ಉತ್ತರಪ್ರದೇಶ ಸಚಿವ ವಿಜಯ್ ಕಶ್ಯಪ್ ಕೊರೊನಾಗೆ ಬಲಿ : ಪ್ರಧಾನಿ ಮೋದಿ ಸಂತಾಪ!

ಉತ್ತರ ಪ್ರದೇಶದ ಕಂದಾಯ ಮತ್ತು ಪ್ರವಾಹ ನಿಯಂತ್ರಣ ಸಚಿವ ವಿಜಯ್ ಕಶ್ಯಪ್ ಮಂಗಳವಾರ ಗುರಗಾಂವ್ ಆಸ್ಪತ್ರೆಯಲ್ಲಿ ಕೊರೊನವೈರಸ್ ನಿಂದ ಸಾವನ್ನಪ್ಪಿದ್ದಾರೆ.

ಮುಜಫರ್ನಗರದ ಚಾರ್ತವಾಲ್ ಅಸೆಂಬ್ಲಿ ಸ್ಥಾನದ ಶಾಸಕರಾಗಿದ್ದ ಶ್ರೀ ಕಶ್ಯಪ್ (56) ಗುರಗಾಂವ್‌ನ ಮೆದಂತ ಆಸ್ಪತ್ರೆಯಲ್ಲಿ ನಿಧನರಾದರು. ಇವರು ವೈರಸ್‌ಗೆ ಬಲಿಯಾದ ಮೂರನೇ ಉತ್ತರಪ್ರದೇಶದ ಸಚಿವರಾಗಿದ್ದಾರೆ. ಕಳೆದ ವರ್ಷ ಉತ್ತರ ಪ್ರದೇಶದ ಮಂತ್ರಿಗಳಾದ ಕಮಲ್ ರಾಣಿ ವರುಣ್ ಮತ್ತು ಚೇತನ್ ಚೌಹಾನ್ ಸೋಂಕಿನಿಂದ ಸಾವನ್ನಪ್ಪಿದ್ದರು. ಸಚಿವ ವಿಜಯ್ ಕಶ್ಯಪ್ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

“ಉತ್ತರ ಪ್ರದೇಶ ಸರ್ಕಾರದಲ್ಲಿ ಬಿಜೆಪಿ ಮುಖಂಡ ಮತ್ತು ಸಚಿವರಾದ ವಿಜಯ್ ಕಶ್ಯಪ್ ಜಿ ಅವರ ನಿಧನ ತುಂಬಾ ದುಃಖಕರವಾಗಿದೆ. ಅವರು ಅಧಿಕ ಸಂಪರ್ಕ ಹೊಂದಿದ್ದ ನಾಯಕರಾಗಿದ್ದರು ಮತ್ತು ಯಾವಾಗಲೂ ಸಾರ್ವಜನಿಕ ಹಿತಾಸಕ್ತಿ ಕಾರ್ಯಗಳಿಗೆ ಮೀಸಲಿಟ್ಟಿದ್ದರು. ಈ ದುಃಖದ ಕ್ಷಣದಲ್ಲಿ ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಂತಾಪ. ಓಂ ಶಾಂತಿ! ” ಪಿಎಂ ಮೋದಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಜೊತೆಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. “ಚಾರ್ತವಾಲ್ನ ಶಾಸಕರಾದ ಕಶ್ಯಪ್ ಅವರು ಮಂತ್ರಿಯಾಗಿ ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿದ ಜನಪ್ರಿಯ ನಾಯಕರಾಗಿದ್ದರು. ಜನರು ತಮ್ಮ ನಿಜವಾದ ಹಿತೈಷಿಯನ್ನು ಕಳೆದುಕೊಂಡಿದ್ದಾರೆ” ಎಂದು ಆದಿತ್ಯನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅವರ ನಿಧನಕ್ಕೆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಧಾ ಮೋಹನ್ ಸಿಂಗ್ ಮತ್ತು ಇತರ ಹಿರಿಯ ನಾಯಕರು ಸಂತಾಪ ಸೂಚಿಸಿದ್ದಾರೆ. ಎರಡನೇ ಕೊರೋನವೈರಸ್ ಅಲೆಯಲ್ಲಿ ಮೃತಪಟ್ಟ ಐದನೇ ಬಿಜೆಪಿ ಶಾಸಕರಾಗಿದ್ದಾರೆ.  ಈ ಹಿಂದೆ ಸಲೂನ್ ಶಾಸಕ ದಾಲ್ ಬಹದ್ದೂರ್ ಕೋರಿ, ಕೇಸರ್ ಸಿಂಗ್ ಗಂಗ್ವಾರ್ (ನವಾಬ್ಗಂಜ್), ರಮೇಶ್ ದಿವಾಕರ್ (ಐರಯ್ಯ) ಮತ್ತು ಸುರೇಶ್ ಕುಮಾರ್ ಶ್ರೀವಾಸ್ತವ (ಲಕ್ನೋ ವೆಸ್ಟ್) ಸೋಂಕಿಗೆ ಬಲಿಯಾಗಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights