ಕೋವಿಡ್ ಮಹಿಳಾ ರೋಗಿಯ ಮೇಲೆ ನರ್ಸ್ ಅತ್ಯಾಚಾರ : 24 ಗಂಟೆಗಳಲ್ಲಿ ಮಹಿಳೆ ಸಾವು!

ಕೋವಿಡ್ ಮಹಿಳಾ ರೋಗಿಯ ಮೇಲೆ ಪಾಪಿ ನರ್ಸ್ ಅತ್ಯಾಚಾರವೆಸಗಿದ್ದು 24 ಗಂಟೆಗಳಲ್ಲಿ ಮಹಿಳೆ ಸಾವನ್ನಪ್ಪಿದ ದಾರುಣ ಘಟನೆ ಭೋಪಾಲ್ ನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಭೋಪಾಲ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳಾ ಕೊರೋನವೈರಸ್ ರೋಗಿಯ ಮೇಲೆ ಪುರುಷ ದಾದಿಯೊಬ್ಬರು ಅತ್ಯಾಚಾರ ಮಾಡಿದ 24 ಗಂಟೆಗಳಲ್ಲಿ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಶಂಕಿತ ಆರೋಪಿಯನ್ನು ಬಂಧಿಸಿ ಒಂದು ತಿಂಗಳ ನಂತರ ಆಘಾತಕಾರಿ ಘಟನೆಯ ಬಗ್ಗೆ ಪೊಲೀಸರು ಬಹಿರಂಗಪಡಿಸಿದ್ದಾರೆ.

ಏಪ್ರಿಲ್ 6 ರಂದು ಭೋಪಾಲ್ ಸ್ಮಾರಕ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ದಾಖಲಾಗಿದ್ದ 43 ವರ್ಷದ ಮಹಿಳೆ ಈ ಘಟನೆಯ ಬಗ್ಗೆ ದೂರು ನೀಡಿದ್ದು, ವೈದ್ಯರಿಗೆ ನೀಡಿದ ಹೇಳಿಕೆಯಲ್ಲಿ ಆರೋಪಿಯನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರದ ಬಳಿಕ ಆಕೆಯ ಸ್ಥಿತಿ ಹದಗೆಟ್ಟಿದ್ದರಿಂದ ಆಕೆಯನ್ನು ವೆಂಟಿಲೇಟರ್‌ಗೆ ಸ್ಥಳಾಂತರಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಆದರೆ ಆಕೆ ಅದೇ ದಿನ ಸಂಜೆ ಸಾವನ್ನಪ್ಪಿದ್ದಾರೆ.

ನಿಶತ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು 40 ವರ್ಷದ ಸಂತೋಷ್ ಅಹಿರ್ವಾರ್ ಎಂದು ಗುರುತಿಸಲಾಗಿದ್ದು ಈತನನ್ನು ಬಂಧಿಸಲಾಗಿದೆ. ಆತನನ್ನು ಸದ್ಯ ಭೋಪಾಲ್ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

“ಹಿರಿಯ ಪೊಲೀಸ್ ಅಧಿಕಾರಿ ಇರ್ಷಾದ್ ವಾಲಿ ಮಾತನಾಡಿ, ಸಂತ್ರಸ್ತೆ ಪೊಲೀಸರಿಗೆ ಅತ್ಯಾಚಾರವಾದ ಬಳಿಕ ದೂರು ನೀಡಿದ್ದು, ತನ್ನ ಗುರುತನ್ನು ರಕ್ಷಿಸಬೇಕೆಂದು ಜೊತೆಗೆ ಘಟನೆಯ ಬಗ್ಗೆ ಯಾರಿಗೂ ಬಹಿರಂಗಪಡಿಸಬಾರದು ಎಂದು ಮನವಿ ಮಾಡಿದ್ದರು. ಅದಕ್ಕಾಗಿಯೇ ತನಿಖಾ ತಂಡವನ್ನು ಹೊರತುಪಡಿಸಿ ಯಾರೊಂದಿಗೂ ಮಾಹಿತಿಯನ್ನು ಹಂಚಿಕೊಳ್ಳಲಾಗಿಲ್ಲ” ಎಂದು ಅವರು ಹೇಳಿದರು.

ಆರೋಪಿ ಈ ಹಿಂದೆ ಕೆಲಸದಲ್ಲಿದ್ದಾಗ ಸಿ್ಕಾಪಟ್ಟೆ ಮದ್ಯಪಾನ ಮಾಡುತ್ತಿದ್ದು 24 ವರ್ಷದ ಸ್ಟಾಫ್ ನರ್ಸ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಮೂಲಗಳು ತಿಳಿಸಿವೆ. ಘಟನೆಯ ಬಗ್ಗೆ ಆಸ್ಪತ್ರೆಯ ಸಿಸಿಟಿವಿ ಕ್ಯಾಮಾರಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

ಸಾವನ್ನಪ್ಪಿದ ಮಹಿಳೆ 1984 ರ ಭೋಪಾಲ್ ಅನಿಲ ದುರಂತದಿಂದ ಬದುಕುಳಿದಿದ್ದರು. ಮಾತ್ರವಲ್ಲದೇ ಭೋಪಾಲ್ ಅನಿಲ ದುರಂತದಿಂದ ಬದುಕುಳಿದವರು ಸಾಮಾನ್ಯ ನಾಗರಿಕರಿಗಿಂತ ಕೋವಿಡ್-19 ನಿಂದ ಸಾಯುವ ಸಾಧ್ಯತೆ ಏಳು ಪಟ್ಟು ಹೆಚ್ಚು ಇದೆ. ಆದರೆ MHRC ಯಲ್ಲಿ ಕರೋನವೈರಸ್ ರೋಗಿಗಳ ಆರೈಕೆಯಲ್ಲಿ ಇನ್ನೂ ಹಲವಾರು ನ್ಯೂನತೆಗಳಿವೆ ಎಂದು ಆರೋಪಿಸಲಾಗುತ್ತದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights