ಕೊರೊನಾಗೆ ಮಗ ಬಲಿ; ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಕಣ್ಣೀರು ಹಾಕಿ ಯುವಕರಲ್ಲಿ ಮನವಿ ಮಾಡಿದ ಎಎಸ್‌ಐ!

ತಮ್ಮಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಇರುತ್ತದೆ ಎಂಬ ಕಾರಣಕ್ಕೆ ಅನಗತ್ಯವಾಗಿ ಎಲ್ಲೆಂದರಲ್ಲಿ ಓಡಾಡಬೇಡಿ. ಓವರ್‌ ಕಾನ್ಫಿಡೆಂಟ್‌ನಿಂದ ಕೊರೊನಾಗೆ ಬಲಿಯಾಗಬೇಡಿ ಎಂದು ಮಂಗಳೂರಿನ ಟ್ರಾಫಿಕ್‌ ಪೊಲೀಸ್‌ ಎಎಸ್‌ಐ ದೊಂಬಯ್ಯ ಅವರು ಕಣ್ಣೀರು ಹಾಕಿ ಯುವಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

“ಕೆಲವೇ ದಿನಗಳ ಹಿಂದೆ ನನ್ನ ಅಣ್ಣನ ಮಗ ಕೊರೊನಾಗೆ ಬಲಿಯಾದ. ಆತನಿಗೆ 32 ವರ್ಷ, ಇಂಜಿನಿಯರ್ ವೃತ್ತಿಯಲ್ಲಿರುವ ಅವನು ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಎರಡು ತಿಂಗಳ ಹಿಂದೆಯಷ್ಟೇ ಆತನಿಗೆ ಮದುವೆಯಾಗಿತ್ತು. ಆದರೆ, ಆತ ಕೊರೊನಾದಿಂದ ಸಾವನ್ನಪ್ಪಿದ” ಎಂದು ತಮ್ಮ ದುಃಖವನ್ನು ಯುವಕರಿಗೆ ವಿವರಿಸಿ  ಮನೆಯಿಂದ ಹೊರಗೆ ಬರದಂತೆ ಮನವಿ ಮಾಡಿದ್ದಾರೆ.

“ತಾನು ಯುವಕ ನನಗೇನೂ ಆಗುವುದಿಲ್ಲ, ರೋಗ ನಿರೋಧಕ ಶಕ್ತಿ ನನ್ನಲ್ಲಿ ಹೆಚ್ಚಿದೆ ಎನ್ನುವ ಅತಿಯಾದ ಆತ್ಮವಿಶ್ವಾಸ ಅವನನ್ನು ಬಲಿ ಪಡೆದುಕೊಂಡಿತು. ಹಾಗಾಗಿ, ನೀವ್ಯಾರೂ ಸುಮ್ಮನೆ ಹೊರಗ ಬರಬೇಡಿ”ಎಂದು ಎಎಸ್‌ಐ ದೇವಾಡಿಗ, ಚೆಕ್ ಪೋಸ್ಟ್ ನಲ್ಲಿ ವಾಹನ ಸವಾರರಿಗೆ ಕಂಬನಿ ಸುರಿಸುತ್ತಾ ವಿನಂತಿಸಿಕೊಳ್ಳುತ್ತಿದ್ದಾರೆ.

ಇವರ ಅಣ್ಣನ ಮಗ ಇತ್ತೀಚೆಗೆ ಮಂಗಳೂರಿಗೆ ಬಂದಿದ್ದರು. ಕೋವಿಡ್ ದೃಢಪಟ್ಟ ನಂತರ, ಉಸಿರಾಟದ ತೊಂದರೆ ಎದುರಾಯಿತು. ಇವರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿಸಿತ್ತು. ಎರಡು ದಿನಗಳ ಕೆಳಗಷ್ಟೇ ಇವರು ಮೃತ ಪಟ್ಟಿದ್ದರು.

ಎಎಸ್‌ಐ ದೊಂಬಯ್ಯ ದೇವಾಡಿಗ ಅವರ ಸೇವಾ ಅವಧಿ ಮುಗಿಯಲು ಇನ್ನೇನು ಕೆಲವು ತಿಂಗಳು ಮಾತ್ರ ಬಾಕಿ ಉಳಿದಿದೆ. ಕುಟುಂಬದ ಸಾವಿನಿಂದ ಕಂಗೆಟ್ಟಿದ್ದರೂ ದೇವಾಡಿಗ, ಕೆಲಸಕ್ಕೆ ಹಾಜರಾಗಿ ಯುವ ಸವಾರರಲ್ಲಿ ತಮ್ಮದೇ ಕುಟುಂಬದ ನೋವಿನ ಕಥೆಯನ್ನು ಹೇಳಿ ವಿನಂತಿಸಿಕೊಳ್ಳುತ್ತಿದ್ದಾರೆ.

Read Also: ಭೀಕರ ಬ್ಲಾಕ್‌ ಫಂಗಸ್‌ಗೆ 7000 ಕೊರೊನಾ ಸೋಂಕಿತರು ಬಲಿ: ಏಮ್ಸ್‌ ನಿರ್ದೇಶಕ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights