ಕುಸ್ತಿ ಚಾಂಪಿಯನ್‌ ಕೊಲೆ ಪ್ರಕರಣ: ಆರೋಪಿ ಸುಳಿವು ಕೊಟ್ಟವರಿಗೆ 01 ಲಕ್ಷ ಬಹುಮಾನ!

ಕುಸ್ತಿ ಚಾಂಪಿಯನ್‌ ಸಾಗರ್ ರಾಣಾ ಅವರ ಕೊಲೆ ಪ್ರಕರಣದ ಆರೋಪಿ ಕುಸ್ತಿಪಟು ಸುಶೀಲ್ ಕುಮಾರ್ ತಲೆ ಮರೆಸಿಕೊಂಡಿದ್ದು, ಆತನ ಸುಳಿವು ನೀಡಿದವರಿಗೆ 1 ಲಕ್ಷ ರುಪಾಯಿ ಬಹುಮಾನ ನೀಡಲಾಗುವುದು ದೆಹಲಿ ಪೊಲೀಸರು ಘೋಷಿಸಿದ್ದಾರೆ.

ದೆಹಲಿಯ ಹತ್ರಾಸಲ್ ಕ್ರೀಡಾಂಗಣದಲ್ಲಿ ಕುಸ್ತಿ ನ್ಯಾಷನಲ್‌ ಚಾಂಪಿಯನ್‌ ಆಗಿದ್ದ ಸಾಗರ್ ರಾಣಾ ಅವರನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಸುಶೀಲ್‌ ಕುಮಾರ್‌ ಪರಾರಿಯಾಗಿದ್ದಾರೆ.

ಇದೀಗ ಅವರ ಬಂಧನಕ್ಕೆ ಬಲೆ ಬೀಸಿರುವ ದೆಹಲಿ ಪೊಲೀಸರು ಅವರ ಸುಳಿವು ನೀಡಿದವರಿಗೆ 1 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಈತ ಮಾತ್ರವಲ್ಲದೆ, ಮತ್ತೊರ್ವ ಆರೋಪಿ ಅಜಯ್ ನನ್ನು ಬಂಧಿಸಲು ಸಹಾಯ ಮಾಡಿದವರಿಗೆ 50 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ಹತ್ರಾಸಲ್ ಸ್ಟೇಡಿಯಂ ಪಾರ್ಕಿಂಗ್ ಪ್ರದೇಶದಲ್ಲಿ ಜಗಳವಾಡುವಾಗ ಸಾಗರ್ ರಾಣಾ ಅವರನ್ನು ಥಳಿಸಲಾಗಿತ್ತು. ಘಟನೆಯ ನಂತರ ಸುಶೀಲ್ ಕುಮಾರ್ ವಿರುದ್ಧ ಕೊಲೆ, ಅಪಹರಣ ಮತ್ತು ಕ್ರಿಮಿನಲ್ ಪಿತೂರಿಯ ಎಫ್‌ಐಆರ್ ದಾಖಲಿಸಲಾಗಿದೆ.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶೀಲ್ ಕುಮಾರ್ ಮತ್ತು ಇತರ 9 ಜನರ ವಿರುದ್ಧ ದೆಹಲಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಮೇ 4ರಂದು 97 ಕೆಜಿ ಗ್ರೀಕೋ-ರೋಮನ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಾಗರ್ ರಾಣಾ ಅವರನ್ನು ಎರಡು ಗುಂಪುಗಳು ಒಳಗೊಂಡ ಘರ್ಷಣೆಯಲ್ಲಿ ಹೊಡೆದು ಸಾಯಿಸಲಾಯಿತು. ರಾಣಾ ಮಾಜಿ ಕಿರಿಯ ರಾಷ್ಟ್ರೀಯ ಚಾಂಪಿಯನ್ ಮತ್ತು ಹಿರಿಯ ರಾಷ್ಟ್ರೀಯ ಶಿಬಿರದದಲ್ಲಿ ಭಾಗವಹಿಸಿದ್ದರು.. “ಕ್ರೀಡಾಂಗಣದ ಪಾರ್ಕಿಂಗ್ ಪ್ರದೇಶದಲ್ಲಿ ಸುಶೀಲ್ ಕುಮಾರ್, ಅಜಯ್, ಪ್ರಿನ್ಸ್ ದಲಾಲ್, ಸೋನು, ಸಾಗರ್, ಅಮಿತ್ ಮತ್ತು ಇತರರ ನಡುವೆ ಜಗಳ ನಡೆದಿದೆ ಎಂದು ತನಿಖೆಯ ಸಮಯದಲ್ಲಿ ನಮಗೆ ತಿಳಿದುಬಂದಿದೆ ಎಂದು ಪೋಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ನಾರದ ಪ್ರಕರಣ: ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಧನ ಏಕಿಲ್ಲ: ಪತ್ರಕರ್ತ ಪ್ರಶ್ನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights