ಪಾರಿವಾಳಗಳ ಹೆಸರಿನಲ್ಲಿ ಕೋಟ್ಯಾಂತರ ರೂ. ಆಸ್ತಿ : ರಾಜಸ್ಥಾನದಲ್ಲಿದೆ ವಿಚಿತ್ರ ಊರು..!

ರಾಜಸ್ಥಾನದಿಂದ ಬಂದಿರುವ ದೊಡ್ಡ ಉದ್ಯಮಿಗಳ ಬಗ್ಗೆ ನೀವು ಕೇಳಿರಬಹುದು. ಆದರೆ ರಾಜಸ್ಥಾನದಲ್ಲಿ ಪಾರಿವಾಳಗಳ ಹೆಸರಿನಲ್ಲಿ ಬೆಲೆ ಬಾಳುವ ಜಮೀನು ಆಸ್ತಿ ಇದೆ ಅನ್ನೋದನ್ನು ಕೇಳಿದ್ದೀರಾ..? ಕೇಳಿರಲು ಸಾಧ್ಯವಿಲ್ಲ ಬಿಡಿ. ಆಶ್ಚರ್ಯ ಆದ್ರೂ ಇದು ನಿಜನೇ. ರಾಜಸ್ಥಾನದ ನಗೌರ್ ನಲ್ಲಿರುವ ಜಸ್ನಗರ್ ಎಂಬ ಪಟ್ಟಣದಲ್ಲಿ ಲಕ್ಷಾಧಿಪತಿ ಪಾರಿವಾಳಗಳು ವಾಸಿಸುತ್ತಿವೆ.

ಈ ಪಾರಿವಾಳಗಳ ಹೆಸರನ್ನು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿಗಳಿಗೆ ಇಡಲಾಗಿದೆ. ಅಂಗಡಿಗಳು, ಜಮೀನುಗಳನ್ನು ಪಾರಿವಾರಗಳ ಹೆಸರಿನಿಂದ ಕರೆಯಲಾಗುತ್ತದೆ.

ಈ ಊರಲ್ಲಿ 27 ಅಂಗಡಿಗಳಿದ್ದು, 126 ಭಿಗಾ ಭೂಮಿ ಹಾಗೂ 30 ಲಕ್ಷ ರೂಪಾಯಿಯ ನಗದನ್ನು ಪಾರಿವಾಳಗಳ ಹೆಸರಿನಲ್ಲಿ ಇಡಲಾಗಿದೆ. ಇದಲ್ಲದೇ 10 ಭಿಗಾ ಭೂಮಿಯಲ್ಲಿ ನಡೆಸಲಾಗುತ್ತಿರುವ ಗೋಶಾಲೆಗಳಿಗೂ ಪರಿವಾಳಗಳ ಹೆಸರನ್ನೇ ಇಡಲಾಗಿದೆ.

ನಾಲ್ಕು ದಶಕಗಳ ಹಿಂದೆ ಹೊಸ ಉದ್ಯಮಿಯೊಬ್ಬರು ಕಬೂತರನ್ ಟ್ರಸ್ಟ್ ಸ್ಥಾಪಿಸಿದ್ದು, ತಮ್ಮ ಹಿರೀಕರಿಂದ ಸ್ಪೂರ್ತಿ ಪಡೆದು ಸರ್ಪಂಚರಾದ ರಾಂದಿನ್ ಚೋಟಿಯಾ ಮತ್ತು ಅವರ ಗುರುಗಳ ನೆರವಿನಿಂದ ಮೂಕ ಹಕ್ಕಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಿದ್ದಾರೆ. ಸಜ್ಜನ್ ರಾಜ್ ಜೈನ್ ಎಂಬ ಉದ್ಯಮಿ ಈ ಯೋಜನೆ ಆರಂಭಿಸಿದ್ದಾರೆ.

ಯೋಜನೆ ಆರಂಭಗೊಳ್ಳುತ್ತಲೇ ಜನರು ಧಾರಾಳವಾಗಿ ಹಣ ಸಹಾಯ ಮಾಡಿದ್ದು, ಇದೀಗ ಪಾರಿವಾಳಗಳ ಹೆಸರಿನಲ್ಲಿ ಗೋಶಾಲೆಗಳನ್ನು ನಡೆಸಿ 500 ಗೋವುಗಳಿಗೆ ಸಕಲ ಸವಲತ್ತುಗಳುಳ್ಲ ಆಶ್ರಯ ನೀಡಲಾಗುತ್ತಿದೆ.

ಭಾರೀ ದೇಣಿಗೆ ನೆರವಿನಿಂದ ಪಾರಿವಾಳಗಳ ರಕ್ಷಣೆ ಹಾಗೂ ಅವುಗಳಿಗೆ ಆಹಾರ-ನೀರು ಒದಗಿಸಲು 27 ಕಟ್ಟಡಗಳನ್ನು ತೆರೆಯಲಾಗಿದೆ. ಅಂಗಡಿಗಳು ತಿಂಗಳಿಗೆ 80000 ರೂಪಾಯಿ ಬಾಡಿಗೆ ಪಡೆಯುತ್ತಿದ್ದು ಈ ಆದಾಯವನ್ನೆಲ್ಲಾ ಬ್ಯಾಂಕಿನಲ್ಲಿ ಠೇವಣಿ ಇಡಲಾಗುತ್ತಿದ್ದು 390 ಲಕ್ಷ ರೂಪಾಯಿಗೆ ಬೆಳೆದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights