ಡ್ರಗ್ಸ್‌ ಪ್ರಕರಣ: ನಟ ಸುಶಾಂತ್ ಸಿಂಗ್ ರಜಪೂತ್ ಸ್ನೇಹಿತ ಸಿದ್ಧಾರ್ಥ್ ಪಿಥಾನಿ ಬಂಧನ!

ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸುಶಾಂತ್ ಸಿಂಗ್ ರಜಪೂತ್ ಅವರ ರೂಮ್‌ಮೇಟ್ ಸಿದ್ಧಾರ್ಥ್ ಪಿಥಾನಿ ಅವರನ್ನು ಹೈದರಾಬಾದ್ ನಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧಿಸಿದೆ.

ಜೂನ್ 14 ರಂದು ಮುಂಬೈನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರು ಮುಂಬೈನಲ್ಲಿದ್ದ ತಮ್ಮ ಕೋಣೆಯಲ್ಲಿ ಸಾವನ್ನಪ್ಪಿದ್ದರು. ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಆ ವೇಳೆ ಸ್ಥಳದಲ್ಲಿದ್ದ ನಾಲ್ವರಲ್ಲಿ ಸಿದ್ಧಾರ್ಥ್ ಪಿಥಾನಿಯೂ ಒಬ್ಬರಾಗಿದ್ದು, ಅವರನ್ನು ಶುಕ್ರವಾರ ಬೆಳಿಗ್ಗೆ ಎನ್‌ಸಿಬಿ ಬಂಧಿಸಿದೆ ಎಂದು ವರದಿಯಾಗಿದೆ.

ಪಿಥಾನಿ ಅವರು ರಜಪೂತ್ ಸಾಯುವ ಮೊದಲು ಸುಮಾರು ಒಂದು ವರ್ಷ ಅವರೊಂದಿಗೆ ವಾಸಿಸಿದ್ದರು. ನಟನ ಸಾವಿನ ಬಳಿಕ ಪಿಥಾನಿ ಮಾಡಿದ್ದ ಆರೋಪಗಳು ಮಾಧ್ಯಮಗಳಲ್ಲಿ ಹಲವು ಊಹಾಪೋಹಕ್ಕೆ ಕಾರಣವಾಗಿತ್ತು. ಪಿಥಾನಿ ಅವರನ್ನೂ ಮುಂಬೈ ಪೊಲೀಸರು ಹಾಗೂ ಸಿಬಿಐ ಹಲವು ಬಾರಿ ಪ್ರಶ್ನಿಸಿತ್ತು.

ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯ ವೇಳೆ ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿ ಹಾಗೂ ಅವರ ಸಹೋದರ ಶೋಯಿಕ್ ಸೇರಿದಂತೆ ಅನೇಕರ ವಿರುದ್ಧ ಡ್ರಗ್ಸ್ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ: ರಿಪಬ್ಲಿಕ್‌ ಟಿವಿ ವಿರುದ್ಧ 200 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸುಶಾಂತ್‌ ಸ್ನೇಹಿತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights