರೂ ಕಾಳಜಿ ವಹಿಸಿ ಮತ್ತು ಸುರಕ್ಷಿತವಾಗಿರಿ” ಎಂದು ಬರೆದಿದ್ದಾರೆ. ಜೊತೆಗೆ ಎಲ್ಲಾ ಭಾರತೀಯರು ಮತ್ತು ನನ್ನ ತಂಡದ ಆಟಗಾರರಿಗೆ ವಿಶ್ವಕಪ್ ಗೆಲ್ಲಲು ಶುಭ ಹಾರೈಸಿದರು.

ಕ್ರಿಕೆಟ್ ಇತಿಹಾಸದಲ್ಲಿ ಸಂಪೂರ್ಣ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಸಚಿನ್ ತೆಂಡೂಲ್ಕರ್ ಎಲ್ಲ ಬ್ಯಾಟಿಂಗ್ ದಾಖಲೆಗಳನ್ನು ಹೊಂದಿದ್ದಾರೆ. ಅಧಿಕ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಚಿನ್ ಈ ಬಗ್ಗೆ ಟ್ವೀಟ್ ಮಾಡುತ್ತಿದ್ದಂತೆ ಸಚಿನ್ ಫ್ಯಾನ್ಸ್ ಬೇಗ ಗುಣಮುಖರಾಗಲು ಆಶಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights