ಮೋದಿ ವಿರುದ್ದ ರಾಹುಲ್‌ಗಾಂಧಿಯ ಭಾಷೆ ಕಾಂಗ್ರೆಸ್‌ ಟೂಲ್‌ಕಿಟ್‌ನ ಭಾಗವಾಗಿದೆ: ಬಿಜೆಪಿ

ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್‌  ನಾಯಕ ರಾಹುಲ್‌ಗಾಂಧಿ ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ರಾಹುಲ್‌ಗಾಂಧಿ ಬಳಸುತ್ತಿರುವ ಭಾಷೆಯು ದೇಶದಲ್ಲಿ ಭಯವನ್ನು ಸೃಷ್ಟಿಸಲು ಯತ್ನಿಸುತ್ತಿರುವಂತಿದೆ. ಇದು ಕಾಂಗ್ರೆಸ್‌ ಪಕ್ಷ ನಿರ್ಮಿಸಿರುವ ಟೂಲ್‌ಕಿಟ್‌ನ ಭಾಗವಾಗಿದೆ ಎಂದು ದೃಢಪಡಿಸಿದೆ ಎಂದು ಹೇಳಿದೆ.

ಕೊರೊನಾ ನಿಯಂತ್ರಣಕ್ಕಾಗಿ ಮೋದಿಯವರು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ರಾಹುಲ್‌ಗಾಂಧಿ ಅವರು ಪ್ರಧಾನಿಯನ್ನು “ನೌಟಂಕಿ” ಎಂದು ಕರೆದಿದ್ದಾರೆ. ಇಂತಹ ಭಾಷೆಯ ಬಳಕೆಯು ಕಾಂಗ್ರೆಸ್‌ ಟೂಲ್‌ಕಿಟ್‌ನಲ್ಲಿರುವ ಪದವಾಗಿದೆ ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ಪ್ರಕಾಶ್‌ ಜಾವ್ಡೇಕರ್‌ ಹೇಳಿದ್ದಾರೆ.

ಕಾಂಗ್ರೆಸ್‌ನವರು ಟೂಲ್‌ಕಿಟ್‌ ತಯಾರಿಸಿದ್ದಾರೆ ಎಂದು ಸ್ಪಷ್ಟವಾಗಿದೆ. ಅದು ದೃಢಪಟ್ಟಿದೆ. ಇದನ್ನೂ ಸಾಬೀತು ಪಡಿಸಲು ಯಾವುದೇ ಪುರಾವೆಗಳ ಅಗತ್ಯವಿಲ್ಲ. ನೀವು ಯಾವ ರೀತಿಯ ಭಾಷೆಯನ್ನು ಬಳಸುತ್ತಿದ್ದೀರಿ, ನೀವು ಜನರಲ್ಲಿ ಗೊಂದಲ ಮತ್ತು ಭಯವನ್ನು ಹುಟ್ಟು ಹಾಕಲು ಪ್ರಯತ್ನಿಸುತ್ತಿದ್ದೀರಿ. ಇದು ಟೂಲ್‌ಕಿಟ್‌ ರಾಜಕೀಯದ ಭಾಗವಾಗಿದೆ ಎಂದು ಜಾವಡೇಕರ್‌ ಆರೋಪಿಸಿದ್ದಾರೆ.

ಇಲ್ಲಿಯವರೆಗೆ 20 ಕೋಟಿ ಡೋಸ್‌ಗಳನ್ನು ನೀಡಲಾಗುತ್ತಿದೆ. ಇದರಿಂದಾಗಿ ಭಾರತವು ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಆಗಸ್ಟ್‌ನಿಂದ ವ್ಯಾಕ್ಸಿನೇಷನ್ ದೊಡ್ಡ ಜಿಗಿತವನ್ನು ಕಾಣಲಿದೆ. ಡಿಸೆಂಬರ್ ವೇಳೆಗೆ 216 ಕೋಟಿ ಡೋಸ್‌ಗಳನ್ನು ಉತ್ಪಾದಿಸಲಾಗುವುದು ಮತ್ತು 108 ಕೋಟಿ ಜನರಿಗೆ ಲಸಿಕೆ ನೀಡಲಾಗುವುದು ಎಂದು ಸಚಿವಾಲಯ ಮಾರ್ಗಸೂಚಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಕೊವಾಕ್ಸಿನ್ ಅನ್ನು ಸ್ಥಳೀಯವಾಗಿ ಉತ್ಪಾದಿಸಿದಾಗ, ಕಾಂಗ್ರೆಸ್ ನಾಯಕರು ಅದರ ಸುರಕ್ಷತೆಯ ಬಗ್ಗೆ ಅನುಮಾನಗಳನ್ನು ಸೃಷ್ಟಿಸಿದ್ದರು. ಈಗ ವ್ಯಾಕ್ಸಿನೇಷನ್‌ ವಿಚಾರದಲ್ಲಿ ಜನರಲ್ಲಿ ಗೊಂದಲವನ್ನು ಸೃಷ್ಟಿಸಲು ಕಾಂಗ್ರೆಸ್‌ ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ವಂಚನೆ ಆರೋಪಿ ವಜ್ರ ವ್ಯಾಪಾರಿ ಚೋಕ್ಸಿ; ಭಾರತಕ್ಕೆ ನೇರ ಹಸ್ತಾಂತರ ಸಾಧ್ಯವಿಲ್ಲ: ಡೊಮಿನಿಕಾ ಪ್ರಧಾನಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights