ರಮ್ಯಾ ಅವರನ್ನು ಮತ್ತೆ ಚಿತ್ರರಂಗಕ್ಕೆ ಬನ್ನಿ ಎಂದ ರಚಿತಾ ರಾಮ್‌; ಪದ್ಮಾವತಿ ಕೊಟ್ಟ ಉತ್ತರವೇನು ಗೊತ್ತಾ?

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಬ್ಯುಸಿಯೆಸ್ಟ್‌ ನಟಿ ರಚಿತಾ ರಾಮ್‌. ಕೊರೊನಾ, ಲಾಕ್‌ಡೌನ್‌ ನಡುವೆಯೂ ರಚಿತಾ ಅವರು ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳನ್ನು ಕೊಡುತ್ತಿದ್ದಾರೆ. ಈಗ ಲವ್‌ ಯು ರಚ್ಚು ಸಿನಿಮಾ ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಲ್ಲದೆ, ಏಕ್‌ ಅವ್‌ ಯಾ ಸಿನಿಮಾದ ಹಾಡುಗಳನ್ನೂ ಇತ್ತೀಚೆಗೆ ರಿಲೀಸ್‌ ಮಾಡಿದ್ದು, ಅದೂ ಕೂಡ ಸದ್ಯದಲ್ಲೇ ತೆರೆ ಕಾಣುವ ನಿರೀಕ್ಷೆ ಇದೆ.

ಕನ್ನಡ ಚಿತ್ರರಂಗದಲ್ಲಿ ನಂ.1 ಪಟ್ಟ ಗಿಟ್ಟಿಸಿಕೊಂಡಿರುವ ರಚಿತಾ ರಾಮ್, ಈ ಹಿಂದೆ ಟಾಪ್‌ ಒನ್‌ ನಟಿಯಾಗಿದ್ದ ರಮ್ಯಾ ಅವರ ಸ್ಥಾನವನ್ನು ಫಿಲ್‌ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ, ರಮ್ಯಾ ಅವರು ಮತ್ತೆ ಚಿತ್ರರಂಗಕ್ಕೆ ಮರಳಬೇಕು. ಅವರ ಸಿನಿಮಾಗಳನ್ನು ನಾವು ಮತ್ತೆ ಥಿಯೇಟರ್‌ನಲ್ಲಿ ನೋಡುವಂತಾಗಬೇಕು ಎಂದು ನಟಿ ರಚಿತಾ ರಾಮ್‌ ಹೇಳಿದ್ದಾರೆ.

Rachita Ram Movies List: Kannada Actor

ಸ್ಯಾಂಡಲ್‌ವುಡ್‌ನಲ್ಲಿ ನಟಿ ಅಂದ್ರೆ ಅದು ಒನ್ ಆಂಡ್ ಓನ್ಲಿ ರಮ್ಯ. ಅವರು ಚಿತ್ರರಂಗದಲ್ಲಿ ಮಾಡಿದ್ದ ಮೋಡಿ ಅಷ್ಟಿಷ್ಟಲ್ಲ. ರಮ್ಯಾ ಚಂದನವನದ ಪದ್ಮಾವತಿ. ನಂ.1 ನಟಿ ಎಂಬ ಪಟ್ಟ ರಮ್ಯಾ ಅವರಿಗೆ ಮುಗಿದು ಹೋಯಿತು. ನಂತರದಲ್ಲಿ ಆ ರೀತಿಯಲ್ಲಿ ಯಾರು ಬರಲಾಗಲಿಲ್ಲ ಎಂದು ಹೇಳಲಾಗುತ್ತಿತ್ತು. ಇದನ್ನು ರಚಿತಾ ರಾಮ್‌ ಬ್ರೇಕ್‌ ಮಾಡಿದ್ದು, ಚಂದನವನದ ಟಾಪ್‌ 1 ನಟಿ ಎಂಬ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.

ಇದನ್ನೂ ಓದಿ: ದ್ವೇಷದ ಬೆಂಕಿ ಆರಲಿ.. ಕನ್ನಡದ ಬಾವುಟ ಹಾರಲಿ; ಬಾವುಟಕ್ಕೆ ಬೆಂಕಿ ಹಚ್ಚಿದವರಿಗೆ ಕಠಿಣ ಶಿಕ್ಷೆಗೆ ನಟಿ ಹರಿಪ್ರಿಯಾ ಆಗ್ರಹ

ಈ ನಡುವೆ, ರಚಿತಾ ರಾಮ್ ಅಭಿನಯದ ಲವ್‌ ಯೂ ರಚ್ಚು ಸಿನಿಮಾದ ಪ್ರಮೋಷನ್ ಸಂದರ್ಭ ಖಾಸಗೀ ಸಂದರ್ಶನದಲ್ಲಿ ಮಾತನಾಡಿರುವ ರಚಿತಾ ರಾಮ್‌ ಅವರು ರಮ್ಯ ಅವರ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಲವ್‌ ಯೂ ರಚ್ಚು ಸಿನಿಮಾಗೆ ಈ ಹಿಂದೆ ಲವ್‌ ಯೂ ರಮ್ಯ ಎಂದು ಹೆಸರಿಡಲು ಚಿತ್ರತಂಡ ನಿರ್ಧರಿಸಿತ್ತು.  ‘ಸಿನಿಮಾಗೆ ರಮ್ಯ ಅವರ ಹೆಸರು ಇದ್ದಿದ್ದರೆ ಖುಷಿಯಿಂದ ನಟಿಸುತ್ತಿದೆ. ನಾನು ರಮ್ಯ ಅವರ ಅಭಿಮಾನಿ, ತುಂಬ ಖುಷಿ ಮತ್ತು ಹೆಮ್ಮೆಯಿಂದ ಆ ಟೈಟಲ್‌ನಲ್ಲಿ ಕೆಲಸ ಮಾಡುತ್ತಿದೆ. ಇಂಥ ಒಂದು ಅವಕಾಶವನ್ನು ಬೇಡ ಎನ್ನಲು ಸಾಧ್ಯವಾ?’  ಎಂದು ಅವರು ಹೇಳಿದ್ದಾರೆ.

Ramya (actress) - Wikipedia

ರಮ್ಯ ಅವರ ನಟನೆ ಮತ್ತು ಚಾರ್ಮ್‌ಗೆ ನಾನು ಫಿದಾ ಆಗಿದ್ದೇನೆ. ನಮ್ಮಿಬ್ಬರ ನಡುವೆ ಉತ್ತಮ ಸ್ನೇಹವೂ ಇದೆ. ನಾವು ರಮ್ಯಾ ಅವರನ್ನು ಪ್ರೀತಿಯಿಂದ ದೀವಾ ಎಂದು ಕರೆಯುತ್ತೇನೆ. ನಾವಿಬ್ಬರು ಹುಟ್ಟುಹಬ್ಬದ ಸಂದರ್ಭದಲ್ಲಿ ಪರಸ್ಪರ ಉಡುಗೊರೆಗಳನ್ನು ಕಳುಹಿಸುತ್ತೇವೆ.  ಅಕ್ಟೋಬರ್ 3 ರಂದು ತಮ್ಮ ಹುಟ್ಟು ಹಬ್ಬಕ್ಕಾಗಿ ರಮ್ಯಾ ಅವರು ಹೂವಿನ ಬೊಕ್ಕೆ ಮತ್ತು ಬ್ಯೂಟಿಫುಲ್ ಆಗಿರುವ ಸೀರೆಯನ್ನು ಕಳಿಸಿದ್ದರು ಎಂದು ರಚಿತಾ ಹೇಳಿಕೊಂಡಿದ್ದಾರೆ.

ನಾನು “ದೀವಾ ಅವರಿಗೆ ಮತ್ತೆ ಯಾವಾಗ ಆಕ್ಟ್ ಮಾಡುತ್ತೀರಿ ಎಂದು ಕೇಳಿದ್ದೀನಿ. ಅದಕ್ಕೆ ಅವರು ನಕ್ಕು ಸುಮ್ಮನಾಗುತ್ತಾರೆ ಅಷ್ಟೆ. ದೀವಾ ಮತ್ತೆ ಆಕ್ಟ್ ಮಾಡಬೇಕು ಅನ್ನೋದು ನನ್ನ ಆಸೆ ಕೂಡ. ಅವರು ಮತ್ತೆ ಸಿನಿಮಾದಲ್ಲಿ ಅಭಿನಯಿಸಬೇಕು” ಎಂದು ರಚಿತಾ ಹೇಳಿದ್ದಾರೆ

ಇದನ್ನೂ ಓದಿ: ನನಗೂ ಐಪಿಎಸ್ ಅಧಿಕಾರಿ ಆಗಬೇಕು ಎಂಬ ಆಸೆ ಇತ್ತು; ರಚಿತಾ ರಾಮ್

Spread the love

Leave a Reply

Your email address will not be published. Required fields are marked *