ದೇಶದಲ್ಲಿ ಕೊರೊನಾ ಅಟ್ಟಹಾಸ : 3.14 ಲಕ್ಷ ಹೊಸ ಕೇಸ್ ದಾಖಲು…!

ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಒಂದೇ ದಿನ ಹಿಂದೆಂದು ದಾಖಲಾಗದಷ್ಟು ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 3.14 ಲಕ್ಷ ಹೊಸ ಕೋವಿಡ್ ಪ್ರಕರಣಗಳೊಂದಿಗೆ, ಭಾರತವು ವಿಶ್ವದ ಅತಿ ಹೆಚ್ಚು ಏಕದಿನ ಪ್ರಕರಣಗಳನ್ನು ವರದಿ ಮಾಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಬೆಳಿಗ್ಗೆ ನೀಡಿದ ಅಂಕಿಅಂಶಗಳ ಪ್ರಕಾರ ಭಾರತ ಕಳೆದ 24 ಗಂಟೆಗಳಲ್ಲಿ 3,14,835 ಕೋವಿಡ್ -19 ಹೊಸ ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟಾರೆ ಪ್ರಕರಣಗಳ ಸಂಖ್ಯೆ 1,59,30,965 ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಇದು ದೇಶದಲ್ಲಿ ದಾಖಲಾದ ಅತ್ಯಧಿಕ ಏಕದಿನ ಕೇಸ್ ಆಗಿದೆ.

ಭಾರತ ವೈರಸ್‌ನಿಂದಾಗಿ 2,104 ಹೆಚ್ಚಿನ ಸಾವುಗಳನ್ನು ವರದಿ ಮಾಡಿದೆ, ಇದರಲ್ಲಿ 568 ಸಾವುಗಳು ಮಹಾರಾಷ್ಟ್ರದಿಂದ ದಾಖಲಾಗಿವೆ. ದೆಹಲಿಯು 249 ರಷ್ಟಿದೆ.

ಹೊಸ ಕೋವಿಡ್ -19 ಪ್ರಕರಣಗಳೊಂದಿಗೆ, ದೇಶದ ಸಕ್ರಿಯ ಪ್ರಕರಣಗಳು 22,91,428 ಇದ್ದರೆ, ಒಟ್ಟು ಗುಣಮುಖರಾದವರ ಸಂಖ್ಯೆ 1,34,54,880 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

ಫೆಬ್ರವರಿಯಿಂದ ಭಾರತದಲ್ಲಿ ಪ್ರಕರಣಗಳು ಗಗನಕ್ಕೇರುತ್ತಿವೆ ಮತ್ತು ಕಳೆದ 17 ದಿನಗಳಲ್ಲಿ ದೇಶದಲ್ಲಿ ದೈನಂದಿನ ಕೋವಿಡ್ -19 ಕ್ಯಾಸೆಲೋಡ್ ಮೂರು ಪಟ್ಟು ಹೆಚ್ಚಾಗಿದೆ. ಏಪ್ರಿಲ್ 15 ರಂದು ಭಾರತ ದೈನಂದಿನ ಪ್ರಕರಣಗಳಲ್ಲಿ 2 ಲಕ್ಷ ದಾಟಿದೆ ಮತ್ತು ಈಗ, ಒಂದು ದಿನದಲ್ಲಿ (ಏಪ್ರಿಲ್ 22 ರಂದು) 3 ಲಕ್ಷ ಪ್ರಕರಣಗಳನ್ನು ವರದಿ ಮಾಡಿದೆ.

ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಅಗ್ರ ಐದು ರಾಜ್ಯಗಳಲ್ಲಿ 67,468 ಪ್ರಕರಣಗಳೊಂದಿಗೆ ಮಹಾರಾಷ್ಟ್ರ, ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶ 3,3106 ಪ್ರಕರಣಗಳು, ದೆಹಲಿ 2,4638 ಪ್ರಕರಣಗಳು, ಕರ್ನಾಟಕ 23,558 ಪ್ರಕರಣಗಳು ಮತ್ತು ಕೇರಳದಲ್ಲಿ 22,414 ಪ್ರಕರಣಗಳು ದಾಖಲಾಗಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights