ಅಮಿತ್‌ ಶಾ ಕಾಣೆಯಾಗಿದ್ದಾರೆ: ಪೊಲೀಸ್‌ ಠಾಣೆಯಲ್ಲಿ ಮಿಸ್ಸಿಂಗ್‌ ಕೇಸ್‌ ದಾಖಲಿಸಿದ ಎನ್‌ಎಸ್‌ಯುಐ

ಸಾಂಕ್ರಾಮಿಕ ಮತ್ತು ನಾಗರಿಕರು ಬಿಕ್ಕಟ್ಟಿನ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಣೆಯಾಗಿದ್ದಾರೆ ಎಂದು ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆ ಎನ್‌ಎಸ್‌ಯುಐ ಮುಖಂಡರು ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಜಕಾರಣಿಗಳು ರಾಷ್ಟ್ರದ ಸೇವೆ ಮಾಡಬೇಕಿತ್ತು ಮತ್ತು ಬಿಕ್ಕಟ್ಟಿನ ಪರಿಸ್ಥಿತಿಯಿಂದ ಓಡಿಹೋಗಬಾರದು. ದೇಶವು ಮಾರಣಾಂತಿಕ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವಾಗ ಮತ್ತು ನಾಗರಿಕರು ಬಿಕ್ಕಟ್ಟಿನಲ್ಲಿರುವಾಗ, ಇಡೀ ದೇಶಕ್ಕೆ ಹೊಣೆಗಾರರಾಗಿರುವುದು ರಾಜಕಾರಣಿಗಳ ಕರ್ತವ್ಯ ಎಂದು ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಕರಿಯಪ್ಪ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಕೊರೊನಾ ರೋಗವನ್ನು ತಡೆಗಟ್ಟುವಲ್ಲಿ ಪ್ರಸ್ತುತ ಸರ್ಕಾರ ವಿಫಲವಾಗಿದೆ ಮತ್ತು ಇದರ ಪರಿಣಾಮವಾಗಿ ಗೃಹ ಸಚಿವರ ವಿರುದ್ಧ ಎನ್‌ಎಸ್‌ಯುಐ ಕಾಣೆಯಾದ ಬಗ್ಗೆ ದೂರು ದಾಖಲಿಸಿದೆ ಮತ್ತು ಸರ್ಕಾರವು ತನ್ನ ಜನರಿಗೆ ಉತ್ತರಿಸಬೇಕೆಂದು ನಾವು ಕಾಯುತ್ತಿದ್ದೇವೆ ಎಂದು ಕರಿಯಪ್ಪ ಹೇಳಿದ್ದಾರೆ..

“2013ರವರೆಗೆ ರಾಜಕಾರಣಿಗಳು ನಾಗರಿಕರ ಬಗ್ಗೆ ಜವಾಬ್ದಾರರಾಗಿದ್ದರು, ಆದರೆ 2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿಷಯಗಳು ಸಂಪೂರ್ಣವಾಗಿ ಬದಲಾದವು” ಎಂದು ಸಂಘಟನೆಯ ಮಾಧ್ಯಮ ಮತ್ತು ಸಂವಹನಗಳ ಉಸ್ತುವಾರಿ ಲೋಕೇಶ್ ಚುಗ್ ಹೇಳಿದ್ದಾರೆ.

ಇಂದಿನ ಕೊರೊನಾ ಸಾಂಕ್ರಾಮಿಕದ ಮಧ್ಯೆ 2ನೇ ಅತ್ಯಂತ ಶಕ್ತಿಶಾಲಿ ಮತ್ತು ಜವಾಬ್ದಾರಿಯುತ ವ್ಯಕ್ತಿ ಎಲ್ಲಿ ಕಾಣೆಯಾಗಿದ್ದಾರೆ ಎಂದು ನಾಗೇಶ್ ಕರಿಯಪ್ಪ ಅವರು ಪ್ರಶ್ನಿಸಿದರು. ಆದ್ದರಿಂದ, ಎನ್‌ಎಸ್‌ಯುಐ ಕಾಣೆಯಾದ ದೂರು ದಾಖಲಿಸಿದೆ. ಸರ್ಕಾದಿಂದ ಉತ್ತರಗಳನ್ನು ತಿಳಿದುಕೊಳ್ಳಲು ನಾವು ಕಾಯುತ್ತಿದ್ದೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ನಿರಂತರ ಮನವಿಗೆ ಸ್ಪಂದಿಸದ ಮೋದಿ – ಯೋಗಿ; ಕೊರೊನಾದಿಂದ RSS ಕಾರ್ಯಕರ್ತ ಸಾವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights