ಕೊರೊನಾ ಪಾಸಿಟಿವ್ ಮೆಸೆಜ್ ಬಂದು 6 ದಿನಗಳಾಗಿವೆ; ವರದಿ ಇನ್ನೂ ಸಿಕ್ಕಿಲ್ಲ – ವೆಬ್ಸೈಟ್ನಲ್ಲೂ ಇಲ್ಲ: ನಟಿ ಅನುಪ್ರಭಾಕರ್ ಆರೋಪ
ನಾನು ಕೊರೊನಾ ಪರೀಕ್ಷೆ ಮಾಡಿಸಿದ್ದೆ. ಪರೀಕ್ಷೆಯಲ್ಲಿ ನನಗೆ ಕೊರೊನಾ ದೃಢಪಟ್ಟಿದೆ ಎಂದು ಮೆಸೇಜ್ ಬಂದಿದೆ. ಆರು ದಿನಗಳು ಕಳೆದಿವೆ. ಆದರೆ, ನನಗೆ ಇನ್ನೂ ವರದಿ ಸಿಕ್ಕಿಲ್ಲ. ವೆಬ್ಸೈಟ್ನಲ್ಲಿ ವರದಿ ಪಡೆಯಲು ಹುಡುಕಿದರೆ, ಅಲ್ಲಿಯೂ ಅಪ್ಲೋಡ್ ಆಗಿಲ್ಲ. ಈ ಬಗ್ಗೆ ಯಾರನ್ನು ಕೇಳಬೇಕು. ಯಾವುದೇ ಬಿಬಿಎಂಪಿ ಅಧಿಕಾರಿಗಳೂ ಕೂಡ ಕರೆಯನ್ನೂ ಮಾಡಿಲ್ಲ ಎಂದು ನಟಿ ಅನುಪ್ರಭಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಗೌರವಾನ್ವಿತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರೇ.. ನನಗೂ ಕೊರೊನಾ ದೃಢಪಟ್ಟಿದೆ ಎಂದು ದಿನಾಂಕ 17-04-2021ರಂದು ಸಂದೇಶದ ಮೂಲಕ ತಿಳಿಯಿತು. ಆದರೆ, ಇದುವರೆಗೆ ನನ್ನ ಎಸ್ ಆರ್ ಎಫ್ ಐಡಿಯ ಕೊರೋನಾ ವರದಿ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಆಗಿಲ್ಲ. ಇದುವರೆಗೆ ನಾನು ಬಿಯು ನಂಬರ್ ಕೂಡ ಪಡೆದಿಲ್ಲ. ಅಲ್ಲದೇ ಬಿಬಿಎಂಪಿಯ ಯಾವುದೇ ಅಧಿಕಾರಿಗಳು ಕೂಡ ಕಾಲ್ ಮಾಡಿಲ್ಲ. ಈ ಕುರಿತಂತೆ ನಿಮ್ಮ ಗಮನಕ್ಕೆ ತರಲು ಬಯಸುತ್ತಿದ್ದೇನೆ. ದಯವಿಟ್ಟು ಇದರ ಬಗ್ಗೆ ಗಮನಹರಿಸಿ ಎಂಬುದಾಗಿ ಮನವಿ ಮಾಡಿದ್ದಾರೆ.
Respected Sir @mla_sudhakar , I tested positive on 17/4/21 & received my SRF ID. But my report has still not been uploaded on the COVID war website and I haven’t received my BU number yet or any call from #BBMP staff. I wanted to bring it to your notice. @DHFWKA @drashwathcn pic.twitter.com/LdFGpaKRvd
— Anu Prabhakar Mukherjee (@AnuPrabhakar9) April 21, 2021
ಬೆಂಗಳೂರಿನಲ್ಲಿ ಕೊರೊನಾ ಪರೀಕ್ಷೆಗೆ ಒಳಪಟ್ಟವರಿಗೆ ಸರಿಯಾದ ಪರೀಕ್ಷೆಗಳನ್ನೇ ಮಾಡದೇ, ಕೊರೊನಾ ದೃಢಪಟ್ಟಿದೆ ಎಂದು ಮೆಸೇಜ್ಗಳನ್ನು ಕಳಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಇದು ಅನುಮಾನಕ್ಕೆ ಕಾರಣವಾಗಿದೆ.
Read Also: 220 ಕೋಟಿ ರೂ ಸಾಲಕ್ಕೆ ಪರದಾಡುತ್ತಿದೆ KSRTC; ನೆರವಿಗೆ ಬಾರದ ಹಣಕಾಸು ಸಂಸ್ಥೆಗಳು!

