ಟೌಕ್ಟೇ ಚಂಡಮಾರುತ : ಮುಂಬೈ, ಸೂರತ್ ವಿಮಾನ ನಿಲ್ದಾಣದ ಎಲ್ಲಾ ಕಾರ್ಯಾಚರಣೆಗಳು ಸ್ಥಗಿತ!

ಟೌಕ್ಟೇ ಚಂಡಮಾರುತದ ತೀವ್ರತೆ ಹೆಚ್ಚಾಗುತ್ತಿದ್ದರಿಂದ ಮುಂಬೈ, ಸೂರತ್ ವಿಮಾನ ನಿಲ್ದಾಣದ ಎಲ್ಲಾ ಕಾರ್ಯಾಚರಣೆಗಳು ಸ್ಥಗಿತಗೊಳಿಸಲಾಗಿದೆ.

ಟೌಕ್ಟೇ ಚಂಡಮಾರುತ ಗುಜರಾತ್ ಸಮೀಪಿಸುತ್ತಿದ್ದು ಗಾಳಿಯ ತೀವ್ರತೆ ಹೆಚ್ಚಾಗಿದೆ. ಮುಂಬೈ ವಿಮಾನ ನಿಲ್ದಾಣ ಸಂಜೆ 4 ಗಂಟೆಯವರೆಗೆ ಮತ್ತು ಸೂರತ್ ವಿಮಾನ ನಿಲ್ದಾಣ ಸಂಜೆ 6 ರವರೆಗೆ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ.

ಮುಂಬೈಗೆ ಇಂದು ಬೆಳಿಗ್ಗೆಯಿಂದ ಭಾರಿ ಮಳೆಯಿಂದಾಗಿ ಮುಂಜೈ ವಿಮಾನ ನಿಲ್ದಾಣವು ಮಧ್ಯಾಹ್ನ 2 ಗಂಟೆಯವರೆಗೆ ಸ್ಥಗಿತಗೊಂಡಿತ್ತು, ಆದರೆ ಈ ಸಮಯವನ್ನು ವಿಸ್ತರಿಸಿದೆ. ನಗರದಲ್ಲಿ ಭಾರಿ ಮಳೆ ಗಾಳಿಯ ತೀವ್ರತೆ ಹೆಚ್ಚಿರುವುದರಿಂದ ಮುಂಬೈ ವಿಮಾನ ನಿಲ್ದಾಣ ಸಂಜೆ 4 ಗಂಟೆಯವರೆಗೆ ಮತ್ತು ಸೂರತ್ ವಿಮಾನ ನಿಲ್ದಾಣವು ಸಂಜೆ 6 ರವರೆಗೆ ಎಲ್ಲಾ ಕಾರ್ಯಾಚರಣೆಗಳು ಸ್ಥಗಿತಗೊಳಿಸಲಾಗಿದೆ.

ಟೌಕ್ಟೇ ಚಂಡಮಾರುತ ಗುಜರಾತ್‌ನ ಭಾವನಗರದಲ್ಲಿ ರಾತ್ರಿ 10 ರಿಂದ ರಾತ್ರಿ 11 ರವರೆಗೆ ಭೂಕುಸಿತ ಸಂಭವಿಸುವ ಸಾಧ್ಯತೆಯಿದೆ. ಹೀಗಾಗಿ ಭೂಕುಸಿತದ ಸಾಧ್ಯತೆ ಇರುವ ಗುಜರಾತ್‌ನ ಭಾವನಗರ ಜಿಲ್ಲೆಯ ಪೊರ್ಬಂದರ್ ಮತ್ತು ಮಾಹುವಾ ನಡುವಿನ ತಗ್ಗು ಪ್ರದೇಶಗಳಿಂದ ಸುಮಾರು 25 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights