ನಡುರಸ್ತೆಯಲ್ಲಿ ಬಸ್‌ನಿಂದ ಪ್ರಯಾಣಿಕರನ್ನು ಕೆಳಗಿಳಿಸಿದ ಉಡುಪಿ ಡಿಸಿ; ವಿದ್ಯಾರ್ಥಿನಿ ಆಕ್ರೋಶ!

ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಒವರ್‌ ಲೋಡ್‌ ಮಾಡಿಕೊಂಡು ತೆರಳುತ್ತಿದ್ದ ಬಸ್ಸನ್ನು ತಡೆಗಟ್ಟಿದ ಉಡುಪಿ ಜಿಲ್ಲಾಧಿಕಾರಿ, ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಜಿಲ್ಲಾಧಿಕಾರಿಯ ನಡೆಯ ವಿರುದ್ದ ವಿದ್ಯಾರ್ಥಿಯೊಬ್ಬಳು ಆಕ್ರೋಶ ವ್ಯಕ್ತಪಡಿಸಿದ್ದು, ವಿಡಿಯೋ ವೈರಲ್‌ ಆಗಿದೆ.

ಉಡುಪಿಯ ಸಂತೆಕಟ್ಟೆ ಬಳಿ ಬಸ್ ಅಡ್ಡಗಟ್ಟಿ ತಪಾಸಣೆ ನಡೆಸಿದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ವಿಪರೀತ ಪ್ರಯಾಣಿಕರನ್ನು ತುಂಬಿದ್ದಕ್ಕೆ ಸ್ಥಳದಲ್ಲೇ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೆ, ಹಲವು ಪ್ರಯಾಣಿಕರನ್ನು ಬಸ್‌ನಿಂದ ಕೆಳಗಿಸಿದ್ದಾರೆ.

ಪರೀಕ್ಷೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಯನ್ನೂ ಕೆಳಗೆ ಇಳಿಸಲಾಗಿದ್ದು, ಅಕೆ ಜಿಲ್ಲಾಧಿಕಾರಿ ವಿರುದ್ದ ಗಡುಗಿದ್ದಾಳೆ.

ಬಸ್‌ನಿಂದ ಕೆಳಗೆ ಇಳಿದ ವಿದ್ಯಾರ್ಥಿನಿ, ಜಿಲ್ಲಾಧಿಕಾರಿ ನಮ್ಮನ್ನು ಇಳಿಸಿ ಹೋಗಿದ್ದಾರೆ, ನಂತರ ಬರುವ ಬಸ್‌ನಲ್ಲೂ ಕೂಡ ಹೆಚ್ಚಿನ ಪ್ರಯಾಣಿಕರು ಇರ್ತಾರೆ. ಮನೆ ತುಂಬಾ ದೂರವಿದೆ. ಕತ್ತಲಾಗುತ್ತಿದೆ ನಾವು ಹೇಗೆ ಹೋಗೋದು ಅಂತ ಆಕ್ರೋಶ ಹೊರ ಹಾಕಿದ್ದಾಳೆ.

ಸದ್ಯ ವಿಡಿಯೋ ವೈರಲ್ ಆಗಿ ಜಿಲ್ಲಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.

ಕೊರೊನಾ ಉಲ್ಬಣಗೊಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಬಸ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಖಾಸಗಿ ಬಸ್ಸುಗಳು ವಿಪರೀತ ಪ್ರಯಾಣಿಕರನ್ನು ತುಂಬಿಸಿಕೊಂಡು ಸಂಚಾರ ನಡೆಸುತ್ತಿದ್ದವು. ಹೆಚ್ಚಿನ ಪ್ರಯಾಣಿಕರು ಮಾಸ್ಕ್‌ ಧರಿಸದೇ ಪ್ರಯಾಣಿಸುತ್ತಿದ್ದರು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ ಬಸ್‌ ತಡೆದು ನಿಲ್ಲಿಸಿ ಬಾಗಿಲಿನಲ್ಲಿ ಮತ್ತು ಒಳಗೆ ನಿಂತಿರುವವರನ್ನು ತಾವೇ ಖುದ್ದಾಗಿ ಇಳಿಸಿ, ಕಂಡಕ್ಟರ್ ಅವರಿಂದ ಹಣವನ್ನು ವಾಪಸು ನೀಡಿ ಕಳುಹಿಸಿದ್ದಾರೆ. ಅಲ್ಲದೆ, ಚಾಲಕ, ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: 1 ರಿಂದ 9ನೇ ತರಗತಿ ಪರೀಕ್ಷೆ ರದ್ದು; ಪರೀಕ್ಷೆ ಬರೆಯದೇ ವಿದ್ಯಾರ್ಥಿಗಳು ಪಾಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights