ದೇಶದಲ್ಲಿ ಕೊರೊನಾ 2ನೇ ಅಲೆ ಮೇ ತಿಂಗಳಲ್ಲಿ ಅಧಿಕವಾಗುವ ಸಾಧ್ಯತೆ – ಐಐಟಿ

ದೇಶದಲ್ಲಿ ಕೊರೊನಾ 2ನೇ ಅಲೆ ಎಗ್ಗಿಲ್ಲದೇ ಹರಡುತ್ತಿದ್ದು, ಮುಂದಿನ ತಿಂಗಳು ಮೇನಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗುವ ಸಾಧ್ಯತೆ ಇದೆ ಎಂದು ಐಐಟಿ ವಿಜ್ಞಾನಿಗಳು ಆತಂಕಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಹೌದು… ಐಐಟಿ (ಇಂಡಿಯನ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಕಾನ್ಪುರ ವಿಜ್ಞಾನಿಗಳು ಭಾರತದಲ್ಲಿ ಕೋವಿಡ್-19 ಎರಡನೇ ಅಲೆ ಮೇ ಮಧ್ಯದಲ್ಲಿ ಗರಿಷ್ಠವಾಗಬಹುದು ಎಂದು ಊಹಿಸಿದ್ಧಾರೆ. ಮೇ 11-15ರ ನಡುವೆ 33 ರಿಂದ 35 ಲಕ್ಷ ಒಟ್ಟು ಸಕ್ರಿಯ ಪ್ರಕರಣಗಳೊಂದಿಗೆ ಗರಿಷ್ಠವಾಗಬಹುದು ಮತ್ತು ಮೇ ಅಂತ್ಯದ ವೇಳೆಗೆ ತೀವ್ರವಾಗಿ ಕುಸಿಯಬಹುದು ಎಂದು ಹೇಳಿದ್ದಾರೆ.

ಶುಕ್ರವಾರ ಭಾರತ ಒಂದೇ ದಿನದಲ್ಲಿ 3,32,730 ಕೊರೊನಾ ಸೋಂಕುಗಳನ್ನು ಮತ್ತು 2,263 ಸಾವುನೋವುಗಳೊಂದಿಗೆ 24,28,616 ಸಕ್ರಿಯ ಪ್ರಕರಣಗಳನ್ನು ಕಂಡಿದೆ.

ಹೈದರಾಬಾದ್ ‘ಸಸ್ಸೆಪ್ಟಬಲ್, ಅನ್ಟೆಕ್ಟೆಡ್, ಟೆಸ್ಟ್ಡ್ (ಪಾಸಿಟಿವ್), ಮತ್ತು ರಿಮೂವ್ಡ್ ಅಪ್ರೋಚ್’ (ಸೂತ್ರ) ಮಾದರಿಯನ್ನು ಅನ್ವಯಿಸಿ, ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ವಿಜ್ಞಾನಿಗಳು ಮೇ ಮಧ್ಯದ ವೇಳೆಗೆ ಸಕ್ರಿಯ ಪ್ರಕರಣಗಳು ಸುಮಾರು 10 ಲಕ್ಷ ಏರಿಕೆಯಾಗುತ್ತವೆ ಎಂದು ಊಹಿಸಿದ್ದಾರೆ.

ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಏಪ್ರಿಲ್ 25-30ರ ವೇಳೆಗೆ ಹೆಚ್ಚಿನ ಹೊಸ ಪ್ರಕರಣಗಳು ಕಂಡುಬರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ಈಗಾಗಲೇ ಹೊಸ ಪ್ರಕರಣಗಳಲ್ಲಿ ಉತ್ತುಂಗದಲ್ಲಿವೆ.

“ಭಾರತದಲ್ಲಿ ಸಕ್ರಿಯ ಪ್ರಕರಣಗಳು ಮೇ 11-15ರ ನಡುವೆ 33-35 ಲಕ್ಷ ಪ್ರಕರಣಗಳೊಂದಿಗೆ ಗರಿಷ್ಠವಾಗುವ ಸಾಧ್ಯತೆ ಇದೆ ಎಂದು ನಾವು ಕಂಡುಕೊಂಡಿದ್ದೇವೆ. ಪ್ರಕರಣಗಳ ಸಂಖ್ಯೆ ಕಡಿಮೆಯಾಗಬೇಕಾದರೆ ಅಷ್ಟೇ ತೀಕ್ಷ್ಣವಾಗಿರುತ್ತದ ಎಂದು ಐಐಟಿ-ಕಾನ್ಪುರದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಮನೀಂದ್ರ ಅಗ್ರವಾಲ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights