ಭಾರತ V/S ಆಸ್ಟ್ರೇಲಿಯಾ: ರಹಾನೆ-ಪುಜಾರಾ ಮೇಲಿದೆ ನಿರೀಕ್ಷೆ; 3ನೇ ಟೆಸ್ಟ್‌ ಗೆಲ್ಲುತ್ತಾ ಭಾರತ!

ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡಗಳ ನಡುವೆ ಮೂರನೇ ಟೆಸ್ಟ್‌ ಪಂದ್ಯ ನಡೆಸಯುತ್ತಿದ್ದು, ಮೊಲದ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 338 ರನ್‌ಗಳನ್ನು ಕಲೆಹಾಕಿ ಆಲ್‌ಓಟ್‌ ಆಗಿದೆ. ಬ್ಯಾಟಿಂಗ್‌ ಆರಂಭಿಸಿದರುವ ಭಾರತ ತಂಡ 2 ವಿಕೆಟ್‌ಗಳನ್ನು ಕಳೆದುಕೊಂಡಿದ್ದು, 96 ರನ್‌ಗಳಿಸಿದೆ.

ಗುರುವಾರ ಟಾಸ್‌ ಗೆದ್ದು ಬ್ಯಾಂಟಿಂಗ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡ 338 ರನ್‌ ಕಲೆಹಾಕಿದ್ದು, ತಂಡದ ಸ್ಟೀವ್ ಸ್ಮಿತ್ ಟೆಸ್ಟ್​ ಕ್ರಿಕೆಟ್​ನಲ್ಲಿ 27ನೇ ಶತಕ ಸಿಡಿಸಿದ್ದಾರೆ.

ಆಸ್ಟ್ರೇಲಿಯಾ ತಂಡ ಆಲ್‌ಔಟ್‌ ಆದ ಬಳಿಕ ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ ದಿನದ ಅಂತ್ಯದ ವೇಳೆಗೆ 45 ಓವರ್‌ಗಳಲ್ಲಿ 96 ರನ್‌ ಗಳಿಸಿದೆ ಮತ್ತು 2 ವಿಕೆಟ್‌ ಕಳೆದುಕೊಂಡಿದೆ.

ಇಂದು ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿ ಅರ್ಧಶತಕದ ಜೊತೆಯಾಟ ಆಡಿದರು. ಆದರೆ, ರೋಹಿತ್ 26 ರನ್‌ಗೆ ಔಟ್ ಆದರು.

ಶುಭ್ಮನ್ ಗಿಲ್ ಟೆಸ್ಟ್​ ಕ್ರಿಕೆಟ್​ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ 101 ಎಸೆತಗಳಲ್ಲಿ 50 ರನ್​ ಗಳಿಸಿದ್ದಾರೆ. ಸದ್ಯ ಕ್ರೀಸ್​ನಲ್ಲಿ ಚೇತೇಶ್ವರ್ ಪೂಜಾರ(9) ಹಾಗೂ ಅಜಿಂಕ್ಯಾ ರಹಾನೆ(5) ಇದ್ದು ನಾಳೆ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ತಂಡ ಇನ್ನಿಂಗ್ಸ್‌ ಗೆಲ್ಲಲು ಇನ್ನೂ 242 ರನ್​ಗಳ ಹಿನ್ನಡೆಯಲ್ಲಿದೆ.


ಇದನ್ನೂ ಓದಿ: ಭಾರತಕ್ಕೆ ಮೊದಲ ವಿಶ್ವಕಪ್‌ ತಂದುಕೊಟ್ಟ ಕಪಿಲ್‌ದೇವ್‌: ಬರ್ತಡೇ ಸ್ಪೆಷಲ್‌ ಸ್ಟೋರಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights