Fact Check: ಹಾವು ವಿಚಿತ್ರವಾಗಿ ಕಿರುಚುವ ವೀಡಿಯೊಗೂ ಕರೀಂನಗರಕ್ಕೂ ಯಾವುದೇ ಸಂಬಂಧವಿಲ್ಲ..!

ತೆಲಂಗಾಣದ ಕರೀಂನಗರ ಜಿಲ್ಲೆಯ ವೆಲಿಚಲ ಗ್ರಾಮದಲ್ಲಿ ಹಾವು ಬಾಯಿ ತೆರೆದಾಗ ವಿಚಿತ್ರ ಶಬ್ದ ಮಾಡುತ್ತಿತ್ತು. ಆ ಹಾವನ್ನು ಹಿಡಿಯಬೇಕು ಮತ್ತು ಇಂತಹ ಹಾವುಗಳು ಇನ್ನೂ ಎಷ್ಟಿವೆ ಎಂದು ಕಂಡುಹಿಡಿಬೇಕು ಎಂದು ಸ್ಥಳೀಯರು ಅರಣ್ಯ ಅಧಿಕಾರಿಗಳಿಗೆ ಎಂದು ಹೇಳುವ ಪೋಸ್ಟ್‌ನೊಂದಿಗಿನ ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ಕರೀಂನಗರದಲ್ಲಿ ಹಾವು ವಿಚಿತ್ರ ಶಬ್ದ ಮಾಡುವ ವಿಡಿಯೋ.

ಸತ್ಯ: ಈ ವೀಡಿಯೊಗೂ ಕರೀಂನಗರಕ್ಕೂ ಯಾವುದೇ ಸಂಬಂಧವಿಲ್ಲ. ವೀಡಿಯೊವನ್ನು ಒಂದು ತಿಂಗಳ ಹಿಂದೆಯೇ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದೆ. ಕರೀಂನಗರದ ವೆಲಿಚಲದಲ್ಲಿ ನಡೆದ ಘಟನೆಯೆಂದು ತಿಡಿಗೇಡಿಯೊಬ್ಬರು ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ತಪ್ಪಾಗಿ ಹಂಚಿಕೊಂಡಿದ್ದಾರೆ ಎಂದು ಸುದ್ದಿ ಪ್ರಕಟಿಸಲಾಗಿದೆ ಮತ್ತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಇಮೇಜ್ ಮೂಲಕ ಸರ್ಚ್ ಮಾಡಿದಾಗ, ಅದೇ ವೀಡಿಯೊವನ್ನು ನಾವು 5 ಮೇ 2021 ರಂದು ಮೈಕ್ ಮಾರ್ಟಿನ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋ ದೊರೆತಿದೆ. ಅವರು ‘ಹಾಗ್ನೋಸ್ ಹೆಚ್ಚಿನ ಶಬ್ದ ಮಾಡುತ್ತದೆ’ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ.

ಈ ವೀಡಿಯೊವನ್ನು ಆಧರಿಸಿ, ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ಇನ್ನೂ ಕೆಲವು ಹಾಗ್ನೋಸ್ ಹಾವಿನ ವೀಡಿಯೊಗಳನ್ನು (ಇಲ್ಲಿ ಮತ್ತು ಇಲ್ಲಿ) ನಾವು ಕಂಡುಕೊಂಡಿದ್ದೇವೆ ಮತ್ತು ಈ ವೀಡಿಯೊಗಳಲ್ಲಿ ಹಾವು ಯಾವುದೇ ಶಬ್ದ ಮಾಡಲಿಲ್ಲ ಎಂದು ನೋಡಬಹುದು. ಹಾಗ್ನೋಸ್ ಯುಎಸ್ಎ ಮತ್ತು ಕೆನಡಾದಂತಹ ಉತ್ತರ ಅಮೆರಿಕಾದ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಲೇಖನಗಳ ಪ್ರಕಾರ ಇವು ವಿಷಕಾರಿಯಲ್ಲದ ಹಾವುಗಳು (ಇಲ್ಲಿ ಮತ್ತು ಇಲ್ಲಿ). ಹಾಗ್ನೋಸ್ ಹಾವುಗಳಿಗೆ ಬೆದರಿಕೆ ಹಾಕಿದಾಗ, ಅವು ಜೋರಾಗಿ ಮತ್ತು ಕುತ್ತಿಗೆಯನ್ನು ಕೋಬ್ರಾಗಳಂತೆ ಹರಡುತ್ತಾವೆ. ಇದರ ಪರಿಣಾಮವಾಗಿ “ಪಫ್ ಆಡ್ರ್” ಅಥವಾ “ಸ್ಪ್ರೆಡಿಂಗ್ ಆಡ್ರ್” ಎಂಬ ಅಡ್ಡಹೆಸರುಗಳು ಉಂಟಾಗುತ್ತವೆ ಎಂದು ಈ ವೆಬ್‌ಸೈಟ್ ತಿಳಿಸಿದೆ.

ಕರೀಂನಗರದಲ್ಲಿ ನಡೆದ ಘಟನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನಡೆದ ಈ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ, ಎಸ್‌ಐ (ಸಬ್ ಇನ್ಸ್‌ಪೆಕ್ಟರ್) ವಿವೇಕ್ ಈ ವಿಡಿಯೋ ಕರೀಂನಗರಕ್ಕೆ ಸಂಬಂಧಿಸಿಲ್ಲ. ಕೆಲವು ತಿಳಿಗೇಡಿಗಳು ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಆತನ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿರುವುದಾಗಿ ಟಿವಿ 9 ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಹಾವು ಕಿರುಚುವ ಈ ವೀಡಿಯೊಗೂ ಕರೀಂನಗರಕ್ಕೂ ಯಾವುದೇ ಸಂಬಂಧವಿಲ್ಲ.

ಇದನ್ನೂ ಓದಿ: ಮಧ್ಯಪ್ರದೇಶ: ಆನ್‌ಲೈನ್‌ನಲ್ಲಿ ಭಾವನಾತ್ಮಕ ಪತ್ರ ಬರೆದು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights