ಆಸ್ಪತ್ರೆಯ ಸ್ಟೋರ್ ರೂಂನಲ್ಲಿಟ್ಟಿದ್ದ 1,710 ಡೋಸ್ ಕೋವಿಡ್ ಲಸಿಕೆ ಕಳುವು..!
ಕೊರೊನಾ ಲಸಿಕೆ ಕೊರೊತೆ ಮಧ್ಯೆ ಆಸ್ಪತ್ರೆಯ ಸ್ಟೋರ್ ರೂಂನಲ್ಲಿಟ್ಟಿದ್ದ 1,710 ಡೋಸ್ ಕೋವಿಡ್ ಲಸಿಕೆಯನ್ನು ಕದೀಮರು ಕಳ್ಳತನ ಮಾಡಿದ ಘಟನೆ ಹರಿಯಾಣದಲ್ಲಿ ನಡೆದಿದೆ.
ಜಿಂದ್ ಆಸ್ಪತ್ರೆಯಿಂದ ಕಳ್ಳರು 1,710ಡೋಸ್ ಕೋವಿಡ್ ಲಸಿಕೆ ಕದ್ದಿದ್ದರಿಂದ ಲಸಿಕೆಯ ತೀವ್ರ ಕೊರತೆ ಎದುರಾಗಿದೆ.ಹಲವಾರು ರಾಜ್ಯಗಳು ಕೋವಿಡ್ ಲಸಿಕೆಗಳ ಕೊರತೆಯನ್ನು ಎದುರಿಸುತ್ತಿರುವಾಗ ಕಳ್ಳರು ಹರಿಯಾಣದ ಜಿಂದ್ನ ಪಿಪಿ ಸೆಂಟರ್ ಜನರಲ್ ಹಾಸ್ಪಿಟಲ್ ಸ್ಟೋರ್ ರೂಂಗೆ ನುಗ್ಗಿ ಸುಮಾರು 1,710 ಡೋಸ್ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ಕದ್ದಿದ್ದಾರೆ. ಈ ಸಮಯದಲ್ಲಿ ಯಾವುದೇ ಲಸಿಕೆಗಳಿಲ್ಲದೆ ಜಿಲ್ಲೆಯ ಸ್ಥಿತಿ ಬಿಗಡಾಯಿಸುತ್ತಿದೆ.
ಸ್ಟೋರ್ ರೂಂನಲ್ಲಿರುವ ಇತರ ಔಷಧಿಗಳು ಮತ್ತು ಹಣವನ್ನು ಮುಟ್ಟಲಾಗಲಿಲ್ಲ. ಆದರೆ ಕೊರೊನಾ ಲಸಿಕೆಗಳನ್ನು ಮಾತ್ರ ಕದ್ದೊಯ್ದಿದ್ದಾರೆ. ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆಸ್ಪತ್ರೆಯ ಆಡಳಿತವು ಸ್ಟೋರ್ ರೂಂ ಬಳಿ ಸಿಸಿಟಿವಿ ಕ್ಯಾಮೆರಾವನ್ನು ಸ್ಥಾಪಿಸಿಲ್ಲ ಅಥವಾ ಲಸಿಕೆ ಕಳ್ಳತನವನ್ನು ತಡೆಯಲು ಕಾವಲುಗಾರರನ್ನು ನಿಯೋಜಿಸಿರಲಿಲ್ಲ. ಹೀಗೆ ಕೋವಿಡ್ -19 ಲಸಿಕೆಗಳನ್ನು ವ್ಯರ್ಥ ಮಾಡಿದ ಆರೋಪ ಹೊತ್ತಿರುವ ದೇಶದ ಎರಡನೇ ರಾಜ್ಯ ಹರಿಯಾಣ. ಪಂಜಾಬ್ ಮೂರನೇ ಸ್ಥಾನದಲ್ಲಿದೆ.

