ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಕಿರುತೆರೆ ನಟ ಸೇರಿ ಆರು ಜನರ ಬಂಧನ!

ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟ ಸೇರಿ 6 ಮಂದಿ ಆರೋಪಿಗಳನ್ನು ಮುಂಬೈ ವಾಲಿವ್ ಪೊಲೀಸರು ಬಂಧಿಸಿದ್ದಾರೆ.

ನಾಗಿಣಿ-3, ಬ್ರಹ್ಮರಾಕ್ಷಸ್-2 ಮುಂತಾದ ಧಾರವಾಹಿಗಳನ್ನು ನಟಿಸಿದ್ದ ಪರ್ವ್ ವಿ. ಪುರಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ.

ಕಾರಿನಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ ನಂತರ ನಟ ಸೇರಿದಂತೆ ಇತರರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ನೀಡಿದ ದೂರಿನ ಅನ್ವಯ ಮುಂಬೈನ ವಾಲಿವ್ ಪೊಲೀಸ್ ಪರ್ವ್ ವಿ ಪುರಿ ಸೇರಿದಂತೆ 6ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ದಿಲ್ ಕಿ ನಸರ್ ಸೆ ಖೂಬ್ ಸೂರತ್ ಧಾರವಾಹಿ ಮೂಲಕ 2013ರಲ್ಲಿ ಕಿರುತೆರೆ ಕಾಲಿಟ್ಟ ಪರ್ವ್ ವಿ ಪುರಿ, ಫಿರ್ ಬಿ ನಾ ಮಾನೆ ಮೂಲಕ ಜನಪ್ರಿಯತೆ ಪಡೆದಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights