ಕೊರೊನಾ ನಿಯಂತ್ರಣ: ಮುಂಬೈ ಮಾದರಿಗೆ ಸುಪ್ರೀಂ ಮೆಚ್ಚುಗೆ!

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿನ ಹಾವಳಿ ದೇಶದಲ್ಲಿಯೇ ಅತಿ ಹೆಚ್ಚಾಗಿತ್ತು. ಮಹಾರಾಷ್ಟ್ರ ರಾಜಧಾನಿ ಮುಂಬೈ ಕೂಡ ಹೆಚ್ಚು ಸೋಂಕು ಪ್ರಕರಣಗಳನ್ನು ಒಳಗೊಂಡಿತ್ತು. ಇದೀಗ ಮುಂಬೈನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಭಾರೀ ಇಳಿಕೆ ಕಂಡುಬರುತ್ತಿದೆ. ಮುಂಬೈನಲ್ಲಿ ಕೈಗೊಳ್ಳಲಾದ ವಿವಿಧ ಕ್ರಮಗಳಿಗೆ ಸುಪ್ರೀಂ ಕೊರ್ಟ್‌ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ.

ಕೊರೊನಾ ನಿಯಂತ್ರಣಕ್ಕಾಗಿ ಮುಂಬೈನ ಪಾಲಿಕೆಯು ಪ್ರತಿ ವಾರ್ಡ್‌ನಲ್ಲಿಯೂ ವಾರ್‌ ರೂಮ್‌ಗಳನ್ನು ತೆರೆದಿದೆ. ಈ ಮೂಲಕ ರೋಗಿಗಳಿಗೆ ಹಾಸಿಗೆ, ಆಮ್ಲಜನಕ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ದೊರಕಿಸಿಕೊಟ್ಟಿದೆ. ಇದಕ್ಕೆ ಕಾರಣರಾದ ಅಧಿಕಾರಿಗಳು ಕೋರ್ಟ್‌ ಪ್ರಶಂಸೆಗೆ ಭಾಜನರಾಗಿದ್ದಾರೆ.

ಮೇ 1ರಿಂದ ಮುಂಬೈನಲ್ಲಿ ಪ್ರತಿದಿನ 4 ಸಾವಿರಕ್ಕೂ ಕಡಿಮೆ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿಂದೆ, ಏಪ್ರಿಲ್ ಮೊದಲ ವಾರದಲ್ಲಿ ಮುಂಬೈನಲ್ಲಿ ನಿತ್ಯವೂ 8,500 ಪ್ರಕರಣಗಳು ವರದಿಯಾಗುತ್ತಿದ್ದವು. ಏ. 4ರಂದು ಈ ಸಂಖ್ಯೆ 11,163ಕ್ಕೆ ಏರಿತ್ತು. ಆದರೆ ಒಂದೇ ತಿಂಗಳ ಅವಧಿಯಲ್ಲಿ ಮೇ 6ರ ಹೊತ್ತಿಗೆ ಕೋವಿಡ್ ಪ್ರಕರಣಗಳ ಸಂಖ್ಯೆ 3,056ಕ್ಕೆ ಇಳಿದಿದೆ!.

ಕೊರೊನಾ ನಿಯಂತ್ರಣಕ್ಕಾಗಿ ಮುಂಬೈ ಅನುಸರಿಸಿದ ಈ ‘ಮಾದರಿ’ಯ ಬಗ್ಗೆ ಬುಧವಾರ ಸುಪ್ರೀಂ ಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿ, ಅಲ್ಲಿನ ಅಧಿಕಾರಿಗಳು ಹಾಸಿಗೆ ಮತ್ತು ಆಮ್ಲಜನಕದ ಸಿಲಿಂಡರ್‌ಗಳ ಕೊರತೆಯಾಗದಂತೆ ನಿರ್ವಹಿಸಿದ ಕಾರ್ಯವೈಖರಿಗೆ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮೆಚ್ಚಿಗೆ ಸೂಚಿದ್ದಾರೆ.

ನಾವು ಎರಡನೇ ಅಲೆ ಪ್ರಾರಂಭವಾಗುವ ಮೊದಲೇ ಜಂಬೋ ಕೋವಿಡ್ ಕೇಂದ್ರಗಳು (ಆಸ್ಪತ್ರೆಗಳು), ಆಮ್ಲಜನಕ ಸೌಲಭ್ಯ, ಹಾಸಿಗೆಗಳು ಮತ್ತು ಐಸಿಯು ಹಾಸಿಗೆಗಳನ್ನು ಸಿದ್ಧವಾಗಿರಿಸಿಕೊಳ್ಳದಿದ್ದರೆ ಅವ್ಯವಸ್ಥೆ ಉಂಟಾಗುತ್ತಿತ್ತು ಎಂದು ಪಾಲಿಕೆ ಮೇಯರ್ ಕಿಶೋರಿ ಪೆಡ್ನೆಕರ್.

ಜಂಬೋ ಕೋವಿಡ್ ಕೇಂದ್ರಗಳಲ್ಲಿ ಎಲ್ಲಾ ವ್ಯವಸ್ಥೆ ಇತ್ತು. ಆಮ್ಲಜನಕ, ಅಡುಗೆ ಮನೆ, ವೈದ್ಯರು, ದಾದಿಯರು ಹೀಗೆ ಎಲ್ಲ ಸೌಲಭ್ಯ ರೂಪಿಸಲಾಗಿತ್ತು. ಅಷ್ಟೇ ಅಲ್ಲ ನಾಗರಿಕರಿಗೆ ಬೇಕಾದ ಆಮ್ಲಜನಕ, ಐಸಿಯು ಹಾಸಿಗೆಗಳು, ಔಷಧಿಗಳ ದಾಸ್ತಾನುಗಳನ್ನೂ ಹೆಚ್ಚಿಸಲಾಯಿತು. ಎಲ್ಲೆಡೆ ರೆಮ್‌ಡಿಸಿವಿರ್‌ನ ಕೊರತೆ ಇದ್ದರೆ, ಬಿಎಂಸಿಯಲ್ಲಿ ಮಾತ್ರ ಸಾಕಷ್ಟು ಸಂಗ್ರಹವಿದೆ ಎಂದು ಅವರು ಹೇಳಿದ್ದಾರೆ.

ಇದೀಗ, ಮೂರನೇ ಅಲೆಯ ಭೀತಿ ಎದುರಾಗಿದ್ದು, ಮಕ್ಕಳು ಮತ್ತು ಅಂಗವಿಕಲರಿಗೆ ಸೌಲಭ್ಯಗಳನ್ನೊಳಗೊಂಡ ಜಂಬೊ ಕೋವಿಡ್‌ ಕೇಂದ್ರಗಳನ್ನು ರೂಪಿಸಲಾಗುತ್ತಿದೆ. ಈ ಹಿಂದೆ 9 ಕೇಂದ್ರಗಳಿದ್ದವು. ಈಗ ಅವುಗಳನ್ನು ಸಂಖ್ಯೆಯನ್ನು 15ಕ್ಕೆ ಹೆಚ್ಚಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

ಮಕ್ಕಳು ಮತ್ತು ಅಂಗವಿಕಲರಿಗೆ ಮೀಸಲಾದ ಸೌಲಭ್ಯಗಳನ್ನು ಒಳಗೊಂಡಂತೆ ಜಂಬೋ ಸಿಒವಿಐಡಿ ಸೌಲಭ್ಯಗಳ ಸಂಖ್ಯೆಯನ್ನು ಒಂಬತ್ತರಿಂದ 15 ಕ್ಕೆ ಹೆಚ್ಚಿಸಲಾಗುವುದು ಎಂದು ಪೆಡ್ನೇಕರ್ ತಿಳಿಸಿದರು.

ಇದನ್ನೂ ಓದಿ: ಬೆಡ್‌ ದಂದೆಗೆ ಕೋಮು ಬಣ್ಣ; BBMP ವಾರ್‌ ರೂಮ್‌ಗೆ ತೆರಳಿ ಕ್ಷಮೆ ಕೇಳಿದ್ದಾರೆ ಎಂಬ ಸುದ್ದಿ ಸುಳ್ಳು ಎಂದ BJP ಸಂಸದ ತೇಜಸ್ವಿ ಸೂರ್ಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights