ದೇಶದಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ : 3.46 ಲಕ್ಷ ಹೊಸ ಕೇಸ್ – 2,624 ಸಾವು!

ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವಂತ ಲಕ್ಷಣಗಳೇ ಕಾಣಿಸುತ್ತಿಲ್ಲ. ಯಾಕಂದ್ರೆ ಕಳೆದ 24 ಗಂಟೆಯಲ್ಲಿ 3.46 ಲಕ್ಷ ಕೇಸ್ ದೇಶದಲ್ಲಿ ದಾಖಲಾಗಿದ್ದು, 2,624 ಜನ ಸಾವನ್ನಪ್ಪಿದ್ದಾರೆ. ಇದು ದೇಶದಲ್ಲಿ ಹಿಂದೆಂದು ದಾಖಲಾಗದ ಏಕದಿನ ಪ್ರಕರಣಗಳ ಸಂಖ್ಯೆಯಾಗಿದೆ.

ಹೌದು… ದೇಶದಲ್ಲಿ ಶುಕ್ರವಾರ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಮಹರಾಷ್ಟ್ರದಲ್ಲೇ ಹೆಚ್ಚು ಪ್ರಕರಣಗಳು ದಾಖಲಾಗಿವೆ.  ಕಳೆದ 24 ಗಂಟೆಗಳಲ್ಲಿ ಭಾರತವು 3,46,786 ಹೊಸ ಪ್ರಕರಣಗಳು ಮತ್ತು 2,624 ಸಾವುಗಳ ಏರಿಕೆ ಕಂಡಿದೆ. ಹೊಸ ಸಾವುನೋವುಗಳೊಂದಿಗೆ, ಭಾರತದ ಸಾವಿನ ಸಂಖ್ಯೆ 1,89,544 ಕ್ಕೆ ಏರಿದೆ. ಕೋವಿಡ್ -19 ಸೋಂಕಿನಿಂದ ಗರಿಷ್ಠ ಸಂಖ್ಯೆಯ ಸಾವುಗಳು ಮಹಾರಾಷ್ಟ್ರದಲ್ಲಿ (773) ವರದಿಯಾಗಿದ್ದು, ದೆಹಲಿಯಲ್ಲಿ 348 ದೈನಂದಿನ ಸಾವುಗಳು ಸಂಭವಿಸಿವೆ.

ದೇಶದಲ್ಲಿ 25,52,940 ಸಕ್ರಿಯ ಕೋವಿಡ್ -19 ಪ್ರಕರಣಗಳಿದ್ದು ಕಳೆದ 24 ಗಂಟೆಗಳಲ್ಲಿ 2,19,838 ಜನ ವೈರಸ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಅತೀಹೆಚ್ಚು ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ ಐದು ರಾಜ್ಯಗಳು ಇಂತಿವೆ. 66,836 ಪ್ರಕರಣಗಳು ಮಹಾರಾಷ್ಟ್ರದಲ್ಲಿದ್ದರೆ, ಉತ್ತರಪ್ರದೇಶದಲ್ಲಿ 36,605 ಪ್ರಕರಣಗಳು, ಕೇರಳದಲ್ಲಿ 28,447 ಪ್ರಕರಣಗಳು, ಕರ್ನಾಟಕದಲ್ಲಿ 26,962 ಪ್ರಕರಣಗಳು ಮತ್ತು ದೆಹಲಿಯಲ್ಲಿ 24,331 ಪ್ರಕರಣಗಳಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights