ಆರು ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಿದ ಸಿಎಂ ಯಡಿಯೂರಪ್ಪ; ಯಾವ ಜಿಲ್ಲೆಗೆ ಯಾರು?

ಕೊರೊನಾ ಸಂಕಷ್ಟದಲ್ಲಿಯೂ ಜಿಲ್ಲಾ ಉಸ್ತುವಾರಿಗಳಿಲ್ಲದೆ ಹಲವಾರು ಜಿಲ್ಲೆಗಳು ಬಿಕ್ಕಟ್ಟನ್ನು ಎದುರಿಸುತ್ತಿದ್ದವು. ಜಿಲ್ಲೆಯ ಸಮಸ್ಯಗಳ ಬಗ್ಗೆ ಶಾಸಕರು, ಸಚಿವರನ್ನು ಕೇಳುವುದಾ, ಸಂಸದರನ್ನು ಕೇಳುವುದಾ, ಉಸ್ತುವಾರಿಗಳನ್ನು ಪ್ರಶ್ನಿಸೋಣ ಎಂದರೆ, ಉಸ್ತುವಾರಿಯೂ ಇಲ್ಲ ಎಂಬ ಸ್ಥಿತಿಯಲ್ಲಿದ್ದ ಜಿಲ್ಲೆಗಳಿಗೆ ಇಂದು ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಿ ಸಿಎಂ ಯಡಿಯೂರಪ್ಪ ಪ್ರಕಟಣೆ ಹೊರಡಿಸಿದ್ದಾರೆ.

ರಾಜ್ಯಪಾಲರು ಆರು ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಯಾರಿಗೆ ಯಾವ ಜಿಲ್ಲೆಯ ಹೊಣೆ ಇಲ್ಲಿದೆ ಪಟ್ಟಿ.

ಬೆಳಗಾವಿ – ಗೋವಿಂದ ಕಾರಜೋಳ (ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರು)

ಬಾಗಲಕೋಟ – ಉಮೇಶ್ ಕತ್ತಿ (ಆಹಾರ ಮತ್ತು ನಾರಿಕ ಸರಬರಾಜು ಸಚಿವರು )

ಬೀದರ್- ಅರವಿಂದ ಲಿಂಬಾವಳಿ (ಅರಣ್ಯ ಮತ್ತು ಕನ್ನಡ-ಸಂಸ್ಕೃತಿ ಸಚಿವರು )

ಕೋಲಾರ – ಎಂಟಿಬಿ ನಾಗರಾಜ್ (ಪೌರಾಡಳಿತ ಮತ್ತು ಸಕ್ಕರೆ ಸಚಿವರು)

ಕಲಬುರಗಿ – ಮುರುಗೇಶ್ ನಿರಾಣಿ (ಗಣಿ ಮತ್ತು ಭೂ ವಿಜ್ಞಾನ ಸಚಿವರು )

ಚಿಕ್ಕಮಗಳೂರು – ಎಸ್ ಅಂಗಾರ (ಮೀನುಗಾರಿಕೆ ಮತ್ತು ಬಂದರು ಸಚಿವರು)

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಬ್ಬರ ಹೆಚ್ಚಾಗುತ್ತಿದೆ. ದಿನದಿನವೂ ಸಾವು ನೋವುಗಳು ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದರ ಸೂಕ್ತ ನಿರ್ವಹಣೆ ಜವಾಬ್ದಾರಿ ಸರ್ಕಾರದ ಮೇಲಿದ್ದು, ಈ ನಿಟ್ಟಿನಲ್ಲಿ ಜಿಲ್ಲಾವಾರು ಜವಾಬ್ದಾರಿಗಳ ಹಂಚಿಕೆ ಉದ್ದೇಶದಿಂದ ಖಾಲಿ ಇದ್ದ ಜಿಲ್ಲೆಗಳಿಗೆ ನೇಮಕ ಮಾಡಲಾಗಿದೆ.

ಇದನ್ನೂ ಓದಿ: ಮಸ್ಕಿಯಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು: 26 ಸಾವಿರ ಮತಗಳ ಅಂತರದಲ್ಲಿ ಸೋಲುಂಡ BJP!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights