ಕೊರೊನಾ ನಿಯಮಗಳನ್ನು ಪಾಲಿಸುವಂತೆ ರಸ್ತೆಗಿಳಿದು ಜನರಲ್ಲಿ ಮನವಿ ಮಾಡಿದ ಗರ್ಭಿಣಿ ಡಿಎಸ್ಪಿ!

ಜನರು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲು ಒತ್ತಾಯಿಸಿ ಸುಡು ಬಿಸಿಲಿನಲ್ಲಿ ಗರ್ಭಿಣಿ ಡಿಎಸ್ಪಿ ಕೆಲಸ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಶಿಲ್ಪಾ ಸಾಹು ಅವರು ಕೈಯಲ್ಲಿ ಲಾಠಿ ಹಿಡಿದು, ಬೀದಿಯಲ್ಲಿ ನಿಂತು ನಾಗರಿಕರನ್ನು ಮೇಲ್ವಿಚಾರಣೆ ಮಾಡುತ್ತಾ ಅಗತ್ಯವಿರುವ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಒತ್ತಾಯಿಸಿದ್ದಾರೆ. ಛತ್ತೀಸ್‌ಗಢದ ಬಸ್ತಾರ್ ವಿಭಾಗದ ದಾಂತೇವಾಡ ಎಂಬ ಕೊರೊನಾ ಪೀಡಿತ ಪಟ್ಟಣದಲ್ಲಿ ಈ ವಿಡಿಯೋ ಸೆರೆ ಹಿಡಿಯಲಾಗಿದೆ.

ಗರ್ಭಿಣಿ ಡಿಎಸ್ಪಿ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಜನರಿಗೆ ಮನವಿ ಮಾಡುವುದು ಅಂತರ್ಜಾಲದಲ್ಲಿ ಬೆಳಕಿಗೆ ಬಂದಿದೆ. ಸೂರ್ಯನ ಸುಡು ಬಿಸಿಲಿಗೆ ಮೈ ಒಡ್ಡಿ ಕರ್ತವ್ಯ ಪ್ರಜ್ಞೆ ಮೆರೆದ, ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದ ಗರ್ಭಿಣಿ ಡಿಎಸ್ಪಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೀಡಿಯೊ ನೋಡಿ..

ಹೀಗೆ ಕೊರೊನಾ ತಡೆಗೆ ಕಾರ್ಯಕರ್ತರು, ಪೊಲಿಸರು ಪ್ರತಿದಿನ ಹೇಗೆ ತಮ್ಮ ಪ್ರಾಣವನ್ನು ಪಣಕ್ಕಿಡುತ್ತಿದ್ದಾರೆ ಎಂಬುದಕ್ಕೆ ವೀಡಿಯೊ ಒಂದು ಉದಾಹರಣೆಯಾಗಿದೆ. ಭಾರತದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕರೋನವೈರಸ್ ಹರಡುವುದನ್ನು ತಡೆಯಲು ಫೇಸ್ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ದೂರವನ್ನು ಅನುಸರಿಸುವುದು ಹೇಗೆ ಅತ್ಯಗತ್ಯ ಎಂಬುದನ್ನು ಇದು ಒತ್ತಿಹೇಳುತ್ತದೆ.ಆದ್ದರಿಂದ ಈ ಅನಿಶ್ಚಿತ ಸಮಯದಲ್ಲಿ ನಾವು ಸುರಕ್ಷಿತವಾಗಿರಬೇಕು.

ಭಾರತ ಮಂಗಳವಾರ 2,59,170 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, 1,761 ಸಾವುಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ದಾಖಲಾದ ಸಾವಿನ ಸಂಖ್ಯೆ ದೇಶವು ಇದುವರೆಗೆ ದಾಖಲಿಸಿದ ಅತಿದೊಡ್ಡ ಏಕದಿನ ಸ್ಪೈಕ್ ಆಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights