ದೇಶದಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ : ಒಂದೇ ದಿನ 2ಲಕ್ಷಕ್ಕೂ ಹೆಚ್ಚು ಹೊಸ ಕೇಸ್!
ದೇಶದಲ್ಲಿ ಕೊರೊನಾ 2ನೇ ಅಲೆಯ ಹಾವಳಿ ಮುಂದುರೆದಿದ್ದು ಒಂದೇ ದಿನ 2ಲಕ್ಷಕ್ಕೂ ಹೆಚ್ಚು ಹೊಸ ಕೇಸ್ ದಾಖಲಾಗಿವೆ. ಕಳೆದು 24 ಗಂಟೆಯಲ್ಲಿ ಹಿಂದೆಂದು ಕಾಣದಷ್ಟು ಏಕದಿನ ಕೊರೊನಾ ಪ್ರಕರಣಗಳು ದಾಖಲಾಗಿವೆ.
ಕೋಂದ್ರ ಆರೋಗ್ಯ ಸಚಿವಾಲಯದಲ ಪ್ರಕಾರ ಕಳೆದು 24 ಗಂಟೆಯಲ್ಲಿ 2,73,810 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, 1,619 ಸಾವುಗಳು ಸಂಬವಿಸಿವೆ.
ದೇಶದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 1,50,61,919 ಆಗಿದ್ದು ಪ್ರಸ್ತುತ 19,29,329 ಸಕ್ರಿಯ ಪ್ರಕರಣಗಳಿವೆ. 1,29,53,821 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,78, 769 ಏರಿಕೆಯಾಗಿದೆ. ಈವರೆಗೆ 12,38,52,566 ಜನರಿಗೆ ಲಸಿಕೆ ನೀಡಲಾಗಿದೆ.
ದೇಶಾದ್ಯಂತ ಕೊರೊನಾ ಲಸಿಕೆ ಸರಬರಾಜು ಕೊರತೆ ಎದ್ದು ಕಾಣುತ್ತಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಆಮ್ಲಜನಕ ಮತ್ತು ಬೆಡ್ ಗಳ ಕೊರತೆ ಉಂಟಾಗುತ್ತಿದೆ.
ಕೇಂದ್ರ ಸರ್ಕಾರ ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳ ಮೇಲೆ ಹೇರಿದೆ. ಹೀಗಾಗಿ ಸೋಂಕಿತರು ಹೆಚ್ಚಿರುವ ರಾಜ್ಯಗಳಲ್ಲಿ ಮೀಕೆಂಡ್ ಲಾಕ್ ಡೌನ್, ಸೆಮಿ ಲಾಕ್ ಡೌನ್, ಕರ್ಫ್ಯೂ ಜಾರಿಯಲ್ಲಿದೆ. ಜೊತೆಗೆ ಕಟ್ಟು ನಿಟ್ಟಿನ ಕೊರೊನಾ ನಿಯಮಗಳನ್ನು ಜಾರಿಗೆ ತರಲಾಗಿದೆ. ಆದರೂ ಕೊರೊನಾ ಸೋಂಕಿತರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

