ಚಾಮರಾಜನಗರ ಆಸ್ಪತ್ರೆಯೊಳಗೆ ಓಡಾಡಿದ ಚಿರತೆ : ಸಿಸಿಟಿವಿ ದೃಶ್ಯ ಕಂಡು ಮಂದಿ ಶಾಕ್!

ಕಾಡುಪ್ರಾಣಿಗಳು ನಾಡಿಗೆ ಬರುವುದು ಸಾಕು ಪ್ರಾಣಿಗಳನ್ನು ತಿನ್ನುವುದು, ದಾಳಿ ಮಾಡುವುದು ಕಾಮನ್. ಆದರೆ ಆಸ್ಪತ್ರೆಗೆ ಬಂದರೆ ಹೇಗಿರುತ್ತೆ? ಇದನ್ನ ಕಲ್ಪಿಸಿಕೊಳ್ಳುವುದಕ್ಕೂ ಭಯವಾಗುತ್ತೆ ಅಲ್ವಾ..? ಚಿರತೆಯೊಂದು ಚಾಮರಾನಗರದ ಆಸ್ಪತ್ರೆಯಲ್ಲಿ ಗಂಭೀರವಾಗಿ ನಡೆದಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನೋಡುಗರ ಎದೆ ಝಲ್ ಎಂದಿದೆ.

ಹೌದು… ಆಸ್ಪತ್ರೆ ಅಂದರೆ ರೋಗಿಗಳು ಇರುವ ಜಾಗ. ಇಲ್ಲಿ ಅನಾರೋಗ್ಯದಿಂದ ಬಳಲುವಂತವರೇ ಜಾಸ್ತಿ. ಹೀಗಿರುವಾಗ ಇದೇ ಬುಧವಾರ ರಾಜ್ಯದ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಸಿಐಎಂಎಸ್) ವೈದ್ಯರ ಕ್ವಾರ್ಟರ್ಸ್ ನೊಳಗೆ ಚಿರತೆ ಪ್ರವೇಶಿಸಿದ ದೃಶ್ಯ ನೋಡಗರ ನಿದ್ದೆಗೆಡಿಸಿದೆ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಚಿರತೆ ಸಿಐಎಂಎಸ್ ಕ್ಯಾಂಪಸ್‌ನ ಕಾರಿಡಾರ್ ಮೂಲಕ ಓಡುತ್ತಿರುವುದನ್ನು ನೋಡಬಹುದು. ಹಿಂದೆ ತಿರುಗಿ ಪ್ರದೇಶದಿಂದ ನಿರ್ಗಮಿಸುವ ಮೊದಲು ಚಿರತೆ ಕೋಣೆಯೊಳಗೆ ನೋಡುವ ದೃಶ್ಯ ನೋಡುಗರಲ್ಲಿ ನಡುಕ ಹುಟ್ಟಿಸಿದೆ.

ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್, ” ಕರ್ನಾಟಕದ ಚಾಮರಾಜನಗರ ಕಾಲೇಜು ಪರಿಶೀಲನೆಗಾಗಿ ಕಪ್ಪು ಚಿರತೆ ಬಂದಿದೆ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದರು.

ವರದಿಯ ಪ್ರಕಾರ, ಸಿಡಿಎಸ್‌ನ ಡೀನ್ ಮತ್ತು ನಿರ್ದೇಶಕ ಡಾ.ಎಂ.ಎಂ.ಸಂಜೀವ್, ಚಿರತೆ ಆಸ್ಪತ್ರೆಯ ಬಳಿ ಬಂದಿರುವುದನ್ನು ನಿರಾಕರಿಸಿದ್ದಾರೆ. ವೈದ್ಯರ ಕ್ವಾರ್ಟರ್ಸ್ ಯಾದಪುರ ಗ್ರಾಮದ ಕಾಲೇಜು ಕ್ಯಾಂಪಸ್‌ಗೆ ಹತ್ತಿರದಲ್ಲಿದೆ, ಚಾಮರಾಜನಗರದಲ್ಲಿ ಎಂಟು ಕಿಲೋಮೀಟರ್ ದೂರದಲ್ಲಿರುವ ಮುಖ್ಯ ಆಸ್ಪತ್ರೆ ಕಟ್ಟಡವಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights