ದೇಶದಲ್ಲಿ ಕೈಮೀರಿದ ಕೊರೊನಾ : 3.49 ಲಕ್ಷಕ್ಕೂ ಹೆಚ್ಚು ಹೊಸ ಕೇಸ್ ದಾಖಲು!

ದೇಶದಲ್ಲಿ ದಿನೇ ದಿನೇ ಕೊರೊನಾ ಅಬ್ಬರ ಹೆಚ್ಚಾಗುತ್ತಿದ್ದು ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಒಂದೇ ದಿನ ದೇಶದಲ್ಲಿ 3.49 ಲಕ್ಷಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು,  2,767 ಸಾವುಗಳು ಸಂಭವಿಸಿವೆ.

ದೇಶದಲ್ಲಿನ ಕೋವಿಡ್ -19 ಪ್ರಕರಣಗಳು ಮತ್ತು ಸಾವುಗಳ ಉಲ್ಬಣ ಭಾನುವಾರದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಯಲ್ಲಿ 349,691 ಪ್ರಕರಣಗಳು ದಾಖಲಾಗಿದ್ದು, 2,767 ಜನರು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.

ಈವರೆಗೆ ದೇಶದಲ್ಲಿ ಒಟ್ಟು 1,69,60,172 ಕೇಸ್ ದಾಖಲಾಗಿವೆ. ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ 2,17,113 ರೋಗಿಗಳನ್ನು ಬಿಡುಗಡೆ ಮಾಡಲಾಗಿದ್ದು, ಸಕ್ರಿಯ ಪ್ರಕರಣಗಳು 26,82,751 ರಷ್ಟಿದೆ. ಈವರೆಗೆ 1,40,85,110 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ದಾಖಲಾದ 349,691 ಪ್ರಕರಣಗಳಲ್ಲಿ ಮಹಾರಾಷ್ಟ್ರ 67,160 ಪ್ರಕರಣಗಳು , ಉತ್ತರ ಪ್ರದೇಶದಲ್ಲಿ 37,944 ಪ್ರಕರಣಗಳು, ಕರ್ನಾಟಕ 29,438 ಪ್ರಕರಣಗಳು, ಕೇರಳ 26,685 ಪ್ರಕರಣಗಳು ಮತ್ತು ದೆಹಲಿಯಲ್ಲಿ 24,103 ಪ್ರಕರಣಗಳು ದಾಖಲಾಗಿವೆ. ದೈನಂದಿನ ಹೊರೆ ಹೆಚ್ಚಿಸುವ ಮೊದಲ ಐದು ರಾಜ್ಯಗಳಲ್ಲಿ 3 ನೇ ಸ್ಥಾನದಲ್ಲಿದ್ದ ದೆಹಲಿ ಈಗ 5 ನೇ ಸ್ಥಾನಕ್ಕೆ ಇಳಿದಿದೆ.

ಕಳೆದ 24 ಗಂಟೆಗಳಲ್ಲಿ ವರದಿಯಾದ 2,767 ಸಾವುಗಳಲ್ಲಿ ಮಹಾರಾಷ್ಟ್ರದಲ್ಲಿ (676) ಗರಿಷ್ಠ ಸಾವುನೋವು ಸಂಭವಿಸಿದೆ, ನಂತರ ದೆಹಲಿಯಲ್ಲಿ 357 ದೈನಂದಿನ ಸಾವುಗಳು ಸಂಭವಿಸಿವೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights