ಸಂಸತ್‌ನಲ್ಲಿ ಸುಳ್ಳು ಹೇಳಿದ್ರಾ ನುಸ್ರತ್​ ಜಹಾನ್; ಪ್ರಮಾಣ ವಚನದ ವಿಡಿಯೋ ಹರಿಬಿಟ್ಟ ಬಿಜೆಪಿ!

ಟಿಎಂಸಿಯ ಸ್ಟಾರ್​ ಸಂಸದೆ ನುಸ್ರತ್ ಜಹಾನ್ ಅವರು​​ 2019ರಲ್ಲಿ ಉದ್ಯಮಿ ನಿಖಿಲ್​ ಜೈನ್​ ಅವರನ್ನು ಟರ್ಕಿಯಲ್ಲಿ ಮದುಯಾಗಿದ್ದರು. ಇದೀಗ ಟರ್ಕಿ ಕಾನೂನು ಪ್ರಕಾರ ಆಗಿರುವ ತಮ್ಮ ಮದುವೆ ಭಾರತದ ಕಾನೂನಿನ ಪ್ರಕಾರ ಮಾನ್ಯವಲ್ಲ. ನಾವು ಲಿವಿಂಗ್​ ಇನ್​ ರಿಲೇಷನ್​ ಶಿಪ್​ನಲ್ಲಿದ್ದೇವು ಎಂದು ತಿಳಿಸಿದ್ದಾರೆ.

ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಅಮಿತ್​ ಮಾಳ್ವಿಯಾ, ನುಸ್ರತ್‌ ಜಹಾನ್ ಸಂಸದೆಯಾಗಿ ಆಯ್ಕೆಯಾದ ಸಂದರ್ಭದಲ್ಲಿ ಸಂಸತ್‌ನಲ್ಲಿ ತಮ್ಮನ್ನು ನುಸ್ರತ್​ ಜಹಾನ್ ನಿಖಿಲ್​ ಜೈನ್ ಎಂದು ಪರಿಚಯ ಮಾಡಿಕೊಂಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದು, ಸಂಸತ್‌ನಲ್ಲಿ ನುಸ್ರತ್‌ ಸುಳ್ಳು ಹೇಳಿದ್ರಾ ಎಂದು ಪ್ರಶ್ನಿಸಿದ್ದಾರೆ.

ಬಸ್ರಿಹತ್​ ಕ್ಷೇತ್ರದ ಸಂಸದೆಯಾಗಿ ಆಯ್ಕೆಯಾದ ನುಸ್ರತ್​ ತಮ್ಮ ಪ್ರಮಾಣವಚನ ಸ್ವೀಕಾರದ ವೇಳೆ ತಮ್ಮನ್ನು ನುಸ್ರತ್​ ಜಹಾನ್ ನಿಖಿಲ್​ ಜೈನ್ ಎಂದು ಪರಿಚಯಿಸಿಕೊಂಡಿದ್ದರು. ಅಲ್ಲದೆಮ ಈ ವೇಳೆ ಸಿಂಧೂರ ಇಟ್ಟು ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೂ ಗುರಿಯಾಗಿದ್ದರು. ಇವರ ಅಂತರ ಧರ್ಮೀಯ ವಿವಾಹ ಸಾಕಷ್ಟು ಸುದ್ದಿ ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ನುಸ್ರತ್, ನಮ್ಮ ಪ್ರೀತಿ ಧರ್ಮವನ್ನು ಮೀರಿದ್ದು. ತಾನು ಮುಸ್ಲಿಮ್​ ಆದರೂ ಎಲ್ಲಾ ಧರ್ಮಕ್ಕೂ ತಲೆಬಾಗುತ್ತೇನೆ ಎಂದು ಕೂಡ ತಿಳಿಸಿದ್ದರು.

ಆದರೆ, ಕಳೆದ ನವಂಬರ್​ನಲ್ಲಿ ಈ ದಂಪತಿ ದೂರಾಗಿದ್ದಾರೆ. ನಮ್ಮ ಮದುವೆ ವಿಶೇಷ ವಿವಾಹ ಕಾಯ್ದೆ ಅಡಿ ಬರಲಿದ್ದು, ಭಾರತದಲ್ಲಿ ಇದಕ್ಕೆ ಮಾನ್ಯತೆ ಇಲ್ಲ. ಕಾನೂನಿನ ಪ್ರಕಾರ ಅದು ಮದುವೆಯೇ ಅಲ್ಲ, ಆದರೆ, ನಾವು ಲೀವಿಂಗ್​ ರಿಲೇಷನ್​ಶಿಪ್‌ನಲ್ಲಿ ಇದ್ದೆವು ಎಂದು ನುಸ್ರತ್‌ ಹೇಳಿದ್ದಾರೆ.

ಇದನ್ನೂ ಓದಿ: ಜಿತಿನ್ ಪ್ರಸಾದರನ್ನು ಕಸಿದುಕೊಂಡ ಬಿಜೆಪಿ; ಕಾಂಗ್ರೆಸ್‌ ಮುಕ್ತವಾಗುತ್ತಾ ಉತ್ತರ ಪ್ರದೇಶ?!

Spread the love

Leave a Reply

Your email address will not be published. Required fields are marked *