ಸಾರಿಗೆ ನೌಕರರ ಮುಷ್ಕರಕ್ಕೆ ಸೆಡ್ಡು ಹೊಡೆದ ಸರ್ಕಾರ : ನಿವೃತ್ತ ಸಾರಿಗೆ ಸಿಬ್ಬಂದಿಗೆ ಬುಲಾವ್!

ಸಾರಿಗೆ ನೌಕರರ ಮುಷ್ಕರಕ್ಕೆ ಸೆಡ್ಡು ಹೊಡೆದ ಸರ್ಕಾರ ನಿವೃತ್ತ ಸಾರಿಗೆ ಸಿಬ್ಬಂದಿಗೆ ಬುಲಾವ್ ಕೊಟ್ಟಿದೆ.

ಹೌದು.. ನಿನ್ನೆಯಿಂದಲೂ ಸಾರಿಗೆ ನೌಕರರು ಮುಷ್ಕರು ಪ್ರಾರಂಭಿಸಿದ್ದು ಸಾರ್ವಜನಿಕರು ಬಸ್ ಗಳಿಲ್ಲದೇ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪರ್ಯಾಯ ಮಾರ್ಗವಾಗಿ ಸರ್ಕಾರ ಬಸ್ ಗಳನ್ನು ಓಡಿಸಲು 62 ವರ್ಷ ಮೀರದ ನಿವೃತ್ತ ಸಿಬ್ಬಂದಿಗಳಿಗೆ ಆಹ್ವಾನ ನೀಡಿದೆ.

ಇಂದು ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಕೆಎಸ್ಆರ್ಟಿಸಿ ಎಂಡಿ ಶಿವಯೋಗಿ ಕಳಸದ್, ” 62 ವರ್ಷ ಮೀರದ ನಿವೃತ್ತ ಚಾಲಕ, ನಿವೃತ್ತ ನಿರ್ವಹಕರಿಗೆ ಆಹ್ವಾನಿಸಿದ್ದು, ತಾತ್ಕಾಲಿಕ ಒಪ್ಪಂದದ ಆಧಾರದ ಮೇಲೆ ನಿಯೋಜನೆ ಮಾಡಿದೆ. ಚಾಲಕರಿಗೆ 800 ಮತ್ತು ನಿರ್ವಹಕರಿಗೆ 700 ಗೌರವ ದನ ಕೊಡಲು ನಿರ್ಧರಿಸಿದ್ದೇವೆ ” ಎಂದು ಹೇಳಿದ್ದಾರೆ.

ಈ ಬಗ್ಗೆ ಬೀದರ್ ನ ಬಸವಕಲ್ಯಾಣದಲ್ಲಿ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ” ಖಾಸಗಿ ಬಸ್ ಗಳನ್ನು ಓಡಿಸುವುದು, ಎಸ್ಮಾ ಹಾಕೋದು ಪರಿಹಾರ ಅಲ್ಲ. ಗಂಭೀರವಾಗಿ ಅವರ ಬೇಡಿಕೆ ಪರಿಗಣಿಸಬೇಕು. ಇಲ್ಲವಾದರೆ ತೊಂದರೆಯಾಗುವುದು ಸಾರ್ವಜನಿಕರಿಗೆ. ನ್ಯಾಯುತ ಬೇಡಿಕೆಗಳನ್ನು ಈಡೇರಿಸಬೇಕು. ಖಾಸಗಿ ಬಸ್ ಗಳನ್ನು ಎಷ್ಟು ಜನ ಓಡಿಸುತ್ತಾರೆ? ಸಾವಿರಾರು ನೌಕರರ ಕುಟುಂಬಗಳು ಬೀದಿ ಪಾಲಾಗಬೇಕಾ..? ನಾನು ಸಿಎಂ ಆಗಿದ್ದಾಗ ಸಾರಿಗೆ ನೌಕರರ ಮನವೊಲಿದ್ದೆ” ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights